ಶೆವ್ಚೆಂಕೋ ಡಬ್ಬಲ್ ಗೋಲು, ಸ್ವೀಡನ್ ತತ್ತರ

ಸ್ವೀಡನ್ ಪರ ಶ್ರೇಷ್ಠ ಆಟಗಾರ ಜ್ಲಟಾನ್ ಇಬ್ರಹಿಮೊವಿಕ್ ಮಾತ್ರ ಉತ್ತಮ ಹೋರಾಟ ನಡೆಸಿದರೂ ಕೇವಲ ಒಂದು ಗೋಲು ಮಾತ್ರ ಗಳಿಸಲು ಸಾಧ್ಯವಾಯಿತು. ಪಂದ್ಯದುದ್ದಕ್ಕೂ ಹಳದಿ ದಿರಿಸಿನ ಉಕ್ರೇನ್ ತಂಡ ಭರ್ಜರಿ ದಾಳಿ ನಡೆಸಿತು.
ಪಂದ್ಯದ 52ನೇ ನಿಮಿಷದಲ್ಲಿ ಇಬ್ರಹಿಮೊವಿಕ್ ಗೋಲು ಗಳಿಸಿ ಸ್ವೀಡನ್ ಗೆ ಮುನ್ನಡೆ ಒದಗಿಸಿದರು. ಆದರೆ, ಉಕ್ರೇನ್ ನಾಯಕ ಶೆವ್ಚೆಂಕೋ 7ನಿಮಿಷಗಳ ಅಂತರ ಡಬ್ಬಲ್ ಗೋಲು ಬಾರಿಸಿ ಉಕ್ರೇನ್ ಗೆ 2-1ರ ಮುನ್ನಡೆ ತಂದು ಕೊಟ್ಟರು.
ಸೋವಿಯೆಟ್ ಯೂನಿಯನ್ ನಿಂದ ಪ್ರತ್ಯೇಕಗೊಂಡ ಮೇಲೆ ಉಕ್ರೇನ್ ತಂಡ ಇದೇ ಮೊದಲ ಬಾರಿಗೆ ಯುರೋ ಚಾಂಪಿಯನ್ ಶಿಪ್ ನಲ್ಲಿ ಕಾಣಿಸಿಕೊಂಡಿದೆ. ಸ್ವೀಡನ್ ತಂಡದಲ್ಲಿ ಆತ್ಮವಿಶ್ವಾಸ ಕುಸಿಯುತ್ತಿದ್ದಂತೆ ಉಕ್ರೇನ್ ತಂಡ ವಿಜೃಂಭಿಸತೊಡಗಿತು.
ಸ್ವೀಡನ್ ಪರ ಮಾರ್ಕಸ್ ರೋಸೆನ್ ಬರ್ಗ್ ಹಾಗೂ ಸೆಬಾಸ್ಟಿಯನ್ ಲಾರ್ಸನ್ ಹಾಗೂ ನಾಯಕ ಇಬ್ರಹಿಮೊವಿಕ್ ಉತ್ತಮ ಆಟ ಪ್ರದರ್ಶಿಸಿ ಅನೇಕ ಬಾರಿ ಗೋಲು ಹೊಡೆಯುವ ಯತ್ನದಲ್ಲಿ ಸ್ವಲ್ಪದರಲ್ಲಿ ವಿಫಲರಾದರು.
| ಉಕ್ರೇನ್ | 2 - 1 | ಸ್ವೀಡನ್ |
| 8(5) | ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) | 6(6) |
| 3 | ಕಾರ್ನರ್ಸ್ | 2 |
| 12 | ಫೌಲ್ಸ್ | 20 |
| 2 | ಆಫ್ ಸೈಡ್ | 1 |
| 0 | ಹಳದಿ ಕಾರ್ಡ್ | 2 |
| 0 | ಕೆಂಪು ಕಾರ್ಡ್ | 0 |












Click it and Unblock the Notifications