ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋತು ಗೆದ್ದ ಫ್ರಾನ್ಸಿಗೆ ಸ್ವೀಡನ್ನಿನಿಂದ ಪಾಠ

By Mahesh
|
Google Oneindia Kannada News

France through but only after Swedish lesson
ಕೀವ್, ಜೂ.20: ಅಂತಿಮ ಲೀಗ್ ಪಂದ್ಯದಲ್ಲಿ ಸ್ವೀಡನ್ ವಿರುದ್ಧ 2-0 ಅಂತರದಿಂದ ಸೋಲುಂಡರೂ ಫ್ರಾನ್ಸ್ ಯುರೋ ಕಪ್ ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಫ್ರಾನ್ಸ್ ತಂಡದ ಗರ್ವಭಂಗ ಮಾಡಿದ ಸ್ವೀಡನ್ನರು ಸರಿಯಾದ ಪಾಠ ಕಲಿಸಿ, ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಗ್ರೂಪ್ ಡಿ ವಿಭಾಗದಲ್ಲಿ ಇಂಗ್ಲೆಂಡ್ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇಂಗ್ಲೆಂಡ್ ತಂಡ ಏಕೈಕ ಗೋಲಿನಿಂದ ಅತಿಥೇಯ ಉಕ್ರೇನ್ ತಂಡವನ್ನು ಮಣಿಸಿದೆ.

ಮೊದಲ ಎರಡು ಪಂದ್ಯಗಳಲ್ಲಿ ತೋರಿಸದಿದ್ದ ಕಿಚ್ಚನ್ನು ಕೊನೆಯ ಪಂದ್ಯದಲ್ಲಿ ತೋರಿಸಿದ ಸ್ವೀಡನ್ ಪಂದ್ಯದುದ್ದಕ್ಕೂ ಉತ್ತಮ ಆಟ ಪ್ರದರ್ಶಿಸಿತು. ನಾಯಕ ಇಬ್ರಾಹಿಮೊವಿಕ್ ಹೊಡೆದ ಗೋಲಂತೂ ಅದ್ಭುತವಾಗಿತ್ತು. ಇಟಲಿಯ ಬಾಲೋಟೆಲ್ಲಿ ಹೊಡೆದ ಕ್ರಾಸ್ ಪಲ್ಟಿ ಹೊಡೆದ ಪುನಾರವರ್ತನೆ ಮಾಡಿದ ಇಬ್ರಾಹಿಮೊವಿಕ್ ಉತ್ತಮ ಗೋಲು ದಾಖಲಿಸಿದರು.

ಮೊದಲಾರ್ಧದಲ್ಲೇ ಫ್ರಾನ್ಸ್ ಸಮಸ್ಯೆಗಳಿಂದ ಒದ್ದಾಡಿತು. ದ್ವಿತೀಯಾರ್ಧದಲ್ಲಿ ಉತ್ತಮವಾಗಿ ಆಡಿದ ಸ್ವೀಡನ್ ಝಲ್ಟನ್ ಇಬ್ರಾಹಿಮೊವಿಕ್ ಬಾರಿಸಿದ ಗೋಲಿನಿಂದ ಮುನ್ನಡೆ ಪಡೆಯಿತು. ಸೆಬಸ್ಟಿನ್ ಲಾರ್ಸೆನ್ ಬಾರಿಸಿದ ಗೋಲಿನಿಂದ ಸ್ವೀಡನ್ ಕಳೆದೆರಡು ಪಂದ್ಯಗಳಲ್ಲಿನ ಸೋಲಿನಿಂದ ಹೊರಬಂದು ಮೊದಲ ಅಂಕ ಪಡೆಯಿತು.

