• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬೈ ಸಚಿವಾಲಯದಲ್ಲಿ ಬೆಂಕಿ, ಐವರು ಬಲಿ

By Mahesh
|
ಮುಂಬೈ, ಜೂ.21 : ಮಹಾರಾಷ್ಟ್ರ ಸರ್ಕಾರದ ಆಡಳಿತ ಕೇಂದ್ರ ಸಚಿವಾಲಯ ಕಟ್ಟಡಕ್ಕೆ ಬೆಂಕಿ ಅನಾಹುತಕ್ಕೆ ಸಿಲುಕಿದೆ. ಕಟ್ಟಡದ ಒಳಗೆ ನೂರಾರು ಮಂದಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟು ಹಲವರನ್ನ ರಕ್ಷಿಸಿದ್ದಾರೆ. ಆದರೂ, ಈ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಮಳಿಗೆಗಳಲ್ಲಿ ಮತ್ತೆರಡು ಶವ ಪತ್ತೆಯಾಗಿದ್ದು, ಇದರಿಂದ ಸತ್ತವರ ಸಂಖ್ಯೆ ಐದಕ್ಕೇರಿದೆ.

ನಾಲ್ಕನೇ ಮಹಡಿಯಲ್ಲಿರುವ ಮಹಾರಾಷ್ಟ್ರದ ಸಚಿವ ಬಬ್ಬನ್ ರಾವ್ ಕ್ಯಾಬಿನ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಬಳಿಕ ಎಲ್ಲಾ ಕಡೆ ಹರಡಿತ್ತು. 25ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದರಿಂದ ರಕ್ಷಣಾ ಕಾರ್ಯ ಕೊಂಚ ವಿಳಂಬಗೊಂಡಿತ್ತು. ದ್ದು, ಇದರಲ್ಲಿ ಸಿಲುಕಿದ್ದ ಕೆಲವು ಮಂದಿ ಕಿಟಕಿ ಮೂಲಕ ಹೊರಗೆ ಬಂದು ತಮ್ಮ ಜೀವ ರಕ್ಷಿಸಿಕೊಂಡಿದ್ದರು.

ಬೆಂಕಿ ಗುರುವಾರ ಮಧ್ಯಾಹ್ನ ಸುಮಾರು 2.45ರ ವೇಳೆಗೆ ನಾಲ್ಕನೇ ಮಹಡಿಗೆ ಬಿದ್ದಿತ್ತು. ಆದರೆ ಇದು ಬಳಿಕ ಐದು, ಆರು ಹಾಗೂ ಏಳನೇ ಮಹಡಿಗೆ ಕೂಡ ವೇಗವಾಗಿ ಹಬ್ಬಿತ್ತು.

ಆದರ್ಶ ಹಗರಣದ ದಾಖಲೆ ಸೇಫ್: ಮಹಾರಾಷ್ಟ್ರ ಸರ್ಕಾರದ ಎಲ್ಲಾ ಸಚಿವರುಗಳು ಕಚೇರಿ ಈ ಕಟ್ಟಡದಲ್ಲಿದ್ದು, ದಾಖಲೆ ಪತ್ರಗಳು ಬಹುತೇಕ ಸುಟ್ಟು ಹೋಗಿರುವ ಸಾಧ್ಯತೆಗಳಿವೆ. ಬೆಂಕಿ ನಾಲ್ಕನೇ ಮಹಡಿಯಿಂದ ಐದು ಹಾಗೂ ಆರನೇ ಮಹಡಿಗೆ ಕೂಡ ವ್ಯಾಪಿಸಿತ್ತು. ಆದರೆ, ಆದರ್ಶ ಹಗರಣದ ಅಷ್ಟೂ ದಾಖಲೆಗಳು ಸುರಕ್ಷಿತವಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಬೆಂಕಿ ಅನಾಹುತದಲ್ಲಿ ಆದರ್ಶ ಹಗರಣದ ಕಡತಗಳು ನಾಶವಾಗಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿತ್ತು.

ಬೆಂಕಿ ಬಿದ್ದ ನಾಲ್ಕನೇ ಮಹಡಿಯಲ್ಲಿ ನಗರಾಭಿವೃದ್ಧಿ ಕಾರ್ಯಾಲಯವಿದೆ. ಬೆಂಕಿ ಆರನೇ ಮಹಡಿಗೆ ಕೂಡ ಹರಡಿದೆ. ಈ ಮಹಡಿಯಲ್ಲಿ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌವ್ಹಾಣ್ ಅವರ ಕಚೇರಿ ಕೂಡ ಇದೆ. ಆದರೆ ಬೆಂಕಿ ಬಿದ್ದ ವೇಳೆ ಮುಖ್ಯಮಂತ್ರಿಗಳು ಹೊರಗಡೆ ಹೋಗಿದ್ದು, ಇದರಿಂದಾಗಿ ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ. ದಕ್ಷಿಣ ಮುಂಬಯಿಯಲ್ಲಿ ಈ ಕಟ್ಟಡವಿದ್ದು ಹೈಕೋರ್ಟ್ ಕಟ್ಟಡ ಕೂಡ ಇದರ ಸಮೀಪದಲ್ಲಿಯೇ ಇದೆ.

ಆರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಪೃಥ್ವಿರಾಜ್ ಚೌವಾಣ್ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕಚೇರಿಗಳಿಗೆ ಕೂಡ ಹೆಚ್ಚಿನ ಹಾನಿಯಾಗಿದೆ. ಐದನೇ ಹಾಗೂ ಆರನೇ ಮಹಡಿಯಲ್ಲಿ ಸಿಲುಕಿದ್ದ 65ಕ್ಕೂ ಹೆಚ್ಚು ಮಂದಿಯನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯ ಪಿಆರ್ ಒ ಸತೀಶ್ ಲಲಿತ್, ಉಪಮುಖ್ಯಮಂತ್ರಿ ಕಚೇರಿಯಲ್ಲಿ ಪಿಆರ್ ಒ ಆಗಿರುವ ವಿಶಾಲ್ ಧಗೆ ಮತ್ತು ಸಂಜಯ್ ದೇಶ್ ಮುಖ್, ಗೃಹ ಸಚಿವರ ಪಿಆರ್ ಒ ಕಿಶೋರ್ ಗಂರ್ಗುಡೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರು ದಟ್ಟ ಹೊಗೆಯಿಂದಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಧ್ವಜ ರಕ್ಷಕರು: ಸಚಿವಾಲಯಕ್ಕೆ ಬೆಂಕಿ ಬಿದ್ದಾಗ ಎಲ್ಲರೂ ತಮ್ಮ ಪ್ರಾಣ ರಕ್ಷಣೆಗೆ ನೆರವಿಗಾಗಿ ಹಾತೊರೆಯುತ್ತಿದ್ದರು. ಆದರೆ, 7 ಜನ ಸಿಬ್ಬಂದಿ ಮಾತ್ರ ತಮ್ಮ ಪ್ರಾಣ ರಕ್ಷಣೆಗಿಂ ಸಚಿವಾಲಯದ ಮೇಲೆ ಹಾರಾಡುತ್ತಿದ್ದ ಭಾರತದ ರಾಷ್ಟ್ರಧ್ವಜವನ್ನು ರಕ್ಷಿಸಲು ಮುಂದಾದರು.

ಅಗ್ನಿಶಾಮಕ ದಳ ಸಿಬ್ಬಂದಿಗಳ ಸೂಚನೆ, ಎಚ್ಚರಿಕೆಯನ್ನು ಲೆಕ್ಕಿಸದೆ ರಾಷ್ಟ್ರಧ್ವಜಕ್ಕೆ ಯಾವುದೇ ಹಾನಿ ಉಂಟಾಗದೆ ರಕ್ಷಿಸಿದ್ದಾರೆ. ಮಹಾರಾಷ್ಟ್ರದ ಈ ಧ್ವಜರಕ್ಷಕರ ಸಾಹಸವನ್ನು ಮೆಚ್ಚಿ ಎಲ್ಲರೂ ಕೊಂಡಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Massive fire broke out at the Mumbai secretariat office on Thursday, The fire was reported from the cabin of Maharashtra state minister and NCP leader Babanrao Pachpute said fire brigade sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more