ಯುವ ನಟಿಯ ಅಪಹರಣ, ಸಾಮೂಹಿಕ ಅತ್ಯಾಚಾರ

bhojpuri-actress-kidnapped-gang-molested
ನೋಯ್ಡಾ, ಜೂನ್ 26: ಭೋಜ್ ಪುರಿ ನಟಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಯು ಇಲ್ಲಿನ ಭಾಂಗೆಲ್ ಗ್ರಾಮದಲ್ಲಿ ವರದಿಯಾಗಿದೆ.

ಬಾಧಿತ ನಟಿ ನೋಯ್ಡಾದ ಸಲಾರಪುರದ ನಿವಾಸಿ. ಆಕೆಯನ್ನು ಪ್ರಮೋದ್ ತ್ಯಾಗಿ, ಸುಖ್ ಬೀರ್ ಸಿಂಗ್ ಮತ್ತು ಮತ್ತೊಬ್ಬ ವ್ಯಕ್ತಿ ಅಪಹರಿಸಿ, ಭಾಂಗೆಲ್ ಗ್ರಾಮದಲ್ಲಿ ಅತ್ಯಾಚಾರ ಮಾಡಿದರು ಎಂದು ಆರೋಪಿಸಲಾಗಿದೆ.

ಮುಖ್ಯ ಆಪಾದಿತ ಪ್ರಮೋದ್ ತ್ಯಾಗಿ ಈ ಹಿಂದೆ ನನ್ನೊಂದಿಗೆ ಜಗಳವಾಡಿಕೊಂಡಿದ್ದ. ಆ ಜಗಳವನ್ನು ಇತ್ಯರ್ಥ ಪಡಿಸುವುದಾಗಿ ಹೇಳಿ ಅವನು ನನ್ನನ್ನು ಹೊರಗೆ ಕರೆದುಕೊಂಡು ಹೋದ. ಹಾಗಾಗಿ, ಭಾಂಗೆಲ್ ಗ್ರಾಮಕ್ಕೆ ಅವನೊಂದಿಗೆ ತೆರಳಿದ್ದೆ.

ಆಗ ಅವನ ಜತೆ ಸೇರಿದ ಇತರೆ ಇಬ್ಬರು ನನ್ನನ್ನು ಅಪಹರಿಸಿದರು. ಬಳಿಕ ಗ್ರಾಮದ ದೇವಸ್ಥಾನವೊಂದರ ಬಳಿ ನನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ಬಾಧಿತ ನಟಿ ಪೊಲೀಸರಿಗೆ ತಿಳಿಸಿದ್ದಾಳೆ.

ಈ ಮಧ್ಯೆ, ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಾಧಿತ ನಟಿ, ಮೊದಲು ದೂರು ದಾಖೊಲಿಸಕೊಳ್ಳಲು ಪೊಲೀಸರು ಸುತರಾಂ ಒಪ್ಪಲಿಲ್ಲ. ಆದರೆ ಕೋರ್ಟ್ ನಿರ್ದೇಶನದಂತೆ ಪೊಲೀಸರು ಈಗ ದೂರು ದಾಖಲಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ಪ್ರಸಕ್ತ ವರ್ಷವೂ ಉತ್ತರಪ್ರದೇಶದಲ್ಲಿ ಅತ್ಯಾಚಾರ ಅಪರಾಧಗಳು ಮಿತಿಮೀರಿ ನಡೆಯುತ್ತಿವೆ. 669 ಹತ್ಯೆಗಳು, 263 ಅತ್ಯಾಚಾರಗಳು, 420 ದರೋಡೆ ಪ್ರಕರಣಗಳು, 3,256 ವಾಹನ ಕಳವು ಪ್ರಕರಣಗಳು ಮಾರ್ಚ್ 1ರಿಂದ ಏಪ್ರಿಲ್ 15 ನಡುವಣ ಅವಧಿಯಲ್ಲಿ ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+