ಮಂಡ್ಯದ ಬಹುಪತ್ನಿವಲ್ಲಭ, ವಂಚಕ ಪ್ರಿನ್ಸಿ ಬಂಧನ

ಆರೋಪಿ ಬಿಎನ್ ರಘು @ ಟಿ ಸುರೇಶ್ @ ಡಾ. ಸುರೇಶ್ ಗೌಡ ಆ ಖತರನಾಕ್ ಬಹುವಲ್ಲಭ ಭೂಪತಿ. ಈತ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದವರು. ಆರೋಪಿ ಬಿಎನ್ ರಘುದು ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುವುದಷ್ಟೇ ಅಲ್ಲ; ಉದ್ಯೋಗಾಂಕ್ಷಿಗಳನ್ನು ಯಾಮಾರಿಸುವುದನ್ನೂ ಕಸುಬಾಗಿಸಿಕೊಂಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಉತ್ತರ ಕನ್ನಡ ಮತ್ತು ಬೆಂಗಳೂರು ಜಿಲ್ಲೆ ಇಬ್ಬರನ್ನು ಮದುವೆಯಾಗಿದ್ದ ಇವಯ್ಯ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಯುವತಿಯನ್ನು ಮದುವೆಯಾಗುವ ಹವಣಿಕೆಯಲ್ಲಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸಿಕ್ಕಿಬಿದ್ದಿದ್ದು ಹೇಗೆ: ವಂಚಕ ಪ್ರಿನ್ಸಿಪಾಲ್ ರಘು ಹೇಗೆ ಸಿಕ್ಕಿಬಿದ್ದನಪ್ಪಾ ಅಂದರೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸ್ ಹುದ್ದೆ ಕೊಡಿಸುವುದಾಗಿ ಶಾಂತಕುಮಾರಿ ಅವರನ್ನು ತನ್ನ ಮೋಸದ ಬಲೆಗೆ ಬೀಳಿಸಿಕೊಳ್ಳಲು ಯತ್ನಿಸುವಾಗ.
ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಾಂತಕುಮಾರಿಯಿಂದ 2 ಲಕ್ಷ ರುಪಾಯಿ ಹಣ ಪಡೆದಿದ್ದ. ಆದರೆ, ಅವರಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸಲು ವಿಫಲನಾಗಿದ್ದ. ಇದರಿಂದ ಕೆರಳಿದ ಶಾಂತಕುಮಾರಿ ಮನೆಯವರು ವಂಚಕ ಪ್ರಿನ್ಸಿ ರಘುಗೆ ಬೆಂಡೆತ್ತಿದ್ದಾರೆ. ಸಾಲದು ಅಂತ ಮದ್ದೂರು ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಪ್ರಿನ್ಸಿಪಾಲ್ ರಘುನನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ ಆತನ ಮದುವೆ ವಂಚನೆ ಜಾತಕ ಬಿಚ್ಚಿಕೊಂಡಿದೆ.
ಪ್ರಿನ್ಸಿಪಾಲ್ ರಘು ಜಾತಕ ಹೀಗಿದೆ: ರಘು ಮೊದಲು ಆಂಕೋಲಾದ ಇಜ್ಜಾಡ ಗ್ರಾಮದ ನಯನಾರನ್ನು ಮದ್ವೆಯಾದ. ಆಕೆಗೆ ಈಗ ಐದು ವರ್ಷದ ಮಗಳಿದ್ದಾಳೆ. ತದನಂತರ ಬೆಂಗಲೂರಿನ ಶಿಕ್ಷಕಿಯೊಬ್ಬರನ್ನು ಮದುವೆಯಾದ. ಈ ಶಿಕ್ಷಕಿಗೆ ಈಗ 3 ವರ್ಷದ ಮಗುವಿದೆ.
ವಿಚಾರಣೆಯಿಂದ ತಿಳಿದುಬಂದ ವಿಚಾರವೆಂದರೆ ಮದುವೆಯಾಗುವುದು ವರದಕ್ಷಿಣೆ ಗಿಟ್ಟಿಸುವುದನ್ನು ವಂಚಕ ಪ್ರಿನ್ಸಿಪಾಲ್ ರಘು ಕಾಯಕವನ್ನಾಗಿಸಿಕೊಂಡಿದ್ದ. ಎರಡನೆಯ ಪತ್ನಿ (ಶಿಕ್ಷಕಿ) ಮನೆಯವರು ಐಶಾರಾಮಿ ಕಾರು, 2 ಲಕ್ಷ ರುಪಾಯಿ ನಗದು, 300 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದಿದ್ದ.
Actually ರಘು ಪಿಯುಸಿ ಫೇಲಾಗಿದ್ದ. ಆದರೆ ಕಾಲಾಂತರದಲ್ಲಿ ಬೆಂಗಳೂರು ಸೇರಿಕೊಂಡು MA, D.Ed ಮತ್ತು P.hd certificateಗಳನ್ನು ಸಂಪಾದಿಸಿದ. ಆದರೆ ಕಷ್ಟಪಟ್ಟು ಓದಿದ್ದಲ್ಲ. ನಕಲಿ ಪದವಿ ಪ್ರಮಾಣಪತ್ರಗಳು ಅವು. ಈ ನಕಲಿ certificateಗಳನ್ನು ತೋರಿಸಿಯೇ ಹನಕೆರೆ D.Ed Collegeನಲ್ಲಿ ಪ್ರಿನ್ಸಿಪಾಲ್ ಪಟ್ಟ ಗಿಟ್ಟಿಸಿದ.












Click it and Unblock the Notifications