ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಾ ಅಶ್ರಫ್ ಪಾಕಿಸ್ತಾನದ ಹೊಸ ಪ್ರಧಾನಿ

By Mahesh
|
Google Oneindia Kannada News

Raja Parvez Ashraf Pakistan's New PM
ಇಸ್ಲಾಮಾಬಾದ್, ಜೂ.22: ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಪಕ್ಷದ ಹಿರಿಯ ಮುಖಂಡ ರಾಜಾ ಪರ್ವೆಜ್ ಅಶ್ರಫ್ ಅವರು ಪಾಕಿಸ್ತಾನದ ನೂತನ ಪ್ರಧಾನಮಂತ್ರಿಯಾಗಿ ಶುಕ್ರವಾರ(ಜೂ.22) ಆಯ್ಕೆಗೊಂಡಿದ್ದಾರೆ.

ಪಂಜಾಬಿನ ರಾವಲ್ಪಿಂಡಿಯ ರಾಜಮನೆತನಕ್ಕೆ ಸೇರಿದ ರಾಜಾ ಪರ್ವೆಜ್ ಅವರ ಹೆಸರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೂಚಿಸಿತ್ತು. 342 ಸದಸ್ಯರಿರುವ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಶ್ರಫ್ ಅವರ ಪರ 211 ಮತಗಳು ಬಂದಿದ್ದು ವಿಪಕ್ಷ ಪಿಎಂಎಲ್ -ಎನ್ ಪಕ್ಷದ ಅಭ್ಯರ್ಥಿ ಸರ್ದಾರ್ ಮೆಹ್ತಾಬ್ ಅಹ್ಮದ್ ಖಾನ್ ಅಬ್ಬಾಸಿ ಅವರಿಗೆ 89 ಮತಗಳು ಸಿಕ್ಕಿದೆ.

ಪಾಕಿಸ್ತಾನದ 25ನೇ ಪ್ರಧಾನಿಯಾಗಿ ರಾಜಾ ಪರ್ವೆಜ್ ಅಶ್ರಫ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪಾಕಿಸ್ತಾನದ ಸುಪ್ರೀಂ ಕೋರ್ಟ್ ಏ.26ರಿಂದ ಅನ್ವಯವಾಗುವಂತೆ ಯುಸೂಫ್ ರಾಜಾ ಗಿಲಾನಿ ಅವರನ್ನು ಪ್ರಧಾನಿ ಪಟ್ಟದಿಂದ ಅನರ್ಹಗೊಳಿಸಿ ಮಂಗಳವಾರ(ಜೂ.19) ಆದೇಶ ಹೊರಡಿಸಿತ್ತು.

ಪಾಕ್ ಹೊಸ ರಾಜಾ : ರಾವಲ್ಪಿಂಡಿಯ ಗುಜಾರ್ ಕ್ಷೇತ್ರದಿಂದ 2002 ಹಾಗೂ 2008ರಲ್ಲಿ ನ್ಯಾಷನಲ್ ಅಸೆಂಬ್ಲಿಗೆ ರಾಜಾ ಅಶ್ರಫ್ ಆಯ್ಕೆಗೊಂಡಿದ್ದರು. ಗಿಲಾನಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದರು.

ಆದರೆ, ಇಂಧನ ಯೋಜನೆ ಅವ್ಯವಹಾರದ ಆರೋಪ ಕೇಳಿಬಂದಿದ್ದರಿಂದ ಕಳೆದ ಫೆಬ್ರವರಿಯಲ್ಲಿ ರಾಜೀನಾಮೆ ಇತ್ತಿದ್ದರು. ನಂತರ ಏಪ್ರಿಲ್ ನಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾದರು.

ಅಶ್ರಫ್ ಅವರ ಆಯ್ಕೆಗೆ ಪಿಪಿಪಿಯ ಮಿತ್ರಪಕ್ಷ ಪಿಎಂಎಲ್-ಕ್ಯೂ ಬೆಂಬಲ ನೀಡಿದ್ದು ಗೆಲುವಿಗೆ ಕಾರಣವಾಗಿದೆ.

ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೆ ಹಾಲಿ ಜವಳಿ ಖಾತೆ ಸಚಿವ ಶಹಾಬುದ್ದೀನ್ ಹಾಗೂ ನೀರಾವರಿ ಮತ್ತು ಇಂಧನ ಖಾತೆ ಸಚಿವ ಚೌಧುರಿ ಅಹ್ಮದ್ ಮುಖ್ತಾರ್ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು.

ಮಖ್ದೂಮ್ ಗೆ ಚಾನ್ಸ್ ಮಿಸ್ : ಎರಡು ಪಾಕಿಸ್ತಾನಿ ಔಷಧಿ ತಯಾರಿಕಾ ಕಂಪೆನಿಗಳು 2010ರಲ್ಲಿ ಬೃಹತ್ ಪ್ರಮಾಣದ ಎಫಡ್ರಿನ್ ಆಮದು ಮಾಡಿಕೊಳ್ಳಲು ರಾಜಕೀಯ ಸಂಪರ್ಕಗಳನ್ನು ಬಳಸಿಕೊಂಡಿದ್ದವು ಎಂದು ಆರೋಪಿಸಲಾಗಿದೆ. ಬಳಿಕ ಈ ಕಂಪನಿಗಳು ಆಮದು ಮಾಡಲಾದ ವಸ್ತುವನ್ನು ಮಾದಕ ದ್ರವ್ಯ ದಂಧೆಯಲ್ಲಿರುವ ವ್ಯಕ್ತಿಗಳಿಗೆ ಹಸ್ತಾಂತರಿಸಿದ್ದರು ಎನ್ನಲಾಗಿದೆ. ದಂಧೆಕೋರರು ಇದನ್ನು ಬಳಸಿ ಶತಕೋಟಿಗಟ್ಟಲೆ ಡಾಲರ್ ಬೆಲೆಯ 'ಮೆತಾಂಫೆಟಮೈನ್' ಉತ್ಪಾದಿಸಿರಬಹುದು ಎಂದು ಹೇಳಲಾಗಿದೆ.

ಪ್ರಧಾನಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ ಸೂಚಿಸಿದ್ದ ಮಾಜಿ ಆರೋಗ್ಯ ಸಚಿವ ಮಖ್ದೂಮ್ ಶಹಾಬುದ್ದೀನ್ ಅವರನ್ನು ಬಂಧಿಸುವಂತೆ ರಾವಲ್ಪಿಂಡಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ ಬೆನ್ನಲ್ಲೇ ಪಿಪಿಪಿ ಪಕ್ಷವು ನೂತನ ಅಭ್ಯರ್ಥಿಯನ್ನು ಶುಕ್ರವಾರ ಘೋಷಿಸಿತ್ತು.

English summary
The 61-year-old Raja Parvez Ashraf, a leader of the ruling PPP, was today(Jun.22) elected by the National Assembly as Pakistan's new Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X