ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಚ್ಚರ ಆಸೆಗೆ ರೋನಾಲ್ಡೋ ಡಬ್ಬಲ್ ಹೊಡೆತ

By Mahesh
|
Google Oneindia Kannada News

ಖಾರ್ಕಿವ್, ಜೂ.18: ಗ್ರೂಪ್ ಆಫ್ ಡೆತ್ ಎನಿಸಿರುವ ಬಿ ಗುಂಪಿನಲ್ಲಿ ಲೆಕ್ಕಾಚಾರ ಬುಡಮೇಲಾಗಿದೆ. ಪೋರ್ಚುಗಲ್ ತಂಡದ ನಾಯಕ ರೋನಾಲ್ಡೊ ಭರ್ಜರಿ ಆಟದಿಂದಾಗಿ ಹಾಲೆಂಡ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

2-1 ಅಂತರದಿಂದ ಡಚ್ಚರನ್ನು ಬಗ್ಗುಬಡಿದ ಪೋರ್ಚುಗೀಸರು ಕ್ವಾಟರ್ ಫೈನಲ್ ಹಂತಕ್ಕೇರಿದೆ. 1980ರ ನಂತರ ಮೊಟ್ಟ ಮೊದಲ ಬಾರಿಗೆ ಹಾಲೆಂಡ್ ತಂಡ ಯುರೋ ಟೂರ್ನಿಯ ಲೀಗ್ ಹಂತದಿಂದ ನಿರ್ಗಮಿಸಿ ಕಳಪೆ ಸಾಧನೆ ಮಾಡಿದೆ.

ಡಚ್ಚರಿಗೆ ಲಕ್ ಇಲ್ಲ: ಮೊದಲೇ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಡಚ್ಚರಿಗೆ ಅದೃಷ್ಟ ಕೂಡಾ ಕೈಕೊಟ್ಟಿತು. ಜಮರ್ನಿ ಮೇಲೆ ಡೆನ್ಮಾರ್ಕ್ ಮೇಲೆ ಭರ್ಜರಿ ಗೆಲುವು ಸಾಧಿಸಿು. ಪೋರ್ಚುಗಲ್ ವಿರುದ್ಧ ಕನಿಷ್ಠ 2 ಗೋಲುಗಳ ಅಂತರಿಂದ ಗೆಲ್ಲಬೇಕಿದ್ದ ಡಚ್ಚರು ಕೇವಲ 1 ಗೋಲು ಮಾತ್ರಗಳಿಸಿತು.

ಆಟಗಾರರ ದೈಹಿಕ ಸಾಮರ್ಥ್ಯದ ತೊಂದರೆ ನಡುವೆಯೂ ಜರ್ಮನಿ ತಂಡದ ಮಿಡ್ ಫೀಲ್ಡರ್ ಗಳಿಗೆ ಸರಿ ಸಮಾನನಾಗಿ ನಿಲ್ಲ ಬಲ್ಲ ಮಿಡ್ ಫೀಲ್ಡರ್ ಗಳನ್ನು ವಾನ್ ಮಾರ್ವಿಜಿಕ್ ಕಣಕ್ಕಿಳಿಸಿದ್ದರೂ ಫಲ ಸಿಗಲಿಲ್ಲ.

ಪೋರ್ಚುಗಲ್ ನಾಯಕ ಕ್ರಿಶ್ಚಿಯಾನೋ ರೋನಾಲ್ಡೊ ಇದ್ದಕ್ಕಿದ್ದಂತೆ ಉತ್ತಮ ಲಯಕ್ಕೆ ಮರಳಿ, ಡಚ್ಚರಿಗೆ ಕಾಟ ಕೊಟ್ಟಿದ್ದಲ್ಲದೆ 2 ಗೋಲು ಬಾರಿಸಿ ತಂಡವನ್ನು ಕ್ವಾಟರ್ ಫೈನಲ್ ಹಂತ ತಲುಪಿಸಿದರು.

ಪೋರ್ಚುಗಲ್ 2 - 1 ನೆದರ್ಲೆಂಡ್
13(9) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 8(5)
7 ಕಾರ್ನರ್ಸ್ 5
17 ಫೌಲ್ಸ್ 12
4 ಆಫ್ ಸೈಡ್ 1
1 ಹಳದಿ ಕಾರ್ಡ್ 2
0 ಕೆಂಪು ಕಾರ್ಡ್ 0
English summary
Portugal beat the Netherlands 2-1 to set up a Euro 2012 quarter-final with the Czech Republic and condemn the Dutch to a first group-stage European Championship exit since 1980.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X