• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಂಧ್ರ ಉಪ ಸಮರ: ವೈಎಸ್ ಆರ್ ಪಕ್ಷ, ಟಿಡಿಪಿ ಕಲ್ಲೆಸೆತ

By Mahesh
|
ಹೈದರಾಬಾದ್, ಜೂ.12: ಆಂಧ್ರಪ್ರದೇಶದ ರಾಜಕೀಯವನ್ನು ಚಿತ್ರಣವನ್ನು ಬದಲಿಸಬಲ್ಲ ಉಪ ಸಮರಕ್ಕೆ ಜೂ.12ರ ಮಧ್ಯಾಹ್ನದ1 ಗಂಟೆ ತನಕ ಶಾಂತಿಯುತ ಮತದಾನ ನಡೆದಿದೆ. ಆದರೆ, ಕಳೆದ ಒಂದು ಗಂಟೆ ನಂತರ ಅನೇಕ ಕ್ಷೇತ್ರಗಳಲ್ಲಿ ವೈಎಸ್ ಆರ್ ಕಾಂಗ್ರೆಸ್ ಹಾಗೂ ತೆಲುಗುದೇಶಂ ಪಕ್ಷದ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡ ಘಟನೆ ನಡೆದಿದೆ.

ಜೈಲುವಾಸಿಯಾಗಿರುವ ಜಗನ್ ಮೋಹನ್ ರೆಡ್ಡಿ ಅವರಿಗೆ ಸಿಎಂಪಟ್ಟ ಸಿಗುತ್ತದೆಯೇ? ಆಂಧ್ರದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆಯೇ? ತೆಲುಗುದೇಶಂ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ? ಎಂಬ ಪ್ರಶ್ನೆಗಳಿಗೆ ಈ ಉಪ ಸಮರ ಉತ್ತರ ನೀಡಲಿದೆ. 18 ಅಸೆಂಬ್ಲಿ ಕ್ಷೇತ್ರ ಹಾಗೂ 1 ಲೋಕ ಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ.

46,13,589 ಮತದಾರರು ಮತ ಚಲಾಯಿಸಲಿದ್ದು, 22,79,732 ಪುರುಷರು ಹಾಗೂ 23,33,844 ಮಹಿಳಾ ಮತದಾರರು ಇದ್ದಾರೆ. 12 ಜಿಲ್ಲೆಗಳಲ್ಲಿ5,413 ಮತಕೇಂದ್ರಗಳಲ್ಲಿ ಚುನಾವಣೆ ನಡೆದಿದೆ.

ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ 50ರಷ್ಟು ಮತದಾನ ನಡೆದ ವರದಿಗಳು ಬಂದಿದೆ. ಕಡಪ ಜಿಲ್ಲೆಯ ರಾಯಚೋಟಿ ಕ್ಷೇತ್ರದಲ್ಲಿ ಟಿಡಿಪಿ ನಾಯಕರ ಮನೆ ಮೇಲೆ ಕಲ್ಲು ಎಸೆಯಲಾಗಿದೆ. ಕಡಪ ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ವೈಎಸ್ ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಮಧ್ಯೆ ಜಟಾಪಟಿ ನಡೆದಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕ ಬಿ ಚೆಂಗಲ್ ರಾಯುಲು ಅವರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ. ಪೊಲಾವರಂ ಅಸೆಂಬ್ಲಿ ಕ್ಷೇತ್ರದ 9 ಗ್ರಾಮದ ಜನತೆ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. 18 ಅಸೆಂಬ್ಲಿ ಕ್ಷೇತ್ರ ಹಾಗೂ ನೆಲ್ಲೂರು ಲೋಕಸಭಾ ಚುನಾವಣೆಯ ಫಲಿತಾಂಶ ಜೂ.15ರಂದು ಬೆಳಗ್ಗೆ 8 ಗಂಟೆಗೆ ಹೊರಬೀಳಲಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Polling began today (Jun.12) in the crucial by-elections to the 18 assembly segments and one Lok Sabha constituency in Andhra Pradesh, results of which are expected to give a new direction to the state politics.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more