ವಿಶ್ವೇಶ್ವರಯ್ಯ ಟವರ್ ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮೃತವ್ಯಕ್ತಿಯನ್ನು ಚಾಮರಾಜಪೇಟೆಯ ರಾಘವೇಂದ್ರ ಬ್ಲಾಕಿನ ನಿವಾಸಿ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. 35 ವರ್ಷ ವಯಸ್ಸಿನ ನರಸಿಂಹ ಮೂರ್ತಿ ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆ ನಂತರ ಕಾವಲುಗಾರರ ಕಣ್ತಪ್ಪಿಸಿ ವಿಶ್ವೇಶ್ವರಯ್ಯ ಗೋಪುರದ 22ನೇ ಮಹಡಿ ತಲುಪಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆಗೆ ವಿವಿ ಟವರ್ ಕಟ್ಟಡವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬುದು ತಿಳಿದು ಬಂದಿಲ್ಲ.
ಚಾಮರಾಜಪೇಟೆಯಲ್ಲಿ ಸ್ಟೀಲ್ ಅಂಗಡಿಯೊಂದರಲ್ಲಿ ನರಸಿಂಹ ಮೂರ್ತಿ ಅವರು ಸಾಲ ಮಾಡಿದ್ದರು. ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಇತ್ತೀಚೆಗೆ ನರಸಿಂಹಮೂರ್ತಿಗೆ ಅಪಘಾತವಾಗಿ ಕಾಲಿಗೆ ಪೆಟ್ಟಾಗಿತ್ತು. ಇದೇ ಕಾರಣವೊಡ್ಡಿ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಕೆಲಸ ಕಳೆದುಕೊಂಡಿದ್ದ ಮೂರ್ತಿ ತನ್ನ ಪತ್ನಿ 9 ತಿಂಗಳ ಗರ್ಭಿಣಿ ಚೊಚ್ಚಲ ಹೆರಿಗೆ, ಬಸುರಿ ಬಯಕೆ ತೀರಿಸಲು ಅಸಮರ್ಥನಾದೆ ಎಂಬ ಕೊರಗು ಆತನನ್ನ ಕಾಡುತ್ತಿತ್ತು ಎನ್ನಲಾಗಿದೆ.
ನರಸಿಂಹ ಮೂರ್ತಿ ಅವರ ಆತ್ಮಹತ್ಯೆ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ ಪೆಕ್ಟರ್ ಬದ್ರಿನಾಥ್ ಹೇಳಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ ಹೇಳಿದ್ದಾರೆ.
ಕಟ್ಟಡ ಕುಸಿತ ಪ್ರಕರಣ: ಮಹದೇವಪುರದ ಬಳಿ ಗರುಡಾಚಾರ್ ಪಾಳ್ಯದಲ್ಲಿ ಬುಧವಾರ(ಜು.4) ನಿರ್ಮಾಣ ಹಂತದ ಕಟ್ಟಡ ಕುಸಿತದಿಂದ ಓರ್ವ ಸಾವನ್ನಪ್ಪಿದ ಘಟನೆ ನಡೆದಿತ್ತು. ಗುರುವಾರದಂದು ಈ ಕಟ್ಟಡ ಅವಶೇಷಗಳಡಿಯಲ್ಲಿದ್ದ ಸಾಬಣ್ಣ ಎಂಬ ಕಾರ್ಮಿಕ ಶವವನ್ನು ಹೊರ ತೆಗೆಯಲಾಗಿದೆ.
ಬುಧವಾರದಂದು ಕಟ್ಟಡ ಕುಸಿತದಿಂದ ಮೃತಪಟ್ಟ ವ್ಯಕ್ತಿಯನು ಗುತ್ತಿಗೆದಾರ ಮೋಹನ್ ನಾಯರ್ ಎಂದು ಗುರುತಿಸಲಾಗಿದೆ. ಐದು ತಿಂಗಳ ಮಗು ಕನಕಶ್ರೀ, ಮಹಾಲಕ್ಷ್ಮಿ, ಭಾಗ್ಯಮ್ಮ(7) ಸೇರಿದಂತೆ ಮೂವರು ಮಕ್ಕಳನ್ನು ರಕ್ಷಿಸಲಾಗಿದೆ. ಕಟ್ಟಡದ ಮಾಲೀಕ ಮಂಜುನಾಥ್ ನಾಯಕ್ ನಾಪತ್ತೆಯಾಗಿದ್ದಾನೆ.
ಕಟ್ಟಡ ನೆಲಸಮಗೊಳಿಸಿ ಶೇ 80 ರಷ್ಟು ಅವಶೇಷಗಳ ತೆರವು ಕಾರ್ಯಾಚರಣೆ ಮುಗಿದಿದ್ದು, ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರೆದಿದೆ. ವಾಚ್ ಮನ್ ನಾಪತ್ತೆಯಾಗಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾನೋ ಅಥವಾ ಇಲ್ಲವೋ ಇನ್ನೂ ತಿಳಿದು ಬಂದಿಲ್ಲ ಎಂದು ಡಿಸಿಪಿ ಕೃಷ್ಣಭಟ್ ಹೇಳಿದ್ದಾರೆ.
ಮಂಜುನಾಥ್ ನಾಯಕ್ ಎಂಬುವರು ಮೂರು ಅಂತಸ್ತಿನ ವಸತಿ ಸಮುಚ್ಚಯ ನಿರ್ಮಾಣ ಮಾಡುತ್ತಿದ್ದರು. ಸುಮಾರು 5 ತಿಂಗಳಿನಿಂದ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿತ್ತು. ಕೆಳ ಮಹಡಿಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲು ಯೋಜಿಸಲಾಗಿತ್ತು. ಆದರೆ, ಈ ಕಟ್ಟಡ ನಿರ್ಮಾಣ ಅಕ್ರಮವಾಗಿದ್ದು, ಮಂಜುನಾಥ್ ನಾಯಕ್ ಅಸಲಿ ಖಾತಾ ಹೊಂದಿಲ್ಲ, ಕಟ್ಟಡ ನಿರ್ಮಾಣಕ್ಕೆ ಬೇಕಾದ ಕನಿಷ್ಠ ಪರವಾನಿಗೆ ಪಡೆದಿಲ್ಲ ಎಂದು ತಿಳಿದುಬಂದಿದೆ.
ಮಹದೇವಪುರ ಪೊಲೀಸ್ ಐಪಿಸಿ ಸೆಕ್ಷನ್ 337, 338 ಹಾಗೂ Karnataka Municipal (KMC) Act ಪ್ರಕಾರ ಮಂಜುನಾಥ್ ನಾಯಕ್ ಹಾಗೂ ಸೂಪರ್ ವೈಸರ್ ತಾಯಪ್ಪ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications