• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೋಪಾಲ್ ದುರಂತ : ಅಮೆರಿಕ ಕೋರ್ಟ್ ತೀರ್ಪು

By Prasad
|
ನ್ಯೂಯಾರ್ಕ್, ಜೂ. 28 : 1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಭಾರೀ ಹಿನ್ನಡೆಯಾಗಿದ್ದು, ಆ ಅನಿಲ ಸೋರಿಕೆಗೆ ಕಾರಣವಾಗಿದ್ದ ಯುನಿಯನ್ ಕಾರ್ಬೈಡ್ ಕಂಪನಿ ಮತ್ತು ಆ ಕಂಪನಿಯ ಮಾಜಿ ಚೇರ್ಮನ್ ವಾರನ್ ಅಂಡರ್ಸನ್ ಪರಿಸರ ನಾಶಕ್ಕೆ ಕಾರಣವಲ್ಲ ಎಂದು ಅಮೆರಿಕದ ನ್ಯಾಯಾಲಯ ತೀರ್ಪು ನೀಡಿದೆ.

ಭೋಪಾಲ್ ಅನಿಲ ಸೋರಿಕೆಯ ನಂತರ ಸುತ್ತಲಿನ ಮಣ್ಣು ಮತ್ತು ನೀರು ವಿಷಪೂರಿತವಾಗಲು ಯುನಿಯನ್ ಕಾರ್ಬೈಡ್ ಕಂಪನಿ ಮತ್ತು ಅದರ ಚೇರ್ಮನ್ ಕಾರಣ ಎಂದು ಹೂಡಲಾಗಿದ್ದ ದೂರಿ ಹೂಡಲಾಗಿದ್ದ ಕೇಸನ್ನು ಮ್ಯಾನ್‌ಹಟ್ಟನ್ ಜಿಲ್ಲಾ ನ್ಯಾಯಾಧೀಶ ಜಾನ್ ಕಾನಾ ಅವರು ತಳ್ಳಿಹಾಕಿದ್ದಾರೆ. ಪರಿಸರ ಕಲುಷಿತವಾಗಲು ಅವರು ಕಾರಣ ಅಲ್ಲವೇ ಇಲ್ಲ ಎಂದು ತೀರ್ಪು ನೀಡಿದ್ದಾರೆ.

ಅನಿಲ ಸೋರಿಕೆಯಿಂದಾಗಿ ಭೋಪಾಲ್ ಅನಿಲ ಘಟಕ ಇದ್ದ ಸ್ಥಳದ ಸುತ್ತಲಿನ ಜಮೀನಿನ ಮಣ್ಣು ಕಲುಷಯುಕ್ತವಾಗಿದೆ ಮತ್ತು ಅಲ್ಲಿನ ನಿವಾಸಿಗಳು ಕುಡಿಯುವ ನೀರು ವಿಷದಿಂದ ಕೂಡಿದೆ ಎಂದು ಜಾನಕಿ ಬಾಯಿ ಸಾಹು ಮತ್ತಿತರರು ಯುನಿಯನ್ ಕಾರ್ಬೈಡ್ ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು.

ಈ ದುರಂತಕ್ಕೆ ಯುನಿಯನ್ ಕಾರ್ಬೈಡ್ ಕಂಪನಿಯ ಅಂಗ ಸಂಸ್ಥೆಯಾಗಿದ್ದ ಯುನಿಯನ್ ಕಾರ್ಬೈಡ್ ಇಂಡಿಯಾ ಲಿ. ಕಾರಣವೇ ಹೊರತು ಮಾತೃಸಂಸ್ಥೆಯಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕುಡಿಯುವ ನೀರು ವಿಷಪೂರಿತ ಮಾಡಿದ ಅನಿಲ ಘಟಕ ಉತ್ಪಾದಿಸುತ್ತಿದ್ದ ತ್ಯಾಜ್ಯದ ವಿಲೇವಾರಿ ಭಾರತದಲ್ಲಿನ ಕಂಪನಿಯ ಜವಾಬ್ದಾರಿಯಾಗಿತ್ತು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ಮಾತೃಸಂಸ್ಥೆಯ ಅನುಮತಿಯನ್ನು ಭಾರತದಲ್ಲಿನ ಕಂಪನಿ ಪಡೆದಿತ್ತು ಎಂದು ವಾದಿಗಳು ಮೊಕದ್ದಮೆಯಲ್ಲಿ ತಿಳಿಸಿದ್ದರೂ, ಅದಕ್ಕೆ ಪೂರಕವಾದ ಯಾವುದೇ ಸಾಕ್ಷಿ ದೊರೆತಿಲ್ಲವಾದ ಕಾರಣ ಯುನಿಯನ್ ಕಾರ್ಬೈಡ್ ಕಂಪನಿಯನ್ನು ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

1984ರ ಡಿಸೆಂಬರ್ 3ರಂದು ಮಧ್ಯಪ್ರದೇಶದ ಭೋಪಾಲ್‌ನ ಕೀಟನಾಶಕ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಮಿಥೈಲ್ ಇಸೋಸೈನೇಟ್ ಅನಿಲ ಸೋರಿಕೆಯಿಂದಾಗಿ ಮೂರು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡು, ನಂತರದ ವರ್ಷಗಳಲ್ಲಿ ಸಾವಿರಾರು ಜನರು ಅಂಗವೈಕಲ್ಯ ಅನುಭವಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ದುರಂತ ಸುದ್ದಿಗಳುView All

English summary
A Manhattan district Court in US has given verdict on Bhopal gas tragedy that Union Carbide Company and its former chairman Warren Anderson are not liable to pay for environmental hazards and pollution of drinking water. It is considered as huge set back to the victims.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more