ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಆಸೆಗೆ ಪೆಟ್ಟು, ಫ್ರಾನ್ಸ್ ಮರು ಹುಟ್ಟು

By Mahesh
|
Google Oneindia Kannada News

France beat co-host Ukraine 2-0
ಡೊನೆಶ್ಕ್, ಜೂ.16: ಅತಿಥೇಯ ಉಕ್ರೇನ್ ತಂಡದ ನಾಕೌಟ್ ಹಂತದ ಕನಸಿಗೆ ಪೆಟ್ಟು ಕೊಟ್ಟ ಫ್ರಾನ್ಸ್ ಮರುಹುಟ್ಟು ಪಡೆದಿದೆ. ಜಿದಾನೆ ಡಿಚ್ಚಿ ಪ್ರಕರಣದ ನಂತರ ಮೊದಲ ಬಾರಿಗೆ ಜಯ ದಾಖಲಿಸಿದ ಫ್ರಾನ್ಸ್ ತನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಉಕ್ರೇನ್ ತಂಡದ ಮೇಲೆ 0-ಗೋಲುಗಳ ಅಂತರದಿಂದ ಜಯ ದಾಖಲಿಸಿದೆ.

ಯುರೋ ಕಪ್ ನ ನಾಕೌಟ್ ಹಂತಕ್ಕೇರುವ ಫ್ರಾನ್ಸ್ ಕನಸಿಗೆ ಮತ್ತೆ ಜೀವ ಬಂದಿದೆ. ಲೀಗ್ ನ ಕೊನೆ ಪಂದ್ಯದಲ್ಲಿ ಮತ್ತೊಮ್ಮೆ ಸ್ವೀಡನ್ ಮೇಲೆ ತೋರಿಸಿದ ಪರಕ್ರಾಮ ಮೆರೆಯಬೇಕಿದೆ.

ಅತಿಥೇಯ ಉಕ್ರೇನ್ ಕೂಡಾ ಉತ್ತಮ ಆಟ ಪ್ರದರ್ಶಿಸಿ, ಸ್ವೀಡನ್ ವಿರುದ್ಧ ಗೆಲುವು ಪಡೆದಿತ್ತು. ಆದರೆ, ಫ್ರಾನ್ಸ್ ದಾಳಿಗೆ ಸಿಲುಕಿ ಪಂದ್ಯ ಕಳೆದುಕೊಂಡಿತು. ಆದರೆ, ಉಕ್ರೇನ್ ದಾಳಿ ಸ್ವೀಡನ್ ಗಿಂತ ಉತ್ತಮ ವಾಗಿದ್ದು, ದುರ್ಬಲಗೊಂಡಿರುವ ಇಂಗ್ಲೆಂಡ್ ರಕ್ಷಣಾ ವ್ಯೂಹವನ್ನು ಸುಲಭವಾಗಿ ಹೊಡೆದು ಹಾಕುವ ಸಾಧ್ಯತೆಯಿದೆ.

ಇಂಗ್ಲೆಂಡ್ ಪರ ಟೆರಿ ಹಾಗೂ ಜೆರಾಲ್ಡ್ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಉಕ್ರೇನ್ನಿನ ಅನುಭವಿ ಆಟಗಾರ ಶೆವ್ಚೆಂಕೋ ದಾಳಿ ತಡೆಯುವುದು ಕಷ್ಟ ಎಂಬ ವಿಷಯ ಇಂಗ್ಲೆಂಡಿನ ಹೊಸ ಮ್ಯಾನೇಜರ್ ಹಾಜ್ಸನ್ ಗೂ ಗೊತ್ತಿದೆ. ಹೀಗಾಗಿ ಟೂರ್ನಿಯ ಅಂತಿಮ ಲೀಗ್ ಪಂದ್ಯ ಕೂಡಾ ಕುತೂಹಲ ಕೆರಳಿಸಲಿದೆ.

ಫ್ರಾನ್ಸ್ ವಿರುದ್ಧ ಕೂಡ ವೇಗದ ಆರಂಭವನ್ನೇ ಪಡೆದ ಉಕ್ರೇನ್ ಮತ್ತೊಂದು ಗೆಲುವು ದಾಖಲಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಡ್ರಾ ಮಾಡಿಕೊಂಡಿದ್ದ ಫ್ರಾನ್ಸ್ ಗೆ ಈ ಗೆಲುವು ತುಂಬಾ ಮುಖ್ಯವಾಗಿತ್ತು.

ಪಂದ್ಯದ ವೇಳೆ ಜೋರಾಗಿ ಮಳೆ ಬಂದ ಕಾರಣ ಒಂದು ಗಂಟೆ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಪಂದ್ಯ ಆರಂಭವಾದ ಬಳಿಕ ಜೆರ್ಮಿ ಮೆಂನ್ಜ್ ಫ್ರಾನ್ಸ್ ಗೆ 1-0 ಮುನ್ನಡೆಯನ್ನು ಒದಗಿಸಿಕೊಟ್ಟು ಸ್ವದೇಶದ ಅಭಿಮಾನಿಗಳ ಕೇಕೆಗೆ ಕಡಿವಾಣ ಹಾಕಿದರು.

56ನೇ ನಿಮಿಷದಲ್ಲಿ ಯೊಹನ್ ಕಬಯೆ ಬಾರಿಸಿದ ಗೋಲಿನಿಂದ ಫ್ರಾನ್ಸ್ ತನ್ನ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಫ್ರಾನ್ಸ್ ಈ ಗೆಲುವಿನೊಂದಿಗೆ ಗ್ರೂಪ್ ಡಿ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

English summary
France won a match at a major tournament for the first time since Zinedine Zidane's head-butt, beating Ukraine 2-0 in a storm-delayed match at the European Championship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X