ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖತಾರ್ ಶಾಲೆಗಳಲ್ಲೂ ಜಾಸ್ತಿ ಫೀಸ್ ತಗೋತಾರ್ರೀ

By Srinath
|
Google Oneindia Kannada News

qatar-indian-schools-accused-of-overcharging-fee
ದುಬೈ, ಜೂನ್ 13: ಖತಾರ್ ಶಾಲೆಗಳಲ್ಲೂ ದುಬಾರಿ ಫೀಸ್ ತಗೋತಾರ್ರೀ ಎನ್ನುತ್ತಿದ್ದಾರ್ರೀ ಖತಾರಿನಲ್ಲಿರುವ ನಮ್ಮ ಭಾರತೀಯ ಮಂದಿ. ಅದೂ ಇದೂ ಅಂತಿಲ್ಲ. ಎಲ್ಲ ಶಾಲೆಗಳದೂ ಇದೇ ರಾಮಾಯಣ. CBSE ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡ್ತಾರ್ರೀ ಎಂದು ಭಾರತದ ಪೋಷಕರು ಅಲವತ್ತುಕೊಂಡಿದ್ದಾರೆ.

CBSE ಪ್ರಕಾರ ಮುಂದಿನ ಮಾರ್ಚ್ ವೇಳೆಗೆ ನಡೆಯುವ 12 ನೇ ತರಗತಿ ಪರೀಕ್ಷೆಗಾಗಿ ಭಾರತೀಯ ಮೂಲದ ವಿದ್ಯಾರ್ಥಿಗಳಿಂದ 3,000 ರುಪಾಯಿ (ಅಂದರೆ 195-197 ಖತಾರಿ ರಿಯಲ್) ಶುಲ್ಕ ಸಂಗ್ರಹಿಸಬಹುದು. ಆದರೆ ಮಧ್ಯಪ್ರಾಚ್ಯ ಶಿಕ್ಷಣ ಸಂಸ್ಥೆ ಎಂಬ ಭಾರತೀಯ ಶಾಲೆಯು (MEES) 12 ನೇ ತರಗತಿಗೆ ಭಾರತೀಯ ಮೂಲದ ವಿದ್ಯಾರ್ಥಿಗಳಿಂದ 500 ಖತಾರಿ ರಿಯಲ್ ಶುಲ್ಕ ಸಂಗ್ರಹಿಸುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದರಿಂದ ತೀವ್ರ ಅಸಮಾಧಾನಗೊಂಡಿರುವ ಪೋಷಕರು CBSE ಕದ ತಟ್ಟಿದ್ದಾರೆ. ಆದರೆ ಅವರು 'ಇಷ್ಟೆಲ್ಲ ಶುಲ್ಕ ಕಟ್ಟಲೇ ಬೇಡಿ ಅದು ಕಾನೂನುಬಾಹಿರ. CBSE ಪರೀಕ್ಷೆ ಎಂದು ಹೇಳಿಕೊಂಡು ಈ ಪಾಟಿ ದುಬಾರಿ ಶುಲ್ಕ ಸಂಗ್ರಹಿಸುವುದು ಸರ್ವತಾ ಸಮಂಜಸವಲ್ಲ' ಎಂದು ಸಮಾಧಾನ ಮಾಡಿದ್ದಾರೆ.

ಆದರೆ ದುಬಾರಿ ಶುಲ್ಕ ಸಂಗ್ರಹಿಸುತ್ತಿರುವ ಶಾಲೆಗಳ ವಿರುದ್ಧ ಹೆಚ್ಚಿನ ಕ್ರಮ ಕೈಗೊಂಡಿಲ್ಲ. ವಿಪರ್ಯಾಸವೆಂದರೆ, ಈಗಾಗಲೇ first term ಪರೀಕ್ಷೆ ಆರಂಭವಾಗಿರುವುದರಿಂದ ಬಹುತೇಕ ಪೋಷಕರು ಈ ದುಬಾರಿ ಶುಲ್ಕವನ್ನು ಭರ್ತಿ ಮಾಡಿ ಆಗಿದೆ. ಸಮಾಧಾನಕರ ಸಂಗತಿಯೆಂದರೆ ಕೆಲವು ಶಾಲೆಗಳು ಮಾತ್ರ ನಿಗದಿತ 195 ಖತಾರಿ ರಿಯಲ್ ( 3,000 ರುಪಾಯಿ) ಶುಲ್ಕವನ್ನೇ ಸಂಗ್ರಹಿಸಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಒಮಾನ್ ನಲ್ಲಿ Indian School Al Seeb (ISAS) ಆಡಳಕಿತ ಮಂಡಳಿಯು ಪೋಷಕರು ಸರ್ವಸಮ್ಮತ ಅನುಮೋದನೆ ನೀಡದ ಹೊರತು ಶೊಲ್ಕ ಹೆಚ್ಚಿಸುವುದಿಲ್ಲ ಎಂದಿದೆ.

ಇಷ್ಟಕ್ಕೂ ಒಮಾನಿನಲ್ಲಿ 19 ಶಾಲೆಗಳು ಯಾಕಪ್ಪಾ ಈ ಪಾಟಿ ಸಿಕ್ಕಾಪಟ್ಟೆ ಶುಲ್ಕವೇರಿಸಿ, ಪೋಷಕರ ಬಿಪಿ ಏರಿಸಿದ್ದಾರೆ ಅಂದರೆ ಶಿಕ್ಷಕರ ಸಂಬಳ ಹೆಚ್ಚಿಸುವ ಸಲುವಾಗಿ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ 19 ಶಾಲೆಗಳು ಶುಲ್ಕವನ್ನು ಏರಿಸಿವೆ.

English summary
Dubai: Several Indian schools in Qatar have been accused of charging fees much above the rates permitted by CBSE, causing resentment among parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X