• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿಂಗ್ ಆಫ್ ಕ್ಲೇ ನಡಾಲ್ ಗೆ 7ನೇ ಬಾರಿ ಫ್ರೆಂಚ್ ಕಪ್

By Mahesh
|
Rafael Nadal clinches Title for 7th Time
ಪ್ಯಾರೀಸ್, ಜೂ.11: ಫ್ರೆಂಚ್ ಓಪನ್ ಅಂತಿಮ ಹಣಾಹಣಿಯಲ್ಲಿ ಸೆರ್ಬಿಯಾದ ನೋವಾಕ್ ಜೋಕೋವಿಕ್ ಕನಸು ಭಗ್ನಗೊಂಡಿದೆ. 'ಕಿಂಗ್ ಆಫ್ ಕ್ಲೇ' ಸ್ಪೇನಿನ ರಾಫೆಲ್ ನಡಾಲ್ ಅವರು ಜೋಕೋವಿಕ್ ರನ್ನು ಸೋಲಿಸುವ ಮೂಲಕ ಹೊಸದೊಂದು ಇತಿಹಾಸ ನಿರ್ಮಾಣ ಮಾಡಿದ್ದಾರೆ. 7ನೇ ಬಾರಿಗೆ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಮ್ ಗೆದ್ದ ನಡಾಲ್ 6-4, 6-3, 2-6, 7-5 ರಲ್ಲಿ ಜೋಕೋವಿಕ್ ರನ್ನು ಸೋಲಿಸಿದರು.

ಭಾನುವಾರ ಆರಂಭವಾದ ಪಂದ್ಯ ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲ್ಪಟ್ಟಿತ್ತು. ವಿಶ್ವದ ಎರಡನೇ ಶ್ರೇಯಾಂಕದ ಅಟಗಾರ ರಾಫಾ..ತನ್ನ 16ನೇ ಗ್ರಾಂಡ್ ಸ್ಲಾಮ್ ಫೈನಲ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದರು.

ಫ್ರೆಂಚ್ ಮಣ್ಣಲ್ಲಿ 52 ಗೆಲುವು, ಕೇವಲ ಒಂದು ಸೋಲಿನ ಅದ್ಭುತ ದಾಖಲೆ ಹೊಂದಿರುವ ನಡಾಲ್ ಗೆ ಸರಿಸಾಟಿಯಾಗಿ ನಿಲ್ಲಬಲ್ಲ ಆಟಗಾರರೇ ಇಲ್ಲ ಎನ್ನುವಂತಾಗಿದೆ.

26 ವರ್ಷದ ನಡಾಲ್ ಗೆ ಇದು 11ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ರೋಜರ್ ಫೆಡರರ್ ದಾಖಲೆಯ 16 ಗ್ರಾಂಡ್ ಸ್ಲಾಮ್ ಗೆದ್ದಿದ್ದರೆ, ಪೀಟ್ ಸಾಂಪ್ರಾಸ್ 14 ಹಾಗೂ ರಾಯ್ ಎಮರ್ಸನ್ 12 ಪ್ರಶಸ್ತಿ ಗಳಿಸಿ ನಡಾಲ್ ಗಿಂತ ಮುಂದಿದ್ದಾರೆ.

ಈ ಫೈನಲ್ ಗೆದ್ದು ಇತಿಹಾಸ ನಿರ್ಮಿಸಲು ಜೋಕೋವಿಕ್ ಸಿದ್ಧರಾಗಿದ್ದರು. ಎಲ್ಲಾ 4 ಗ್ರಾಂಡ್ ಸ್ಲಾಮ್ ಗಳನ್ನು ಗೆದ್ದ ಗೌರವ ಪಡೆದಿರುವ ಡಾನ್ ಬಡ್ಜ್(1938), ರಾಡ್ ಲವೆರ್(1962,1969) ಅವರ ಗುಂಪಿಗೆ ಸೇರುವ ಯತ್ನದಲ್ಲಿ ಜೋಕೋವಿಕ್ ಸೋತಿದ್ದಾರೆ.

ರೋಲ್ಯಾಂಡ್ ಗ್ಯಾರೋಸ್ ನ ಆವೆಮಣ್ಣಿನ ಅಂಕಣದಲ್ಲಿ ನಡೆದ ಈ ಮದಗಜಗಳ ಕಾಳಗ ಕೋಟಿಗಟ್ಟಲೇ ವೀಕ್ಷಕರನ್ನು ರಂಜಿಸಿದೆ. ಟೆನಿಸ್ ಜಗತ್ತು ಅತ್ಯಂತ ಕುತೂಹಲದಿಂದ ಎದುರು ನೋಡಿದ ಈ ಪಂದ್ಯ ನಿಯೋ ಸ್ಫೋರ್ಟ್ ನಲ್ಲಿ ಭಾನುವಾರ ಸಂಜೆ 6.30ಕ್ಕೆ ಆರಂಭವಾದ ಪಂದ್ಯ ಸೋಮವಾರ ಸಂಜೆಗೆ ಮುಗಿದಿದೆ.

ದಾಖಲೆಗಳ ಪಂದ್ಯ: ಈ ಇಬ್ಬರು ಆಟಗಾರರು ಪರಸ್ಪರ ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಫೈನಲ್ ನಲ್ಲಿ ಎದುರಾಗಿದ್ದು, ಈಗ ನಾಲ್ಕನೇ ಬಾರಿಗೆ ಪ್ರಶಸ್ತಿಗಾಗಿ ಕಾದಾಡಿದರು.

6 ಬಾರಿ ಫ್ರೆಂಚ್ ಓಪನ್ ಗೆದ್ದು ಶ್ರೇಷ್ಠ ಆಟಗಾರ ಬೋರ್ಗ್ ದಾಖಲೆ ಸರಿಗಟ್ಟಿರುವ ರಾಫೆಲ್ ಈ ಸಲ ಗೆದ್ದು 7 ನೇ ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗುವ ಕನಸು ನನಸಾಗಿಸಿಕೊಂಡರು.

ಜೋಕೋವಿಕ್ ಕಳೆದ 43 ವರ್ಷಗಳಲ್ಲಿ ನಂತರ ಮೊದಲ ಬಾರಿಗೆ ಎಲ್ಲಾ ನಾಲ್ಕು ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಮೆರೆಯುವ ಅವಕಾಶದಿಂದ ವಂಚಿತರಾದರು. ಈ ರೀತಿ ಸಾಧನೆಯನ್ನು ನಡಾಲ್ ಆಗಲಿ, ಫೆಡರರ್ ಆಗಲಿ ಮಾಡಿಲ್ಲ ಎಂಬುದು ವಿಶೇಷ.

ಫೈನಲ್ ಹಾದಿ: ಅಗ್ರ ಶ್ರೇಯಾಂಕ ಜೋಕೋವಿಕ್ 6-4, 7-5, 6-3 ನೇರ ಸೆಟ್ ಗಳಲ್ಲಿ ಮೂರನೇ ಸೀಡ್ ನ ರೋಜರ್ ಫೆಡರರ್ ಅನ್ನು ಸುಲಭವಾಗಿ ಸೋಲಿಸಿದರು. ರಾಫೆಲ್ ನಡಾಲ್ 6-2, 6-2, 6-1 ರಲ್ಲಿ ಆರನೇ ಶ್ರೇಯಾಂಕದ ಫೆರೆರರ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rafael Nadal a undisputed king of clay clinched a record seventh French Open title on Monday(Jun.11), defeating world number one Novak Djokovic 6-4, 6-3, 2-6, 7-5 and shattering the Serb's dream of Grand Slam history.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more