• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಯರ ಕಿಂಗ್ ಫಿಷರ್ ಆಸ್ತಿ ಮಾರಾಟ ಪ್ರಕ್ರಿಯೆ ಆರಂಭ?

By Mahesh
|
ಬೆಂಗಳೂರು, ಜು.5: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಆಸ್ತಿ ಮಾರಾಟವಾಗುತ್ತಿದೆಯೇ? ಹೀಗೊಂದು ಸುದ್ದಿ ಹಬ್ಬಿದೆ. ಇದಕ್ಕೆ ಪೂರಕವಾಗಿ ಸಾಲ ನೀಡಿದ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳು ಎಚ್ ಡಿ ಎಫ್ ಸಿ ಬ್ಯಾಂಕ್ ಅನ್ನು ರಿಕವೆರಿ ಏಜೆಂಟ್ ಆಗಿ ನೇಮಿಸಿ ವಿಮಾನಯಾನ ಸಂಸ್ಥೆಯ ಆಸ್ತಿ ಮೌಲ್ಯ ಹಾಕಲು ಹೇಳಿದೆ.

ಮೊದಲಿಗೆ ಮುಂಬೈನಲ್ಲಿರುವ ವಿಲೆ ಪರ್ಲೆ ಕಿಂಗ್ ಫಿಷರ್ ಹೌಸ್ ನಂತರ ಗೋವಾದಲ್ಲಿರುವ ವಿಲ್ಲಾಗಳು ಮಾರಾಟವಾಗುವ ಸಾಧ್ಯತೆಯಿದೆ. ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಂಗ್ ಫಿಷರ್ ಸಂಸ್ಥೆ ಬ್ಯಾಂಕುಗಳ ಯಾವುದೇ ರಿಕವೆರಿ ಪ್ರಕ್ರಿಯೆ ಆರಂಭಿಸಿಲ್ಲ. 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ನೇತೃತ್ವದ ಬ್ಯಾಂಕುಗಳು ಗುರುವಾರ (ಜು.5) ಬೆಳಗ್ಗೆ ಸಭೆ ಸೇರಿ ವಿಮಾನಯಾನ ಸಂಸ್ಥೆಯ ಸದ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಮೊದಲ ಹಂತದಲ್ಲಿ ಕಿಂಗ್ ಫಿಷರ್ ಸಂಸ್ಥೆಗೆ ಸೇರಿದ ಸುಮಾರು 135 ಕೋಟಿ ರು ಮೌಲ್ಯದ ಆಸ್ತಿ ಮೊತ್ತವನ್ನು ವಸೂಲಿ ಮಾಡಲಾಗುವುದು. ಮುಂದಿನ 15 ದಿನಗಳಲ್ಲಿ ಕಿಂಗ್ ಫಿಷರ್ ಸಂಸ್ಥೆ ಪರಿಸ್ಥಿತಿ ಸರಿ ಹೋಗದಿದ್ದರೆ ಮುಂದಿನ ಆಸ್ತಿಗಳ ಮೌಲ್ಯ ಎಣಿಕೆ, ವಸೂಲಿ ಮುಂದುವರೆಸಲಾಗುವುದು ಎನ್ನಲಾಗಿದೆ.

ಆದರೆ, ಕಿಂಗ್ ಫಿಷರ್ ಸಂಸ್ಥೆ ವಕ್ತಾರರು ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಮಾಧ್ಯಮದಲ್ಲಿ ಕೆಲ ಮಂದಿ ನಮ್ಮ ಸಂಸ್ಥೆ ವಿರುದ್ಧ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲು ಸದಾ ಕಾದು ಕೂತಿರುತ್ತಾರೆ. ಬ್ಯಾಂಕ್ ಗಳಿಂದ ನಮಗೆ ಯಾವುದೇ ರಿಕವೆರಿ ಸಂಬಂಧಿತ ನೋಟಿಸ್ ಜಾರಿಯಾಗಿಲ್ಲ ಎಂದಿದ್ದಾರೆ.

ಕಿಂಗ್ ಫಿಷರ್ ನ ಮುಂಬೈ ಹೌಸ್ ಕಚೇರಿ ಖಾಲಿಗೊಳಿಸಿ ದಿ ಕ್ಯೂಬ್ ಎನ್ನುವ ಇನ್ನೊಂದು ಕಚೇರಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಖಾಲಿ ಇರುವ ಕಚೇರಿ ಸ್ವಾದೀನಪಡಿಸಿಕೊಳ್ಳುವ ಕುರಿತು ಮಾತುಕತೆ ನಡೆದಿತ್ತು ಅಷ್ಟೇ. ಅದನ್ನು ಸಾಲ ವಸೂಲಾತಿಗೆ ಸೇರಿಸಿಕೊಳ್ಳುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕಿಂಗ್ ಫಿಷರ್ ವಕ್ತಾರರು ಹೇಳಿದ್ದಾರೆ.

ಕಿಂಗ್ ಫಿಷರ್ ಸಂಸ್ಥೆ 269.06 ಕೋಟಿ ಆದಾಯ ತೆರಿಗೆ ಹಾಗೂ 280 ಕೋಟಿ ರು ಏರ್ ಲೈನ್ಸ್ ಅಥಾರಿಟಿ ಆಫ್ ಇಂಡಿಯಾಗೆ ನೀಡಬೇಕಿದೆ. ಭಾರತದ ನಂ.2 ವಿಮಾನಯಾನ ಸಂಸ್ಥೆಯಾಗಿದ್ದ ಕಿಂಗ್ ಫಿಷರ್ ಸಂಸ್ಥೆ ನಿರಂತರವಾಗಿ ನಷ್ಟ ಅನುಭವಿಸಿದೆ.

ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ. ಯುನೈಟೆಡ್ ಬ್ರೂವೆರೀಸ್ ಸಂಸ್ಥೆ ಕಾರ್ಪೊರೇಟ್ ಗ್ಯಾರಂಟಿ ಮೊತ್ತ 1,601.43 ಕೋಟಿ ರು ದಾಟುತ್ತದೆ.

ಇದಲ್ಲದೆ ಕಿಂಗ್ ಫಿಷರ್ ಸಂಸ್ಥೆ ಸಾಲದ ಪಾವತಿಗೆ ಆಧಾರವಾಗಿ 5,238.59 ಕೋಟಿ ಹಣ ಇದ್ದು, ಕಿಂಗ್ ಫಿಷರ್ ಹೌಸ್, ಗೋವಾ ವಿಲ್ಲಾ, ಹೆಲಿಕಾಪ್ಟರ್ ಅಡವಾಗಿ ಇದಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕಿಂಗ್ ಫಿಷರ್ ಸುದ್ದಿಗಳುView All

English summary
In a major blow to the cash-strapped Kingfisher Airlines, banks on Thursday reportedly decided to launch their debt recovery process against the company. Kingfisher House in Mumbai and a villa belonging to the airline's chief, Vijay Mallya, in Goa. mortgage firm HDFC to re-value two of the properties.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more