• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋನಾಲ್ಡೊ ಗೋಲು, ಸೆಮಿಸ್ ಗೆ ಪೋರ್ಚುಗೀಸರು

By Mahesh
|
Google Oneindia Kannada News
ವಾರ್ಸಾ, ಜೂ.22.: ನಾಯಕ ಕ್ರಿಶ್ಚಿಯಾನೋ ರೊನಾಲ್ಡೊ ಪ್ರಪ್ರಥಮ ಬಾರಿಗೆ ದೇಶಕ್ಕಾಗಿ ಅಧ್ಬುತ ಆಟವಾಡಿ ಆಪತ್ಭಾಂದವನಾಗಿ ಮೆರೆದಿದ್ದಾರೆ. ಜೆಕ್ ರಿಪಬ್ಲಿಕ್ ವಿರುದ್ಧ ನಡೆದ ಕ್ವಾರ್ಟರ್ ಫೈನಲಿನಲ್ಲಿ ರೊನಾಲ್ಡೊ ಹೆಡ್ಡರ್ ಮೂಲಕ ಬಾರಿಸಿದ ಗೋಲಿನ ನೆರವಿನಿಂದ ಪೋರ್ಚುಗಲ್ 1-0ಯಿಂದ ಜೆಕ್ ಗಣರಾಜ್ಯವನ್ನು ಸೋಲಿಸಿದೆ. ಪೋರ್ಚುಗಲ್ ಸೆಮಿಫೈನಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಪೋರ್ಚುಗಲ್ ಗೆಲುವಿನ ನಿರೀಕ್ಷೆ ಇತ್ತಾದರೂ ರೋನಾಲ್ಡೊ ಪ್ರಾಬಲ್ಯ ಮೆರೆಯುವ ಬಗ್ಗೆ ಅನುಮಾನವಿತ್ತು. ಆದರೆ, ಪಂದ್ಯದುದ್ದಕ್ಕೂ ಮಿಂಚಿದ ರೊನಾಲ್ಡೊ ಆಕರ್ಷಕ ಪ್ರದರ್ಶನ ನೀಡಿದರು. ಸೆಮಿಫೈನಲಿನಲ್ಲಿ ಪೋರ್ಚುಗಲ್ ಹಾಲಿ ಚಾಂಪಿಯನ್ ಸ್ಪೇನ್ ಅಥವಾ ಫ್ರಾನ್ಸ್ ನ್ನು ಎದುರಿಸಲಿದೆ.

ಜೆಕ್ ಗೋಲ್ ಕೀಪರ್ ನಾಯಕ ಪೀಟ್ರ್ ಸೆಕ್ ಅದ್ಭುತ ಗೋಲು ಕೀಪಿಂಗ್ ಮಾಡದಿದ್ದರೆ ಇನ್ನಷ್ಟು ಗೋಲುಗಳನ್ನು ಪೊರ್ಚುಗೀಸರು ಬಾರಿಸಿಬಿಡುತ್ತಿದ್ದರು. ಪಂದ್ಯ ಕೊನೆಗೊಳ್ಳಲು ಕೇವಲ ಹತ್ತು ನಿಮಿಷಗಳಿರುವಾಗ ಕ್ರಾಸ್ ಆಗಿ ಬಂದ ಪಾಸ್ ವೊಂದನ್ನು ಅದ್ಭುತವಾಗಿ ಹೆಡ್ಡರ್ ಮೂಲಕ ರೊನೋಲ್ಡೋ ಗೋಲು ಬಾರಿಸಿದರು.

ನೆದರ್ಲೆಂಡ್ ವಿರುದ್ಧ 2 ಗೋಲು ಬಾರಿಸಿದ್ದ ರೊನಾಲ್ಡೊಗೆ ಈ ಟೂರ್ನಮೆಂಟ್ ನಲ್ಲಿ ಇದು ಮೂರನೇ ಗೋಲು. ಮೊದಲ ಎರಡು ಪಂದ್ಯಗಳಲ್ಲಿ ಮೌನವಾಗಿದ್ದ ರೊನಾಲ್ಡೊ ಸತತ ಎರಡು ಪಂದ್ಯಗಳಲ್ಲಿ ಗೋಲು ಬಾರಿಸಿ ಎದುರಾಳಿಗಳಿಗೆ ನಡುಕ ಮೂಡಿಸಿದ್ದಾರೆ.

ಮೊದಲ 45 ನಿಮಿಷಗಳಲ್ಲಿ ರೋನಾಲ್ಡೊ ಹಾಗೂ ನಾನಿ ಎರಡು ಮೂರು ಬಾರಿ ಜೆಕ್ ರಕ್ಷಣಾ ವ್ಯೂಹ ಛಿದ್ರಗೊಳಿಸಿ ಗೋಲು ಗಳಿಸಲು ಯತ್ನಿಸಿದರೂ ಫಲ ಸಿಕ್ಕಿರಲಿಲ್ಲ. ಜೆಕ್ ತಂಡ ಪಂದ್ಯದ ಮೊದಲಾರ್ಧದಲ್ಲಿ ಉತ್ತಮ ಆಟವಾಡಿ ಪ್ರೇಕ್ಷಕರನ್ನು ರಂಜಿಸಿದರು.

English summary
Euro 2012 : With a lone goal by captain cristiano Ronaldo Portugal beat Czech Republic and entered Euro Cup football 2012 Semis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X