• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೊನಾಲ್ಡೊ vs ಸ್ಪೇನ್ ಗೂಳಿಗಳ ಕಾಳಗ ಕುತೂಹಲ

By Mahesh
|
Euro 2012: Semi-Final Preview: Portugal vs Spain
ಡಾಂನೆಸ್ಕ್, ಜೂ.27: ಯುರೋ ಕಪ್‌ನ ಅತ್ಯಂತ ಕುತೂಹಲದ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಸೆಮಿ ಫೈನಲ್‌ನಲ್ಲಿ ಬುಧವಾರ ಮಧ್ಯರಾತ್ರಿ ಹಾಲಿ ಚಾಂಪಿಯನ್ ಸ್ಪೇನ್ ತಂಡವನ್ನು ಕ್ರಿಶ್ಚಿಯಾನೋ ರೋನಾಲ್ಡೊ ಅವರ ಪೋರ್ಚುಗಲ್‌ ಎದುರಿಸಲಿದೆ.

ಎರಡನೆ ಬಾರಿ ಪ್ರಶಸ್ತಿ ಗೆಲ್ಲುವ ಫೇವಟ್ ಎನಿಸಿರುವ ಸ್ಪೇನ್ ತಂಡಕ್ಕೆ ಪೋರ್ಚುಗಲ್‌ನ ನಾಯಕ ಕ್ರಿಶ್ಟಿಯಾನೊ ರೊನಾಲ್ಡೊ ದಾಳಿ ಎದುರಿಸಬೇಕಿದೆ. ಎರಡು ತಂಡಗಳು ಸತತ ಮೂರು ಗೆಲುವಿನ ಮೂಲಕ ಸೆಮಿಫೈನಲ್ ತಲುಪಿದೆ.

ಯುರೋ ಕಪ್‌ನಲ್ಲಿ ಸ್ಪೇನ್ ತಂಡ 1964 ಮತ್ತು 2008ರಲ್ಲಿ ಪ್ರಶಸ್ತಿ ಜಯಿಸಿದೆ. 1984ರಲ್ಲಿ ನಡೆದ ಯುರೋ ಕಪ್‌ನ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ 0-2 ಅಂತರದಿಂದ ಸೋತು ನಿರ್ಗಮಿಸಿತ್ತು. ಪೋರ್ಚುಗಲ್ ತಂಡ 2004ರಲ್ಲಿ ಗ್ರೀಸ್ ವಿರುದ್ಧ ಫೈನಲ್‌ನಲ್ಲಿ 0-4 ಅಂತರದಿಂದ ಸೋತು ಪ್ರಶಸ್ತಿ ಎತ್ತುವ ಅವಕಾಶವನ್ನು ಕಳೆದುಕೊಂಡಿತ್ತು.

1970ರ ಬಳಿಕ ಜರ್ಮನಿಯನ್ನು ಹೊರತುಪಡಿಸಿದರೆ ಯುರೋಪಿನ ಯಾವುದೇ ತಂಡ ಸತತ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿಲ್ಲ. ಸ್ಪೇನ್ ತಂಡ 2008ರಲ್ಲಿ ಯುರೋ ಕಪ್ ಜಯಿಸಿತು. 2010ರಲ್ಲಿ ವಿಶ್ವಚಾಂಪಿಯನ್ ಎನಿಸಿಕೊಂಡಿತು. ಇದೀಗ ಯುರೋ ಕಪ್‌ನಲ್ಲಿ ಮತ್ತೊಮ್ಮೆ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಸೆಮಿಫೈನಲ್ ಹಂತ ತಲುಪಿದ ಮೇಲೆ ಸ್ಪೇನ್ ಸೋತಿದ್ದಿಲ್ಲ.

ಪೋರ್ಚುಗಲ್ ಗೆ ಸುವರ್ಣ ಅವಕಾಶ: 2010ರ ವಿಶ್ವಕಪ್‌ನಲ್ಲಿ 16ರ ಘಟ್ಟದಲ್ಲಿ ಸ್ಪೇನ್ ವಿರುದ್ಧ ಸೋತು ನಿರ್ಗಮಿಸಿದ್ದ ಪೋರ್ಚುಗಲ್ ತಂಡಕ್ಕೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ ಒದಗಿ ಬಂದಿದೆ.ಸ್ಪೇನ್ ತಂಡ ಪೋರ್ಚುಗಲ್‌ನ್ನು 1-0 ಅಂತರದಲ್ಲಿ ಸೋಲಿಸಿತ್ತು. ಸ್ಪೇನ್‌ನ ಗೆಲುವಿಗೆ ಗೋಲು ದಾಖಲಿಸಿದ್ದ ಸ್ಟಾರ್ ಆಟಗಾರ ಡೇವಿಡ್ ವಿಲ್ಲಾ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯುರೋ ಕಪ್ ತಂಡದಲ್ಲಿ ಇಲ್ಲ.