ಲೀಗ್ ಎಲ್ಲಾ ಪಂದ್ಯ ಸೋತಿದ್ದ ಸ್ವೀಡನ್ ಭರ್ಜರಿ ಆಟದ ಪ್ರದರ್ಶನ ನೀಡಿ ಫ್ರಾನ್ಸ್ ನ್ನು ತಬ್ಬಿಬ್ಬು ಮಾಡಿತು. ಆದರೆ ಸ್ವೀಡನ್ ಆಟಗಾರರು ತಮ್ಮ ಉತ್ತಮ ಆಟವನ್ನು ಪ್ರದರ್ಶಿಸುವಾಗ ತುಂಬಾ ವಿಳಂಬವಾಗಿತ್ತು.

ಈ ಸೋಲಿನೊಂದಿಗೆ ಫ್ರಾನ್ಸ್ ನ 23 ಗೆಲುವುಗಳ ನಾಗಾಲೋಟಕ್ಕೆ ತಡೆಬಿತ್ತು. ಪಂದ್ಯದಲ್ಲಿ ಉಕ್ರೇನ್ ವಿರುದ್ಧ ಇಂಗ್ಲೆಂಡ್ ಗೆಲುವು ದಾಖಲಿಸಿಕೊಂಡ ಕಾರಣ ಗ್ರೂಪ್ ಡಿ ವಿಭಾಗದಲ್ಲಿ ಫ್ರಾನ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕ್ವಾರ್ಟರ್ ಫೈನಲಿನಲ್ಲಿ ಅದು ಸ್ಪೇನ್ ವಿರುದ್ಧ ಆಡಲಿದೆ.

ಸ್ವೀಡನ್ 2 -0 ಫ್ರಾನ್ಸ್
7(5) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 14(10)
2 ಕಾರ್ನರ್ಸ್ 8
17 ಫೌಲ್ಸ್ 14
0 ಆಫ್ ಸೈಡ್ 1
2 ಹಳದಿ ಕಾರ್ಡ್ 1
0 ಕೆಂಪು ಕಾರ್ಡ್ 0

ಬಲಿಷ್ಠ ಫ್ರಾನ್ಸ್ ವಿರುದ್ಧ 1969ರ ನಂತರ ಅಥವಾ 43 ವರ್ಷಗಳ ನಂತರ ಮೊಟ್ಟ ಮೊದಲ ಜಯ ದಾಖಿಲಿಸಿ ಸ್ವೀಡನ್ ಸಾಧನೆ ಮೆರೆದಿದೆ. 2006ರ ವಿಶ್ವಕಪ್ ನ ನಾಕೌಟ್ ಹಂತದ ನಂತರ ಫ್ರಾನ್ಸ್ ಕೂಡಾ ಯುರೋ ಕಪ್ ನಲ್ಲಿ ನಾಕೌಟ್ ಹಂತ ತಲುಪಿದೆ.

ಫ್ರಾನ್ಸ್ ಪರ ಕರೀಮ್ ಬೆನ್ಜಿಮಾ, ರಿಬೇರಿ, ಬೆನ್ ಆರ್ಫಾ ಉತ್ತಮ ಆಟ ಪ್ರದರ್ಶಿಸಿದರೆ, ನಸ್ರಿ ಸಪ್ಪಾಗಾದರು. 54ನೇ ನಿಮಿಷದಲ್ಲಿ ಇಬ್ರಾಹಿಮೊವಿಕ್ ಹಾಗೂ 90+1ನಿಮಿಷದಲ್ಲಿ ಲಾರ್ಸನ್ ಗೋಲು ಹೊಡೆದು ವಿಜೃಂಭಿಸಿದರು. ಆರಂಭದಲ್ಲಿ ತೊವೊನೆನ್ ಉತ್ತಮ ಆಟವಾಡಿದರೆ, ಒಲ್ಸನ್, ಮೆಲ್ಬರ್ಗ್ ಜೋಡಿ ಫ್ರಾನ್ ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು.

English summary
France qualified for the knockout stages of a major finals for the first time in six years here despite losing their final Euro 2012 Group D match 2-0 to already eliminated Sweden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X