• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣೆ ಮುಗಿಯೋ ತನಕ ಜಗನ್ ಗೆ ಜೈಲು

By Mahesh
|
YS Jagan Judicial Custody extended
ಹೈದರಾಬಾದ್, ಜೂ.11: ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ, ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿಗೆ ಭಾರಿ ಹಿನ್ನೆಡೆ ಉಂಟಾಗಿದೆ. ಆಂಧ್ರಪ್ರದೇಶದಲ್ಲಿ ಉಪ ಚುನಾವಣೆ ಮುಗಿಯುವ ತನಕ ಜಗನ್ ಮೋಹನ್ ರೆಡ್ಡಿ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ(ಜೂ.11) ಜಗನ್ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದ್ದು ಜೂ.25ರ ತನಕ ಜೈಲಿನಲ್ಲಿರುವಂತೆ ಆದೇಶಿಸಿದೆ.

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಜಗನ್ ಮೋಹನ್ ರೆಡ್ಡಿ ಅವರು ಚಂಚಲಗೂಡ ಜೈಲಿನಿಂದ ಹೊರಬೀಳುವ ವಿಶ್ವಾಸವನ್ನು ಹೊಂದಿದ್ದರು.

ಮೇ.27 ರಂದು ಬಂಧನಕ್ಕೆ ಒಳಗಾಗಿದ್ದ ಜಗನ್ ಬಂಧನ ಅವಧಿ ಜೂ.11ಕ್ಕೆ ಮುಕ್ತಾಯವಾಗಿತ್ತು. ಹೀಗಾಗಿ ಜೂ.12ರ ಆಂಧ್ರಪ್ರದೇಶದ ಉಪ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸುವರ್ಣ ಅವಕಾಶಕ್ಕಾಗಿ ಜಗನ್ ಕಾದಿದ್ದರು.

ಆದರೆ, ಜಗನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಆದೇಶ ಹೊರಬೀಳುತ್ತಿದ್ದಂತೆ, ಜಗನ್ ಅವರ ತಾಯಿ ವೈಎಸ್ ವಿಜಯಮ್ಮ, ಪತ್ನಿ ಭಾರತಿ ಅವರು ಕಣ್ಣೀರಿಗೆ ಶರಣಾದರು.

ಜಾಮೀನು ಏಕೆ ಸಿಗಲಿಲ್ಲ?: 5 ದಿನಗಳ ನಡೆದ ಜಗನ್ ವಿಚಾರಣೆಯಲ್ಲಿ ಯಾವುದೇ ವಿಷಯ ಸ್ಪಷ್ಟವಾಗಿಲ್ಲ. ಮನಿ ಲಾಂಡರಿಂಗ್, ಹವಾಲಾ ದುಡ್ಡು ಹರಿದಾಟದ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಸಿಬಿಐ ಪರ ವಕೀಲ ಅಶೋಕ್ ಬಾನ್ ವಾದಿಸಿದರು.

ಅಲ್ಲದೆ, ವಡರೆವು ಹಾಗೂ ನಿಜಾಮಪಟ್ಟಣಂ ಬಂದರು ಮತ್ತು VANPIC ಕೈಗಾರಿಕಾ ಕಾರಿಡಾರ್ ಗೆ ನೀಡಿದ ಸಾವಿರಾರು ಎಕರೆ ಭೂಮಿ ಮೌಲ್ಯ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಕೂಡಾ ಬಾಯ್ಬಿಟ್ಟಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆದರೆ ಮಾತ್ರ ಸತ್ಯ ಹೊರಬೀಳಲಿದೆ. ಜಗನ್ ಅವರನ್ನು ಬಿಡುಗಡೆ ಮಾಡುವುದರಿಂದ ದಾಖಲಾತಿ ನಾಶವಾಗಲಿದೆ ಎಂದು ಸಿಬಿಐ ವಕೀಲ ಅಶೋಕ್ ಮಂಡಿಸಿದ ವಾದವನ್ನು ಸಿಬಿಐ ವಿಶೇಷ್ಯ ನ್ಯಾಯಪೀಠ ಮಾನ್ಯ ಮಾಡಿತು.

ಸುಮಾರು 850 ಕೋಟಿ ರು ಬಂಡವಾಳ ಹೂಡಿಕೆ ಲೆಕ್ಕ ಇನ್ನೂ ಸಿಕ್ಕಿಲ್ಲ. ಅಲ್ಲದೆ, ಜಗನ್ ಸೃಷ್ಟಿಸಿದ ಬೇನಾಮಿ ಕಂಪನಿಗಳ ಅಸಲಿ ಮೌಲ್ಯ, ಕೂಡಿಟ್ಟ ಹಣ, ಇತರೆ ಬ್ಯಾಂಕ್ ಖಾತೆಗಳಿಗೆ ವರ್ಗವಾದ ಮೊತ್ತದ ಲೆಕ್ಕ ಕೂಡಾ ಸಿಗಬೇಕಿದೆ.

ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಜಗನ್ ಮೋಹನ್ ರೆಡ್ಡಿ ಕೈಗಾರಿಕಾ ವಲಯದಲ್ಲಿ ಅಕ್ರಮ ಎಸೆಗಿ ಗಳಿಸಿದ ಆಸ್ತಿಯ ಬಗ್ಗೆ ಮಾತ್ರ ದಾಖಲೆಗಳನ್ನು ಸಂಗ್ರಹಿಸಿ ಮೂರು ಎಫ್ ಐಆರ್ ದಾಖಲಿಸಲಾಗಿದೆ.

ಇದರಲ್ಲಿ ಜಗತಿ ಪಬ್ಲಿಕೇಷನ್, ಸಾಕ್ಷಿ ಪತ್ರಿಕೆಯನ್ನು ಸೇರಿಸಲಾಗಿದ್ದು, 350ಕ್ಕೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಜಗನ್ ಅವರ ಆಸ್ತಿ 16,97,335 ಕೋಟಿ ರು ಎಂದು ಟಿಡಿಪಿ ಮಾಡಿರುವ ಆರೋಪದ ಬಗ್ಗೆ ಇನ್ನೂ ಸಿಬಿಐ ಕಣ್ಣಿಟ್ಟಿಲ್ಲ.

ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಇದುವರೆಗೆ ಮೂರು ಆರೋಪಪಟ್ಟಿಗಳನ್ನು ದಾಖಲಿಸಿದೆ. ಮೊದಲ ಆರೋಪಪಟ್ಟಿಯಲ್ಲಿ ಜಗನ್ ಮತ್ತಿತರ 11 ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದೆರಡು ಆರೋಪಪಟ್ಟಿಗಳಲ್ಲಿ ಅವರಿಗೆ ಜಾಮೀನು ದೊರೆತಿಲ್ಲ.

ವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ಜಗನ್ ಮೋಹನ್ ರೆಡ್ಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಜಗನ್ ಅವರ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜಗನ್ ಮೋಹನ್ ರೆಡ್ಡಿ ಸುದ್ದಿಗಳುView All

English summary
CBI special court in Hyderabad on Monday 11th June extended Kadapa MP, YSR Congress party chief YS Jagan Mohan Reddy's Judicial Custody till June 25 in the alleged disproportionate assets case. Jagan Mohan Reddy now have to stay in jail during Andhra Pradesh by election.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more