• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೀಕರ ಅಪಘಾತ, 32 ಶಿರಡಿ ಭಕ್ತರ ದುರ್ಮರಣ

By Mahesh
|
Shirdi Pilgrims Accident Osmanabad
ಉಸ್ಮಾನಾಬಾದ್, ಜೂ.16: ಹೈದಾರಾಬಾದಿನಿಂದ ಶಿರಡಿಗೆ ಹೋಗುತ್ತಿದ್ದ ಬಸ್ ಶನಿವಾರ ಮುಂಜಾನೆ ಸೇತುವೆಯಿಂದ ಬಿದ್ದು ಉಸ್ಮನಾಬಾದ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸುಮಾರು 32 ಜನ ಸ್ಥಳದಲ್ಲೇ ಮೃತಪಟ್ಟಿದ್ದು, 21ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ, ಮೃತಪಟ್ಟವರೆಲ್ಲ ಹೈದಾರಾಬಾದಿನವರು ಎಂದು ತಿಳಿದು ಬಂದಿದೆ. ಶಿರಡಿ ಸಾಯಿಬಾಬಾ ದೇಗುಲಕ್ಕೆ ಯಾತ್ರಾರ್ಥಿಗಳಾಗಿ ಹೊರಟಿದ್ದರು.

ಸುಮಾರು 2.40 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಸೋಲಾಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನತದೃಷ್ಟ ಯಾತ್ರಿಗಳು: ಹೈದರಾಬಾದ್ ನಿಂದ ಶಿರಡಿಗೆ ಹೊರಟಿದ್ದ ಬಸ್ ಶನಿವಾರ ಮುಂಜಾನೆ ನಾಲದುರ್ಗದಲ್ಲಿ ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದ ಪರಿಣಾಮ 32 ಜನ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಗಾಯಗೊಂಡವರನ್ನು ಉಸ್ಮಾನಬಾದ್, ಲಾತೂರ್, ಸೊಲ್ಲಾಪುರ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಮೃತಪಟ್ಟವರ ಗುರುತುಪತ್ತೆ ಕಾರ್ಯ ನಡೆಯುತ್ತಿದೆ.
ಮೃತರಲ್ಲಿ ಒಂದು ಗಂಡು ಮಗು ಸೇರಿದಂತೆ 15 ಜನ ಮಹಿಳೆಯರು ಮತ್ತು 14 ಪುರುಷರು ಇದ್ದಾರೆ. 21 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಶ್ರೀ ಕಾಳೇಶ್ವರಿ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ್ದ ಈ ಬಸ್ಸಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಗೆ ಸೇರಿದ್ದ ನೌಕರರು ಶಿರಡಿ ಯಾತ್ರೆಗೆ ಹೊರಟಿದ್ದರು ಎನ್ನಲಾಗಿದೆ. ಆದರೆ, ಮಾಹಿತಿ ಇನ್ನೂ ಸ್ಪಷ್ಟವಾಗಿ ಸಿಕ್ಕಿಲ್ಲ.


14 ಜನ ಟೆಕ್ಕಿಗಳು ಸಾವು: ಮೃತ ರ ಗುರುತು ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ. ಮೃತರ ಪೈಕಿ ಚಂದನ ಕೃಷ್ಣತುಳಸಿ, ಸಮಿತ್ ಕುಮಾರ್, ವೆಂಕಟೇಶ್, ಸುಬ್ಬರಾವ್, ಪೂಜಿತಾ ಅವರ ಹೆಸರು ಆನ್ ಲೈನ್ ಬುಕ್ಕಿಂಗ್ ಮಾಹಿತಿಯಿಂದ ಸಿಕ್ಕಿದೆ.

ಪ್ರಣೀತ್, ಕಿರಣ್ ಎಂಬುವರು ಆನ್ ಲೈನ್ ಮೂಲಕ 14 ಜನ ಸಹದ್ಯೋಗಿಗಳಿಗೆ ಟಿಕೆಟ್ ಬುಕ್ ಮಾಡಿದ್ದರು . ಮತ್ತೆ ಮಿಯ್ಯಾಪುರ ಏಜೆಂಟ್ ನಿಂದ ಇನ್ನೂ 3 ಟಿಕೆಟ್ ಬುಕ್ ಮಾಡಿಸಿದ್ದಾರೆ.

ಕೂಕ್ಕಟಪಲ್ಲಿ ದಿವಾಕರ್ ಟ್ರಾವೆಲ್ಸ್ ನಿಂದ ಜಿ ಮೋಹನ್ ರಾವ್ ಎಂಬುವರು 7 ಟಿಕೆಟ್ ಬುಕ್ ಮಾಡಿದ್ದರು. ವಿಜಯನಗರಂ, ವಿಶಾಖಪಟ್ಟಣಂ ಮೂಲದವರು ಎಂದು ತಿಳಿದುಬಂದಿದೆ. ಸಂಪತ್ ಎಂಬುವರ ಕುಟುಂಬದ ಸದಸ್ಯರೆಲ್ಲರೂ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಮಹರಾಷ್ಟ್ರ ಸರ್ಕಾರದ ಹೇಳಿಕೆ ಪ್ರಕಾರ 9 ಜನರನ್ನು ಮಾತ್ರ ಗುರುತಿಸಲಾಗಿದೆ.

ಸಹಾಯವಾಣಿ: 02472 - 222700, 222900

ಕರ್ನಾಟಕದ ರಿಜಿಸ್ಟ್ರೇಷನ್ ಕಾಳೇಶ್ವರಿ ಟ್ರಾವೆಲ್ಸ್ ಗೆ ಸೇರಿದ ಈ ಬಸ್, ಹೈದರಾಬಾದ್ ನಿಂದ ಅಹ್ಮದ್ ನಗರದಲ್ಲಿರುವ ಶಿರಡಿಗೆ ಪ್ರಯಾಣ ಬೆಳೆಸಿತ್ತು. ಶುಕ್ರವಾರ ತಡರಾತ್ರಿ 2.30ರ ವೇಳೆಗೆ ಬಸ್ ಸೇತುವೆಯಿಂದ ಕೆಳಕ್ಕೆ ಉರುಳಿದೆ. ಗಾಯಗೊಂಡ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉಸ್ಮಾನಬಾದ್ ನ ಪೊಲೀಸರು ತಿಳಿಸಿದರು.

ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಹಾಗೂ ತುರ್ತು ಪರಿಹಾರ ತಂಡವೊಂದು ಘಟನಾ ಸ್ಥಳಕ್ಕೆ ತೆರಳಿದೆ. ಗಾಯಗೊಂಡವರು ಹಾಗೂ ಮೃತರ ವಿವರಗಳು ಇನ್ನೂ ಲಭ್ಯವಾಗಿಲ್ಲ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಆರ್ ವಿ ಚಂದ್ರವದನ್ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಶಿರಡಿ ಸುದ್ದಿಗಳುView All

English summary
Over 32 pilgrims were killed and more than 25 seriously injured, when a bus fell off a bridge in Osmanabad district of Maharashtra in the wee hours of Saturday(Jun.16). Bus was on the way to Pilgrim centre Shirdi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more