ಅಥ್ಲೀಟ್ ಪಿಂಕಿ ಲಿಂಗಪರೀಕ್ಷೆ ಎಂಎಂಎಸ್ ಔಟ್

ಮಹಿಳಾ ಅಥ್ಲೀಟ್ ಪಿಂಕಿಯನ್ನು ರೇಪ್ ಕೇಸ್ ನಲ್ಲಿ ಹೇಗೆ ಬಂಧಿಸಲು ಸಾಧ್ಯ ಎಂದು ಹುಬ್ಬೇರಿಸಿದ್ದರು. ಆದರೆ, ಆಸಲಿಗೆ ಎಲ್ಲರೂ ತಿಳಿದಿರುವಂತೆ ಪಿಂಕಿ ಹೆಣ್ಣಲ್ಲ, ಮೂಲತಃ ಗಂಡು ಎಂದು ಅತ್ಯಾಚರಕ್ಕೊಳಗಾದ ಯುವತಿ ಆರೋಪಿಸಿದ್ದಳು.
ಲಿಂಗ ಪರೀಕ್ಷೆ ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ವೈದ್ಯಕೀಯ ಮಂಡಳಿಗೆ ಪಿಂಕಿ ಗಂಡೇ ಅಥವಾ ಹೆಣ್ಣೇ ಎಂಬುದನ್ನು ಸ್ಪಷ್ಟವಾದ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ.
ಸಂಪೂರ್ಣ ಬೆತ್ತಲೆಯಾಗಿರುವ ಪಿಂಕಿ ಅವರ ವೈದ್ಯಕೀಯ ಪರೀಕ್ಷೆ ನಡೆಸುತ್ತಿರುವ ವೀಡಿಯೋ ತುಣಕು ವೆಬ್ ಸೈಟ್ ಗಳನ್ನು ದಾಟಿ ಮೊಬೈಲ್ ಗಳನ್ನು ತಲುಪಿದೆ. 29 ಸೆಕಂಡಿನ ಈ ವೀಡಿಯೋ ತುಣುಕು ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿರುವ ದೃಶ್ಯ ಬಿತ್ತರಿಸಲಾಗಿದೆ.
ಸುದ್ದಿ ತಿಳಿದ ತೀವ್ರ ನೊಂದಿರುವ ಪಿಂಕಿ, ಇಂಥ ನೀಚ ಕೃತ್ಯ ಎಸೆಗಿದವರನ್ನು ತಕ್ಷಣ ಬಂಧಿಸಬೇಕೆಂದು ಪೊಲೀಸರಲ್ಲಿ ಮೊರೆ ಇಟ್ಟಿದ್ದಾನೆ/ಳೆ, 'ನನ್ನ ಜೀವನದಲ್ಲಿ ಎಂದಿಗೂ ಇಂತಹ ಅವಮಾನ ಹಾಗೂ ಕಿರುಕುಳಕ್ಕೆ ಒಳಪಟ್ಟಿರಲಿಲ್ಲ' ಎಂದು ಕೊರಗಿದ್ದಾರೆ.
ಅಂದ ಹಾಗೆ ಈ ವೀಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬುದರ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಪಿಂಕಿ ಎಂಎಂಎಸ್ ರೂಪದಲ್ಲಿ ಈ ವೀಡಿಯೊ ವೆಬ್ ಸೈಟ್ ಗಳಿಗೆ ಹಾಕಿದವರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಎಂಎಂಎಸ್ ಪ್ರಕರಣದಲ್ಲಿ ಬಗ್ಗೆ ಜು.12 ರಂದು ನಡೆಯುವ ವಿಚಾರಣೆ ವೇಳೆ ಕೋರ್ಟಿನಲ್ಲಿ ತಿಳಿಸುವುದಾಗಿ ಪಿಂಕಿ ಪರ ವಕೀಲರು ಹೇಳಿದ್ದಾರೆ.
ಗುರುವಾರ(ಜೂ.14) ಬೆಳಗ್ಗೆ ಪ್ರಮಾಣಿಕ್ ಅವರನ್ನು ಬಂಧಿಸಲಾಗಿತ್ತು. ಮಹಿಳೆಯೊಬ್ಬರ ಮೇಲೆ ಏಳೆಂಟು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿದೆ. ಕಾಮತೃಷೆ ತೀರಿಸಿಕೊಂಡ ಮೇಲೆ ಆಕೆಯನ್ನು ಮದುವೆಯಾಗುವ ಭರವಸೆ ನೀಡಿದ್ದಾನೆ(ಳೆ). ಆದರೆ, ಮಹಿಳೆಗೆ ಕೈ ಕೊಟ್ಟು ಪಿಂಕಿ ತಲೆ ಮರೆಸಿಕೊಂಡಿದ್ದು ದೂರಿನಿಂದ ತಿಳಿದುಬಂದಿದೆ ಎಂದು ಬಗೌತಿ ಪೊಲೀಸ್ ಸ್ಟೇಷನ್ ಅಧಿಕಾರಿಗಳು ಹೇಳಿದ್ದರು.
ಬಂಧನದ ನಂತರ ಪ್ರಮಾಣಿಕ್ ರನ್ನು ಸಮೀಪದ ಖಾಸಗಿ ನರ್ಸಿಂಗ್ ಹೋಮ್ ಗೆ ಸೇರಿಸಿ ಲಿಂಗ ಪರೀಕ್ಷೆ ಮಾಡಲಾಗಿತ್ತು. ವರದಿ ಪ್ರಕಾರ ಪಿಂಕಿ ಹೆಣ್ಣಲ್ಲ, ಗಂಡು ಎಂಬುದು ದೃಢಪಟ್ಟಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿ ವರದಿ ಬಂದ ಮೇಲೆ ಪಿಂಕಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದರು.
ದೋಹಾದಲ್ಲಿ ನಡೆದ 2006ರ ಏಷ್ಯನ್ ಗೇಮ್ಸ್ ನ 4×400 ಮೀ ರಿಲೇ ನಲ್ಲಿ ಪಿಂಕಿ ಪ್ರಮಾಣಿಕ್ ಚಿನ್ನದ ಪದಕ ಗೆದ್ದಿದ್ದರು. ಮೆಲ್ಬೋರ್ನಿನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಸಿಕ್ಕಿತ್ತು. ಮೂರು ವರ್ಷಗಳ ಹಿಂದೆ ಪ್ರಮಾಣಿಕ್ ಅಥ್ಲೀಟೆಕ್ಸ್ ನಿಂದ ನಿವೃತ್ತಿ ಹೊಂದಿದ್ದರು. [ಅಥ್ಲೀಟ್ ಪಿಂಕಿ ಸಾಧನೆ ಹೆಚ್ಚಿನ ವಿವರಗಳಿಗೆ ಕ್ಲಿಕ್ಕಿಸಿ]












Click it and Unblock the Notifications