ಬೆಳಗಾವಿ ಮಹಾನಗರಪಾಲಿಕೆ ಮತ್ತೆ ಸೂಪರ್ ಸೀಡ್

ಕಳೆದ ಜೂನ್ 25ರಂದು ನಗರಾಭಿವೃದ್ದಿ ಇಲಾಖೆ ಮತ್ತು ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ, ಅದರ ಆಧಾರದ ಮೇಲೆ ಸೂಪರ್ ಸೀಡ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಹೇಳಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರುಗಳು ಕಾನೂನಿಗೆ ವಿರುದ್ದವಾಗಿ ನಡೆದುಕೊಂಡಿದು, ಸರಕಾರದ ನಿಯಮ ಪಾಲನೆಯಲ್ಲಿ ಉಲ್ಲಂಘನೆ ಹೀಗೆ 20 ಕಾರಣಗಳನ್ನು ನೀಡಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಬೆಳಗಾವಿ ನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ 2011 ರ ಡಿಸೆಂಬರ್ 15 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಧಾರವಾಡ ಹೈಕೋರ್ಟ್ ಸಂಚಾರಿಪೀಠ ರದ್ದು ಪಡಿಸಿತ್ತು. ಇದರಿಂದ ಸದಾನಂದ ಗೌಡರ ಸರ್ಕಾರ ತೀವ್ರ ಮುಖಭಂಗ ಅನುಭವಿಸಿತ್ತು.












Click it and Unblock the Notifications