• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತಿಥೇಯ ಪೋಲೆಂಡ್ ಔಟ್, ಜೆಕ್ ಕ್ವಾಟರ್ಸ್ ಗೆ ಎಂಟ್ರಿ

By Mahesh
|
Czech Republic beat Poland
ವ್ರಾಕ್ಲಾ, ಜೂ.17: ಅತಿಥೇಯ ತಂಡ ಪೋಲೆಂಡ್ ಯುರೋ 2012 ಟೂರ್ನಿಯಿಂ ಹೊರಬಿದ್ದಿದೆ. ಜೆಕ್ ರಿಪಬ್ಲಿಕ್ ವಿರುದ್ಧ ಏಕೈಕ ಗೋಲಿನ ಸೋಲು ಅನುಭವಿಸಿ ಎ ಗುಂಪಿನ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದು, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ಜೆರಾಸಕ್ ದ್ವಿತೀಯಾರ್ಧದಲ್ಲಿ ಹೊಡೆದ ಏಕೈಕ ಗೋಲಿನ ಮೂಲಕ 2004ರ ಚಾಂಪಿಯನ್ಸ್ ಗ್ರೀಸ್ ಜೊತೆಗೆ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದೆ. ಪಂದ್ಯದ ಮೊದಲಾರ್ಧ ಪೋಲೆಂಡ್ ಭರ್ಜರಿ ಪ್ರದರ್ಶನ ನೀಡಿ ಜೆಕ್ ತಂಡಕ್ಕೆ ಆಘಾತ ನೀಡುವ ನಿರೀಕ್ಷೆ ಹುಸಿಯಾಯಿತು.

72ನೇ ನಿಮಿಷದಲ್ಲಿ ಜೆರಾಸಿಕ್ ಬಾರಿಸಿದ ಗೋಲು ಎ ಗುಂಪಿನಲ್ಲಿ ಲೀಗ್ ಹಂತದಲ್ಲಿ 2 ಗೆಲುವು 1 ಸೋಲಿನ ಮೂಲಕ 6 ಅಂಕ ಕಲೆಹಾಕಿ ಅಗ್ರಸ್ಥಾನ ಗಳಿಸಿತು. ಗ್ರೀಸ್ ತಂಡ 1 ಗೆಲುವು, 1 ಡ್ರಾ, 1 ಸೋಲಿನ ಮೂಲಕ 4 ಅಂಕಗಳಿಸಿ ಎರಡನೇ ಸ್ಥಾನ ಪಡೆದರೆ, ರಷ್ಯಾ ಕೂಡಾ 4 ಅಂಕಗಳಿಸಿದೆ.

ಆದರೆ, ರಷ್ಯಾ ವಿರುದ್ಧ ಪೊಲೆಂಡ್ ಗೆದ್ದಿರುವುದು ಹಾಗೂ ಗೋಲು ಪರ-ವಿರೋಧ ಎಣಿಕೆಯಲ್ಲಿ ಗ್ರೀಸ್ ಕೊನೆ ಹಂತದಲ್ಲಿ ಅಚ್ಚರಿಯ ಫಲಿತಾಂಶದೊಂದಿಗೆ ಗ್ರೀಸ್ ಮುಂದಿನ ಹಂತಕ್ಕೇರಿದೆ. ಗ್ರೀಸ್ ಪರ 3- ವಿರೋಧ 3 ಹೊಡೆಸಿಕೊಂಡಿದ್ದರೆ, ರಷ್ಯಾ ಪರ 3- ವಿರೋಧ 3 ಗೋಲು ಬಂದಿದೆ.

