ಸ್ಪೇನ್ ಗೂಳಿಗಳ ದಾಳಿ ಭೀತಿಯಲ್ಲಿ ಫ್ರೆಂಚರು

Euro 2012: QF3 Preview: Spain vs France
ಡೊನೆಶ್ಕ್, ಜೂ.22: ಡಾನ್ ಬಾಸ್ ಅರೀನಾ ಮೈದಾನದಲ್ಲಿ ನಡೆಯಲಿರುವ ಕ್ವಾಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸ್ಪೇನ್ ವಿರುದ್ಧ ಹಳೆ ಹುಲಿಗಳ ಫ್ರೆಂಚರು ಪರಸ್ಪರ ಕಾದಾಡಲಿದ್ದಾರೆ. ದಾಳಿ ತಂತ್ರವನ್ನೇ ಗುರಿಯಾಗಿಟ್ಟುಕೊಂಡು ಎರಡು ತಂಡಗಳು ಕಣಕ್ಕಿಳಿಯುವುದರಿಂದ ಪ್ರೇಕ್ಷಕರಿಗೆ ರಸದೌತಣ ಗ್ಯಾರಂಟಿ.

ಹಾಲಿ ವಿಶ್ವ ಚಾಂಪಿಯನ್ ಹಾಗೂ ಯುರೋಪಿಯನ್ ಚಾಂಪಿಯನ್ ಸ್ಪೇನ್ ವಿರುದ್ಧ ಉತ್ತಮ ಅಂಕಿ ಅಂಶ ಹೊಂದಿರುವ ಫ್ರಾನ್ಸ್ ತಂಡ ಮತ್ತೊಮ್ಮೆ 2006 ವಿಶ್ವಕಪ್ ಪಂದ್ಯದ ಯಶಸ್ಸನ್ನು ಪುನರಾವರ್ತನೆ ಮಾಡಲು ಸಜ್ಜಾಗಿದೆ.

ವಿಶ್ವಕಪ್ 2006ರಲ್ಲಿ ಎರಡನೇ ಸುತ್ತಿನಲ್ಲಿ ಸ್ಪೇನ್ ತಂಡವನ್ನು ಮಣಿಸಿತ್ತು. ಅಲ್ಲದೆ ದಿಗ್ಗಜ ಲಾರೆಂಟ್ ಬ್ಲಾಂಕ್ ಕಾಲದಲ್ಲಿ ಯುರೋ 2000ರ ಯುರೋ ಟೂರ್ನಿ ಕ್ವಾಟರ್ ಫೈನಲ್ಸ್ ನಲ್ಲಿ ಸ್ಪೇನ್ ತಂಡವನ್ನು ಫ್ರಾನ್ಸ್ ತಂಡ ಮಣಿಸಿತ್ತು.

ಆದರೆ, ಯುರೋ 2008 ಹಾಗೂ 2010ರ ಫೀಫಾ ವಿಶ್ವಕಪ್ ನಲ್ಲಿ ಸ್ಪೇನ್ ತಂಡ ಅಜೇಯವಾಗಿ ಉಳಿದು ಇತಿಹಾಸ ನಿರ್ಮಿಸಿತ್ತು.

ಯುರೋ 2008ರಲ್ಲಿ ಗ್ರೂಪ್ ಹಂತದಲ್ಲಿ ಇಟಲಿ ಕೈಲಿ ಸರಿಯಾಗಿ ಗುದ್ದಿಸಿಕೊಂಡಿತ್ತು. 2010 ರಲ್ಲಿ ವಿಶ್ವಕಪ್ ಕೂಡಾ ಗ್ರೂಪ್ ಹಂತದಲ್ಲೆ ನಿರ್ಗಮಿಸಿತ್ತು.

ಕಳೆದ 38 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಸೋತಿರುವ ಸ್ಪೇನ್ ಸದ್ಯಕ್ಕ್ ಬಲಿಷ್ಠವಾಗಿದೆ. ಯುರೋ 2012ರಲ್ಲಿ ಸ್ವೀಡನ್ ವಿರುದ್ಧ 2-0 ಫ್ರೆಂಚ್ ತಂಡ ಸೋಲುವ ಮೂಲಕ 23 ಪಂದ್ಯಗಳ ನಂತರ ಮೊದಲ ಸೋಲು ಕಂಡಿತ್ತು.

