ಮುಂಬೈನ ಅಂಧೇರಿಯಲ್ಲಿ ಕಸದ ತೊಟ್ಟಿಯಲ್ಲಿ ಸ್ಫೋಟಕ ಪತ್ತೆ

ಇನ್ಫಿನಿಟಿ ಮಾಲ್ ಬಳಿಯ ಕಸದ ತೊಟ್ಟಿಯ ಬಳಿ ಬಾಂಬ್ ಇಟ್ಟಿರುವುದು ತಿಳಿಯುತ್ತಿದ್ದಂತೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಭಯೋತ್ಪಾದನಾ ನಿಗ್ರಹ ದಳ ಬಾಂಬ್ ಇಟ್ಟಿದ್ದ ಸ್ಥಳಕ್ಕೆ ಧಾವಿಸಿತು. ಬಾಂಬ್ ನಿಷ್ಕ್ರಿಯ ದಳ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದೆ. ಸ್ಫೋಟಕವನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಇಲಾಖೆಗೆ ಕಳಿಸಲಾಗಿದೆ.
ಪೊಲೀಸರು ಇಡೀ ಪ್ರದೇಶವನ್ನು ಸುತ್ತವರಿದಿದ್ದು, ಮಾಲ್‌ನಲ್ಲಿದ್ದ ಎಲ್ಲ ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಸ್ಫೋಟಕ ಇರುವುದು ತಿಳಿಯುತ್ತಿದ್ದಂತೆ ಆ ಪ್ರದೇಶದಲ್ಲಿ ಗಲಿಬಿಲಿ ವಾತಾವರಣ ಸೃಷ್ಟಿಯಾಯಿತು. ತೀವ್ರ ಆತಂಕಕ್ಕೀಡಾದ ಜನತೆ ಕೂಡಲೆ ಆ ಸ್ಥಳದಿಂದ ದೂರ ಸರಿದರು. ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಗಿದ್ದು ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಪೊಲೀಸರು ಜನರಿಗೆ ಅಭಯ ನೀಡಿದ್ದಾರೆ.
ಸಣ್ಣ ಪ್ರಮಾಣದ ಸ್ಫೋಟಕ ದೊರೆತ ಸ್ಥಳದಲ್ಲಿ ಯಾವುದೇ ಕರಪತ್ರ ದೊರೆತಿಲ್ಲ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications