ಇದು ಬೆತ್ತಲೆ ಚಿತ್ರವಲ್ಲ, ಬೆತ್ತಲೆ ಎದೆಗಾರ್ತಿ ರಚಿಸಿದ ಚಿತ್ರ

ದೊಡ್ಡ ಕಾನ್ವಸ್ ಮೇಲೆ ಚಿತ್ರ ಬರೆಯಲು ಬಂದ ಮಹಿಳಾ ಸ್ಪರ್ಧಿ ಮಾಡಿರುವ ಕೃತ್ಯದಿಂದ ಥೈಲೆಂಡ್ ತಲೆ ತಗ್ಗಿಸಿದೆ. ಸಂಸ್ಕೃತಿ ಇಲಾಖೆ ಸಚಿವಾಲಯ ಮಹಿಳಾ ಸ್ಪರ್ಧಿಯ ಬೆತ್ತಲೆ ಚಿತ್ರ ರಚನೆ ಬಗ್ಗೆ ಸ್ಪಷ್ಟಣೆ ಕೋರಿ 'Thailand has Got Talent'ರಿಯಾಲಿಟಿ ಶೋ ನಿರ್ಮಾಪಕರಿಗೆ ನೋಟಿಸ್ ನೀಡಿದ್ದಾರೆ.
ಸಹಜತೆ,ಸಭ್ಯತೆ, ಕ್ರಿಯಾಶೀಲತೆಯ ಎಲ್ಲೆ ಮೀರಿದ ಕೃತ್ಯ ಇದಾಗಿದ್ದು, ಬೆತ್ತಲೆ ಸಂಸ್ಕೃತಿ ನಮ್ಮ ದೇಶಕ್ಕೆ ತಟ್ಟಲು ಬಿಡುವುದಿಲ್ಲ ಎಂದು ಸಂಸ್ಕೃತಿ ಸಚಿವ ಸುಕುಮೋಲ್ ಖುನಪೋಮ್ ಹೇಳಿದ್ದಾರೆ.
ಲೈವ್ ಕಾರ್ಯಕ್ರಮವೊಂದರಲ್ಲಿ ಈ ರೀತಿ ಘಟನೆ ನಡೆದಿರುವುದು ಇದೇ ಮೊದಲು. ಆ ಮಹಿಳಾ ಸ್ಪರ್ಧಿ ಏಕೆ ಹೀಗೆ ಮಾಡಿದಳೋ ಗೊತ್ತಿಲ್ಲ. ಮೊದಲೇ ಸೂಚನೆ ಸಿಕ್ಕಿದ್ದರೆ ಎಡಿಟ್ ಮಾಡಿ ಪ್ರಸಾರ ಮಾಡಬಹುದಾಗಿತ್ತು ಎಂದು ಕಾರ್ಯಕ್ರಮದ ನಿರ್ವಾಹಕರು ಹೇಳಿದ್ದಾರೆ.
ಏನು ಮಾಡಿದಳು ಗೋತ್ತಾ?: ಟ್ಯಾಲೆಂಟ್ ಶೋ ಗೆ ಎಲ್ಲರಂತೆ ಸ್ಪರ್ಧಿಯಾಗಿ ಬಂದ ಮಹಿಳಾ ಸ್ಪರ್ಧಿ ದೊಗಳೆ ಅಂಗಿ ಧರಿಸಿ, ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದಳು. ದೊಡ್ಡದಾದ ಪೇಂಟ್ ಬ್ರಷ್ ಆಕೆಗೆ ನೀಡಲಾಯಿತು. ಮೂವರು ಜಡ್ಜ್ ಗಳಿಗೆ ಬೆನ್ನು ತೋರಿಸುತ್ತಾ ದೊಡ್ಡ ಕ್ಯಾನ್ವಸ್ ಮೇಲೆ ಏನೋ ಬಣ್ಣ ಬಳಿದು ಬೊಂಬೆ ರೀತಿ ಏನನ್ನೂ ಚಿತ್ರಿಸತೊಡಗಿದಳು.
ನಂತರ ಕುಕ್ಕರಗಾಲಲ್ಲಿ ಕುಳಿದು ತನ್ನ ಅಂಗಿ ಗುಂಡಿಗಳನ್ನು ಒಂದೊಂದಾಗಿ ಬಿಚ್ಚುತ್ತಾ, ಪೋಲ್ ಡ್ಯಾನ್ಸರ್ ಮಾದರಿಯಲ್ಲಿ ನರ್ತಿಸಿ, ನುಲಿಯ ತೊಡಗಿದಳು. ಆಕೆ ಏನು ಮಾಡುತ್ತಿದ್ದಾಳೆ ಎಂಬು ಜಡ್ಜ್ ಗಳಿಗೆ ತಿಳಿಯುವಷ್ಟರಲ್ಲಿ ಅಂಗಿಯನ್ನು ಕಿತ್ತು ಎಸೆದಿದ್ದಳು.
ಮಹಿಳಾ ಜಡ್ಜ್ ಒಬ್ಬರು ಸ್ಪರ್ಧೆಗೆ ಅನರ್ಹ ಎಂದು ರೆಡ್ ಸಿಗ್ನಲ್ ಬಟನ್ ಒತ್ತುವಷ್ಟರಲ್ಲಿ ಮಹಿಳೆ ಬ್ರಾ ಕಿತ್ತೊಗೆದಿದ್ದಳು. ಬೆತ್ತಲೆ ಎದೆಯ ಮೇಲೆ ಅಲ್ಲಿಂದ ವಿವಿಧ ಬಣ್ಣದ ಪೇಂಟ್ ಗಳನ್ನು ಸುರಿದು ಕೊಳ್ಳಲಾರಂಭಿಸಿದಳು.
ನಂತರ ವರ್ಣಮಯವಾದ ತನ್ನ ಎದೆ ಭಾಗ ಕಾನ್ವಸ್ ಮೇಲೆ ಉಜ್ಜತೊಡಗಿದಳು. ಕೆಲ ನಿಮಿಷದ ನಂತರ ಜಡ್ಜ್ ಗಳ ಸಮ್ಮುಖದಲ್ಲಿ ನಿಂತು ಹಲ್ಲುಕಿರಿಯ ತೊಡಗಿದಳು.
23 ವರ್ಷದ ಈ ಸ್ಪರ್ಧಿಯ ಕೃತ್ಯವನ್ನು ಜಡ್ಜ್ ಗಳು ಖಂಡಿಸಿ, ದೇಶದ ಸಂಸ್ಕೃತಿ ನಾಶವಾಗಿಬಿಟ್ಟಿದೆ ಎಂದರು. ಆದರೆ, ಅಷ್ಟರಲ್ಲಿ ಅನರ್ಥವಾಗಿಬಿಟ್ಟಿತ್ತು. ಮಹಿಳಾ ಸ್ಪರ್ಧಿಯ bare act ವಿಡಿಯೋ ಯ್ಯೂಟ್ಯೂಬ್ ಸೇರಿ ಜನಪ್ರಿಯತೆ ಗಳಿಸತೊಡಗಿತ್ತು.












Click it and Unblock the Notifications