ಫ್ರಾನ್ಸ್ ತಂಡ ಡಿಫೆಂಡರ್ ಫಿಲಿಫ್ ಮೆಕ್ಸಸ್ ಕಳೆದುಕೊಂಡಿದೆ. ಸ್ವೀಡನ್ ವಿರುದ್ಧ ಎರಡು ಗೋಲು ಹೊಡೆಸಿಕೊಂಡಿರುವುದರಿಂದ ಫ್ರೆಂಚರ ರಕ್ಷಣಾ ತಂತ್ರಕ್ಕೆ ಹಿನ್ನಡೆ ಉಂಟಾಗಿದೆ. ಕೊಶಿಲ್ನಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಉತ್ತಮ ಲಯದಲ್ಲಿರುವ ಸಮಿರ್ ನಸ್ರಿ ಹಾಗೂ ಫ್ರಾಂಕ್ ರಿಬೆರಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅಂತಿಮ XIನನ್ನು ಸೇರುವ ಸಾಧ್ಯತೆಯಿದೆ.

ಫ್ರಾನ್ಸ್ ತಂಡ ಮತ್ತೊಮ್ಮೆ ರಿಬೇರಿ, ಮೆನೆಜ್ ಹಾಗೂ ಬೆನ್ಜೆಮಾ ಮೇಲೆ ಅವಲಂಬಿತವಾಗಿದೆ. ಬದಲಿ ಆಟಗಾರರಾಗಿ ಮಲೊಡ ಹಾಗೂ ಬೆನ್ ಅರ್ಫಾ ಕೂಡಾ ಕಣಕ್ಕಿಳಿಯುವ ಸಾಧ್ಯತೆಯಿದೆ.

ಸ್ಪೇನ್ ಗೂಳಿಗಳು: ವಿನ್ಸೆಟ್ ಡೆಲ್ ಬಾಸ್ಕೋ ಅವರ ಮಾರ್ಗದರ್ಶನದಲ್ಲಿ ಸ್ಫೇನ್ ಉತ್ತಮ ಆಟ ಪ್ರದರ್ಶಿಸಿದೆ. ಆದರೆ, ಅಲ್ವರೋ ಅರ್ಬೆಲೊ, ಜೋರ್ಡಿ ಅಲ್ಬಾ, ಫಾರ್ನಾಂಡೋ ಟೊರೆಸ್, ಕ್ಸಾಬಿ ಅಲಾನ್ಸೊ ಹಾಗೂ ಜಾವಿ ಮಾರ್ಟಿನೆಜ್ ಎಲ್ಲರೂ ಇನ್ನೊಂದು ಹಳದಿ ಕಾರ್ಡ್ ಪಡೆದರೆ ಮುಂದಿನ ಪಂದ್ಯ ಕಳೆದುಕೊಳ್ಳಲಿದ್ದಾರೆ.

ರಕ್ಷಣಾ ಪಡೆಯಲ್ಲಿ ರಮೋಸ್, ಆಲ್ಬಾ, ಪಿಕ್ಯೂ ಹಾಗೂ ಮುಂಪಡೆಯಲ್ಲಿ ಸೆಸ್ಕ್ ಫಾಬ್ರಿಗ್ರೆಸ್. ಇನಿಯಾಸ್ಟಾ, ಟೊರೆಸ್, ಅಲನ್ಸೋ, ಸಿಲ್ವಾ ಆಟದ ಮೇಲೆ ಸ್ಪೇನ್ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಪೇನ್ ಬಳಿ ಕ್ಯಾಸಿಲ್ಲಾಸ್ ನಂಥ ಅದ್ಭುತ ಗೋಲ್ ಕೀಪರ್ ಇರುವುದರಿಂದ ಸ್ಪೇನ್ ತಂಡ ಈ ಪಂದ್ಯದ ಮೇಲುಗೈ ಸಾಧಿಸುವ ಲಕ್ಷಣಗಳಿದೆ.

ಸಂಭಾವ್ಯ ತಂಡಗಳು:
ಸ್ಪೇನ್: ಕಾಸಿಲ್ಯಾಸ್-ಅರ್ಬೆಲೊವ, ರಾಮೊಸ್, ಅಲ್ಬಾ, ಬುಸ್ಕ್ಯೂಟ್ಸ್, ಪಿಕ್ಯೂ, ಅಲಾನ್ಸೋ, ಇನಿಯಾಸ್ಟಾ, ಕ್ಸಾವಿ, ಸಿಲ್ವಾ-ಟೊರೆಸ್
ಫ್ರಾನ್ಸ್: ಲೊರಿಸ್-ಡೆಬುಚಿ, ಕೊಸ್ಸಿಲ್ನಿ, ರಾಮಿ, ಕ್ಲಿಚ್ಚಿ, ಕಬೊಯೆ, ಎಂವಿಲ್ಲಾ, ಮೆನೆಜ್, ನಸ್ರಿ, ರಿಬೆರಿ-ಬೆನ್ಜೆಮಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+