ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

'ಸಾಧು' ಶೆಟ್ಟರ್ ಬಗ್ಗೆ ಯಡಿಯೂರಪ್ಪ ಅಸಮಾಧಾನ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    yeddyurappa-gets-irritated-by-jagadish-shettar-softness
    ಬೆಂಗಳೂರು, ಜುಲೈ 5: ಅತ್ತ ಬ್ರಹ್ಮನ ಸೃಷ್ಟಿ ರಹಸ್ಯ ಬಯಲಾಗಿದೆ. ಆದರೆ ಬಿಜೆಪಿ ವರಿಷ್ಠರ ಒಳಾಂತರ್ಯ ಏನೆಂಬುದು ಹತ್ತು ತಿಂಗಳಾದರೂ ಇನ್ನೂ ಬಯಲಾಗಿಲ್ಲ. ಇದರಿಂದ ರಾಜಕೀಯವಾಗಿ ರಾಜ್ಯ ಮಾನ ಮರ್ಯಾದೆ ಮಾತ್ರ ಬಟಾಬಯಲಾಗಿದೆ.

    ಜಗದೀಶ್ ಶೆಟ್ಟರ್ ಇನ್ನೇನು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಿನ್ನೆ ರಾತ್ರಿ ಸವಿ ನಿದ್ದೆಗೆ ಜಾರಿದ್ವದರನ್ನು ಆಘಾತಕಾರಿ ಸುದ್ದಿಯೊಂದು ಗುರುವಾರ ಬೆಳಗ್ಗೆ ಬಡಿದೆಬ್ಬಿಸಿದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುವ proposal ಆಷಾಢದ ದೆವ್ವದ ಗಾಳಿಗೆ ಸಿಕ್ಕಿ ಗೋತಾ ಹೊಡೆಯಿತಂತೆ ಎಂಬುದೇ ಸದ್ಯದ ಸುದ್ದಿ.

    ಬಿಜೆಪಿ ವರಿಷ್ಠರ ಎದುರು ತಮ್ಮ ಬಣದ ಮುಖ್ಯಮಂತ್ರಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ತಮ್ಮ ವಾದವನ್ನು ಬಲವಾಗಿ ಮಂಡಿಸದೆ, ವರಿಷ್ಠರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ಬದ್ಧ ಎಂದು ಸಲೀಸಾಗಿ ಒಪ್ಪಿಕೊಂಡುಬಂದಿರುವುದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.

    ನವದೆಹಲಿಯಲ್ಲಿ ಸದಾನಂದ ಗೌಡ ಮತ್ತಿ ಈಶ್ವರಪ್ಪ ಜತೆ ಒಂದೇ ಕಾರಿನಲ್ಲಿ ಪ್ರಯಾಣ ಮಾಡಿರುವುದು ಸೇರಿದಂತೆ ಶೆಟ್ಟರ್ 'ಸಾಧು'ವಾಗಿ ನಡೆದುಕೊಂಡಿರುವ ಬಗ್ಗೆ angry bird ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ.

    ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿ, ಹೈಕಮಾಂಡ್ ಎದುರು ಸದಾನಂದ ಗೌಡರ ವರ್ತನೆಯ ವಿರುದ್ಧ ಖಡಕ್ಕಾಗಿ ಮಾತನಾಡದೆ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಒಪ್ಪಿಕೊಂಡು ಬಂದಿರುವುದು ಸರಿಯಲ್ಲ.

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇಬೇಕು. ನಾನೇ ಮುಖ್ಯಮಂತ್ರಿಯಾಗಬೇಕು ಎಂದು ಖಡಾಖಂಡಿತವಾಗಿ ಶೆಟ್ಟರ್ ಹೇಳಬೇಕಿತ್ತು. ಆದರೆ ಅವರು ಆ ಕೆಲಸವನ್ನು ಮಾಡಲಿಲ್ಲ ಎಂದು ಯಡಿಯೂರಪ್ಪ ತಮ್ಮ ಅತೃಪ್ತಿ ಹೊರಹಾಕಿದ್ದಾರೆ ಎನ್ನಲಾಗಿದೆ.

    ಸದ್ಯಕ್ಕೆ ಬಿಜೆಪಿ ಬಿಕ್ಕಟ್ಟು ನಿವಾರಿಸುವ ಹೊಣೆ ಅರುಣ್ ಜೇಟ್ಲಿ ಅವರ ಹೆಗಲೇರಿದೆ. ಈ ವಾರಾಂತ್ಯದೊಳಗೆ ಹೈಕಮಾಂಡ್ ಸ್ಪಷ್ಟ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka BJP crisis: Jagadish Shettar CM proposal hits road block. Angry bird BS Yeddyurappa gets irritated by Jagadish Shettar softness.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more