ಪೋರ್ಚುಗಲ್ ತಂಡದ ನಾಯಕ ಕ್ರಿಶ್ಟಿಯಾನೊ ರೊನಾಲ್ಡೊ ಈ ಬಾರಿ ಯುರೋ ಕಪ್ ಗೆಲ್ಲುವ ನಿಟ್ಟಿನಲ್ಲಿ ಪಣ ತೊಟ್ಟಿದ್ದಾರೆ. ಯುರೋ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್ ಸ್ಪೇನ್ ರಣತಂತ್ರವನ್ನು ಬಲ್ಲ ರೊನಾಲ್ಡೊ ಉತ್ತಮ ಪ್ರತಿತಂತ್ರದೊಂದಿಗೆ ಕಣಕ್ಕಿಲಿಯಲಿದ್ದಾರೆ.ಲಾ ಲೀಗಾದಲ್ಲಿ ರಿಯಲ್ ಮ್ಯಾಡ್ರಿಡ್ ಪರ ಆಡಿರುವ ರೊನಾಲ್ಡೊ ಗೋಲಿನ ಮಳೆಗೆರೆದಿದ್ದರು.

ಕೋಚ್ ಡೆಲ್ ಬಾಸ್‌ಕ್ಯೂ ತಂಡದ ಗುಟ್ಟನ್ನು ಬಿಟ್ಟು ಕೊಡುತ್ತಿಲ್ಲ. ನಾಯಕ ಐಕರ್ ಕ್ಯಾಸಿಲಾಸ್ ತಂಡದ ಗೋಲ್ ಕೀಪರ್ ಆಗಿದ್ದಾರೆ. ಅವರು ವಿಶ್ವದ ನಂ.1 ಗೋಲಿ ಆಗಿದ್ದಾರೆ.

ಬಲಾಬಲ: ಎರಡು ತಂಡಗಳು 34 ಬಾರಿ ಪರಸ್ಪರ ಎದುರಿಸಿದೆ. ಸ್ಪೇನ್ 15ರಲ್ಲಿ, ಪೋರ್ಚುಗಲ್ 7ರಲ್ಲಿ ಗೆಲುವು ಸಾಧಿಸಿದೆ. 12 ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿದೆ.
ಸ್ಪೇನ್ 1934ರ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮ್ಯಾಡ್ರಿಡ್‌ನಲ್ಲಿ ಪೋರ್ಚುಗಲ್ ವಿರುದ್ಧ 9-0 ಅಂತರದಿಂದ ಜಯ ಗಳಿಸಿರುವುದು, ಸ್ಪೇನ್ ಸಾಧಿಸಿದ ದೊಡ್ಡ ಗೆಲುವು. ಇದು ಪೋರ್ಚುಗಲ್‌ಗೆ ಎರಡನೆ ಹೀನಾಯ ಸೋಲು. ಸ್ಪೇನ್ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ತಾನು ಆಡಿರುವ ಕಳೆದ 47 ಪಂದ್ಯಗಳಲ್ಲಿ 3ರಲ್ಲಿ ಸೋತಿದೆ.

ರಣತಂತ್ರ: ಎರಡು ತಂಡಗಳು ಅದೇ ಕಾರ್ಯತಂತ್ರ ಅದೇ ತಂಡದೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಪೋರ್ಚುಗೀಸರ ಪರ ಅಲ್ಮೆಡ ಅಥವಾ ನೆಲ್ಸನ್ ಒಲಿವೆರಾ ಮೊದಲಿಗೆ ಕಣಕ್ಕಿಳಿಯಬಹುದು. ಗಾಯಗೊಂಡ ಪೊಸ್ಟಿಂಗ ಆಡುವುದು ಅನುಮಾನ. 3-3-4-1 ತಂತ್ರ..ನಾನಿ, ಸ್ಯಾಂಟೋಸ್ ಜೊತೆ ರೋನಾಲ್ಡೋ ದಾಳಿ ನಡೆಸಲಿದ್ದಾರೆ.

ಸ್ಪೇನ್ ತಂಡ ಮುಂಪಡೆಯಲ್ಲಿ ಫೆಬ್ರಿಗೆಸ್ ನಿಲ್ಲಿಸಿ ಟೊರೆಸ್ ನನ್ನು ನಂತರ ಬದಲಿ ಆಟಗಾರನಾಗಿ ಬಳಸಲಿದೆ. 1-2-3-4-1 ತಂತ್ರದೊಂದಿಗೆ ಗೋಲ್ ಕೀಪರ್ ಕ್ಯಾಸಿಲಾಸ್ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಕ್ಸಾವಿ ಅಲೊನ್ಸೋ ಗೋಲು ಗಳಿಸಿ ಲಯಕ್ಕೆ ಮರಳಿರುವುದು ಸ್ಫೇನ್ ಗೆ ಶುಭದಾಯಕವಾಗಿದೆ. ಸ್ಪೇನ್ ಫೈನಲ್ ಪ್ರವೇಶ ತಡೆಯುವುದು ರೋನಾಲ್ಡೋ ಪಡೆಗೆ ಕಷ್ಟ ಕಷ್ಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಫುಟ್ಬಾಲ್ ಸುದ್ದಿಗಳುView All

English summary
Iberian rivals Spain and Portugal look to seal a place in the Euro 2012 final when the two teams clash heads in the first semi-finals match at the Donbass Arena in Donetsk on Wednesday

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more