ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ ಗೆ ಕರ್ನಾಟಕದ ಹೈ ಜಂಪರ್ ಸಹನಾ

By Mahesh
|
Google Oneindia Kannada News

Karnataka high jumper Sahana Kumari
ಹೈದರಾಬಾದ್, ಜೂ.24: ಕರ್ನಾಟಕದ ಹೈಜಂಪ್ ಸ್ಪರ್ಧಿ ಸಹನಾ ಕುಮಾರಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಾರೆ. ಈ ಮೂಲಕ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಭಾರತದ 14ನೇ ಅಥ್ಲೀಟ್ ಎನಿಸಿದ್ದಾರೆ.

ಶನಿವಾರ ಹೈದರಾಬಾದಿನಲ್ಲಿ ಆರಂಭವಾದ 52ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಸಹನಾ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಜಿಎಂಜಿ ಬಾಲಯೋಗಿ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 1.92 ಮೀಟರ್ ಎತ್ತರ ಜಗಿದರು.

2004ರಲ್ಲಿ ಕೇರಳದ ಬಾಬಿ ಅಲೋಷಿಯಸ್ 1.91 ಮೀ.ಎತ್ತರ ಜಿಗಿದು ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಸಹನಾ ಅಳಿಸಿ ಹಾಕಿದರು. ಅಲೋಷಿಯಸ್ ಹೆಸರಿನಲ್ಲಿದ್ದ ಕೂಟ ದಾಖಲೆಯನ್ನೂ ಅವರು ಅಳಿಸಿ ಹಾಕಿದರು. ಸಹನಾ ಒಲಿಂಪಿಕ್ಸ್‌ನ 'ಬಿ' ಅರ್ಹತೆ ಮಟ್ಟ ಮುಟ್ಟಿದರು.

ನಾನು 1.95 ಮೀ. ಎತ್ತರ ಜಿಗಿಯಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಸ್ಪರ್ಧೆ ತಡವಾಗಿ ಆರಂಭವಾಗಿದ್ದು ಬೇಸರ ಉಂಟು ಮಾಡಿತು. ಆದರೆ, ಈ ಸಾಧನೆ ನನ್ನಲ್ಲಿ ಸಂತೋಷ ಉಂಟು ಮಾಡಿದೆ ಎಂದು 31 ವರ್ಷದ ಸಹನಾ ಪ್ರತಿಕ್ರಿಯಿಸಿದರು. ವಿದೇಶಿ ಕೋಚ್ ಉಕ್ರೇನ್‌ನ ಎವ್ಜೆನ್ ನಿಕಿಟಿನ್ ಜೊತೆಗಿದ್ದರು. ಸಹನಾ ಈ ಹಿಂದೆ 1.89 ಮೀ. ಎತ್ತರ ಜಿಗಿದಿದ್ದರು.

ಹರಿಯಾಣದ ಧರ್ಮವೀರ್ ಸಿಂಗ್ ಹಾಗೂ ಆಂಧ್ರಪ್ರದೇಶದ ಸತಿ ಗೀತಾ 100 ಮೀಟರ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ 'ವೇಗದ ಓಟಗಾರರು' ಎನಿಸಿದರು. ಧರ್ಮವೀರ್ 10.51 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. 200 ಮೀ. ಓಟದ ಪರಿಣತ ಎನಿಸಿರುವ ಅವರು ಇಲ್ಲಿ 100 ಮೀ.ನಲ್ಲಿ ಸ್ಪರ್ಧಿಸ್ದ್ದಿದು ವಿಶೇಷ.

ಗೀತಾ 12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. 2006ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 4 ‍X 400 ಮೀ.ರಿಲೇನಲ್ಲಿ ಚಿನ್ನ ಗೆದ್ದ ಭಾರತ ತಂಡದ ತಂಡದಲ್ಲಿದ್ದ ಅವರಿಗೆ ಹರಿಯಾಣದ ಮನಿಷಾ ಅನರ್ಹರಾಗಿದ್ದು ವರವಾಗಿ ಪರಿಣಮಿಸಿತು.

ಪೋಲ್‌ವಾಲ್ಟ್‌ನಲ್ಲಿ ಕರ್ನಾಟಕದ ಎಸ್.ವಿ.ಖ್ಯಾತಿ (3.50 ಮೀ.) ಬೆಳ್ಳಿ ಪದಕ ಜಯಿಸಿದರು.

English summary
Karnataka high jumper Sahana Kumari became the 14 Indian athlete to qualify for the London Olympics after she cleared 1.92m during the opening day of National Inter-State Senior Athletics Championships on Saturday(Jun.23) at GMC Balayogi Stadium, Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X