• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಚುನಾಚಣೆ: ಜಗನ್ ಕಾಂಗ್ರೆಸ್ ಮೇಲುಗೈ ಸಾಧ್ಯತೆ

By Srinath
|
ಹೈದರಾಬಾದ್, ಜೂನ್ 7: ಕಡಪ ಕ್ಷೇತ್ರದ ಸಂಸದ ಜಗನ್‌ಮೋಹನ್ ರೆಡ್ಡಿ (38) ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲುಪಾಲಾಗಿದ್ದರೂ ಅವರು ಅದನ್ನೇ ಬಂಡವಾಳ ಮಾಡಿಕೊಂಡು ಉಪಚುನಾವಣೆಯಲ್ಲಿ ತಮ್ಮ YSR Congress ಪಕ್ಷವನ್ನು ದಡ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಿದೆ exit polls.

18 ವಿಧಾನಸಭಾ ಕ್ಷೇತ್ರ ಹಾಗೂ 1 ಲೋಕಸಭಾ ಕ್ಷೇತ್ರಕ್ಕೆ ನಿನ್ನೆಯಷ್ಟೇ ನಡೆದ ಉಪಚುನಾವಣೆ ನಡೆದಿದೆ. ಆ ಸಂದರ್ಭದಲ್ಲಿ ನಡೆದ exit polls ಪ್ರಕಾರ ಜಗನ್ ಅಧಿಪತ್ಯದ YSR Congress ಸಂಪೂರ್ಣ ಅಧಿಪತ್ಯ ಸ್ಥಾಪಿಸುವುದು ಅನುಮಾನವಾಗಿದೆಯಾದರೂ ಬಹಳಷ್ಟು ಸ್ಥಾನಗಳನ್ನು ಕಬಳಿಸುವ ಲಕ್ಷಣಗಳು ಹೆಚ್ಚಾಗಿವೆ.

National new channel Headlines Today ನಡೆಸಿದ exit polls ಪ್ರಕಾರ ನೆಲ್ಲೂರು ಲೋಕಸಭೆ ಸೇರಿದಂತೆ 13-15 ವಿಧಾನಸಭೆ ಕ್ಷೇತ್ರಗಳು ಜಗನ್ ಮಡಿಲಿಗೆ ಬೀಳುವುದು ಖಚಿತವಾಗಿದೆ. ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷ ನಾಮ್ ಕೆ ವಾಸ್ತ ತಲಾ ಒಂದೊಂದು ಸ್ಥಾನ ದಕ್ಕಿಸಿಕೊಳ್ಳುವ ಅಂದಾಜಿದೆ.

ಇನ್ನು, ತೆಲಂಗಾಣ ವಿರೋಧಿ ಜಗನ್ ತೆಲಂಗಾಣಾದ ಪರ್ಕಾಲ ಕ್ಷೇತ್ರದಲ್ಲಿ ಸೋಲುವುದು (ಅಭ್ಯರ್ಥಿ ಮಾಜಿ ಮಂತ್ರಿ ಕೊಂಡ ಸುರೇಖಾ) ಪೂರ್ವ ನಿಶ್ಚಿತವಾಗಿದೆ. ಈ ಕ್ಷೇತ್ರ ನಿರೀಕ್ಷೆಯಂತೆ ತೆಲಂಗಾಣ ರಾಷ್ಟ್ರ ಸಮಿತಿಯ (ಅಭ್ಯರ್ಥಿ ಎಂ ಭಿಕ್ಷಾಪತಿ) ಪಾಲಾಗುವುದು ದಿಟವಾಗಿದೆ.


ಶೇ. 40ರಷ್ಟು ಮತಗಳು YSR Congress ಪಾಲಾಗಲಿವೆ. ರೆಡ್ಡಿ ಸಮುದಾಯವು ಜಗನ್ ಮೋಹನ್ ರೆಡ್ಡಿ ಅವರಿಗೆ ಅಖಂಡ ನಿಷ್ಠೆ ತೋರಿದ್ದಾರೆ. ಇದೇ ವೇಳೆ ಚಿರು ಪ್ರಜಾರಾಜ್ಯಂ ಜತೆಗಿನ ವಿಲೀನದಿಂದ ಕಾಂಗ್ರೆಸ್ ಗೆ ಯಾವುದೇ ಪ್ರಯೋಜನವಾಗಿಲ್ಲ.

ಈ ಮಧ್ಯೆ, ವಿಜಯವಾಡ ಕಾಂಗ್ರೆಸ್ ಸಂಸದ ಲಗಾಡಪತಿ ರಾಜಗೋಪಾಲ ತಮ್ಮ ಕಡೆಯಿಂದ ನಡೆಸಿದ ಸಮೀಕ್ಷಾ ವರದಿಯನ್ನೂ ಬಹಿರಂಗಗೊಳಿಸಿದ್ದಾರೆ. ಕಾಂಗ್ರೆಸ್ ಸಂಸದ ರಾಜಗೋಪಾಲ ಪ್ರಕಾರ YSR Congress ಪಕ್ಷವು 12-16 ಸ್ಥಾನ ಗಿಟ್ಟಿಸುವುದು ಗ್ಯಾರಂಟಿಯಾಗಿದೆ.

ಟಿಡಿಪಿ ಒಲವಿನ ABN-Andhra Jyothi ಟಿವಿ ಚಾನೆಲ್ YSR Congressಗೆ 8 ಸೀಟುಗಳನ್ನು ಮುಡಿಪಾಗಿಟ್ಟಿದೆ. ಕಾಂಗ್ರೆಸ್ ಗೆ ಅಬ್ಬಬ್ಬಾ ಅಂದರೆ 5 ಗೆಲುವುಗಳು. ಇನ್ನು ಟಿಡಿಪಿಗೆ ನಾಲ್ಕೇ. ಹೆಚ್ಚು ಕುತೂಹಲ ಕೆರಳಿಸಿರುವ ತಿರುಪತಿ ವಿಧಾನಸಭಾ ಕ್ಷೇತ್ರ ನಿರೀಕ್ಷೆಯಂತೆ ಕಾಂಗ್ರೆಸ್ ಪಾಲಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜಗನ್ ಮೋಹನ್ ರೆಡ್ಡಿ ಸುದ್ದಿಗಳುView All

English summary
AP by polls - YSR Congres Jaganmohan Reddy leads exit polls. Exit polls conducted after Tuesday’s bypolls indicated that while the YSR Congress would win 13 to 15 Assembly seats and the Nellore Lok Sabha seat).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more