ಈವರೆಗಿನ 5 ಯುರೋ ಟೂರ್ನಿಗಳಲ್ಲಿ ಜೆಕ್ ರಿಪಬ್ಲಿಕ್ 3 ಬಾರಿ ನಾಕೌಟ್ ಹಂತ ತಲುಪಿದ ಸಾಧನೆ ಮೆರೆದರೆ, ಪೋಲೆಂಡ್ ತಂಡ ಒಮ್ಮೆ ಕೂಡಾ ಕ್ವಾಟರ್ ಫೈನಲ್ಸ್ ಹಂತ ತಲುಪಿಲ್ಲ.

ಪಂದ್ಯದ ಆರಂಭದ ಎರಡು ನಿಮಿಷಗಳಲ್ಲಿ ಪೋಲೆಂಡಿನ ಡರಿಯಾಜ್ ಡುಡ್ಕ ಬೈಸಿಕಲ್ ಕಿಕ್ ಮೂಲಕ ಗೋಲು ಹೊಡೆಯಲು ಯತ್ನಿಸಿ ವಿಫಲರಾದರು. ಲುಡೊವಿಕ್ ಒಬ್ರಾನಿಕ್ ಫ್ರೀ ಕಿಕ್ ಕೂಡಾ ಗೋಲು ಪಟ್ಟಿಯ ಅಂಚು ತಗುಲಿ ಹೊರಬಿತ್ತು.

ಸೆಬಾಸ್ಟಿಯನ್ ಬೊನಿಶ್ಚ್ ಕೂಡಾ ಟಾರ್ಗೆಟ್ ಮಿಸ್ ಮಾಡಿಕೊಂಡರು. ರಾಬರ್ಟ್ ಲೀವನ್ಡೋಸ್ಕಿ ಸಿಕ್ಕ ಅವಕಾಶವನ್ನು ಹಾಳುಗೆಡವಿ ಗೋಲ್ ಪೋಸ್ಟ್ ನಿಂದ ಮೇಲಕ್ಕೆ ಕಿಕ್ ಹೊಡೆದು ನಿರಾಶೆ ಪಟ್ಟರು.

ಜೆಕ್ ರಿಪಬ್ಲಿಕ್ 1 - 0 ಪೋಲೆಂಡ್
7(4) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 9(7)
6 ಕಾರ್ನರ್ಸ್ 6
20 ಫೌಲ್ಸ್ 22
3 ಆಫ್ ಸೈಡ್ 1
3 ಹಳದಿ ಕಾರ್ಡ್ 5
0 ಕೆಂಪು ಕಾರ್ಡ್ 0

ನಂತರ ಪೋಲೆಂಡ್ ನಾಯಕ ಜಾಕುಬ್ ಬ್ಲಾಸ್ಜಿಕೊಸ್ಕಿ ಹಾಗ್ ಉಕಾಸ್ಜ್ ಪಿಸಾಜೆಕ್ ಜೊತೆಗೂಡಿದ ಪೊಲಾಂಸ್ಕಿ ದಾಳಿಯನ್ನು ಮುಂದುವರೆಸಿದರು. ಪಿಲಾರ್, ಕೊಲಾರ್ ಅಲ್ಲದೆ ಬರಾಸ್ ಕೂಡಾ ಉತ್ತಮ ಸೆಣಸಾಟ ತೋರಿದರೂ ಅದೃಷ್ಟ ಕೈಗೂಡಲಿಲ್ಲ.

ಪಂದ್ಯದ 90 ನಿಮಿಷದ ಅಧಿಕ ಸಮಯ 5ನೇ ನಿಮಿಷ ಜಾರಿಯಲ್ಲಿದ್ದಾಗಲೂ ಲೆವನ್ದೋಸ್ಕಿ ಹೊಡೆದ ಕಿಕ್ ಗೋಲು ಪೋಸ್ಟ್ ಒಳ ಸೇರಲಿಲ್ಲ. ಪೋಲೆಂಡ್ ಕ್ವಾಟರ್ ಆಸೆ ಕೈಗೂಡಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Co-hosts Poland crashed out of the European Championship as they lost 1-0 to the Czech Republic at the Municipal Stadium here today with their opponents winning Group A.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more