ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಪಡೆಗೆ ಮೈಸೂರಿನ ಇಡ್ಲಿ ದೋಸೆ ಯಂತ್ರಗಳು

By Srinath
|
Google Oneindia Kannada News

mysore-cftri-dosa-idli-machines-for-ins-vikramaditya
ಮೈಸೂರು, ಜೂನ್ 10: ಯುದ್ಧ ವಿಮಾನಗಳಲ್ಲಿ ದೋಸೆ ಯಂತ್ರವೂ ಇರುತ್ತದಾ ಅಂತ ಕುತೂಹಲವಾಯಿತೇ? ಇನ್ನೂ ಖುಷಿ ಸಂಗತಿಯೊಂದಿದೆ ಕೇಳಿ. ಭಾರತೀಯ ಯುದ್ಧ ವಿಮಾನಗಳಲ್ಲಿ ಈ ದೋಸೆ ಯಂತ್ರಗಳನ್ನು ಅಳವಡಿಸಲಾಗಿದೆ. ಅವುಗಳನ್ನು ತಯಾರಿಸಿರುವುದು ಮೈಸೂರಿನ CFTRI ಮತ್ತು ಬೆಂಗಳೂರಿನ Eskay Enterprises ಸಂಸ್ಥೆಗಳು.

ಅಂದಹಾಗೆ INS Vikramaditya (Admiral Gorshkov) ಯುದ್ಧ ವಿಮಾನದಲ್ಲಿ ಅಪ್ಪಟ ಮೈಸೂರಿನ ಆರು ದೋಸೆ ಯಂತ್ರ ಮತ್ತು ಮೂರು ಇಡ್ಲಿ ತಯಾರಿಕೆ ಯಂತ್ರಗಳನ್ನು ಅಳವಡಿಸಲಾಗಿದೆ.

INS Vikramaditya ಸದ್ಯಕ್ಕೆ ರಷ್ಯಾದ Arkhangelsk ಪ್ರಾಂತ್ಯದ ಪ್ರಾಯೋಗಿಕ ನೆಲೆಯಲ್ಲಿದೆ. ಇತ್ತೀಚೆಗೆ ಅಲ್ಲಿಗೆ ತೆರಳಿದ್ದ CFTRI ಮತ್ತು Eskay Enterprises ಸಂಸ್ಥೆಗಳ ಉತ್ಸಾಹಿ ಇಂಜಿನಿಯರುಗಳ ತಂಡ ಯುದ್ಧ ವಿಮಾನದಲ್ಲಿ ಇಡ್ಲಿ ದೋಸೆ ಯಂತ್ರಗಳನ್ನು ಯಶಸ್ವಿಯಾಗಿ ಅಳವಡಿಸಿ, ವಾಪಸಾಗಿದೆ.

ಡಿಸೆಂಬರ್ ವೇಳೆಗೆ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರವಾಗಲಿದೆ. ಒಮ್ಮೆ ಅದು ಕಾರ್ಯತತ್ಪರವಾಗುತ್ತಿದ್ದಂತೆ ಅದರಲ್ಲಿನ ಭಾರತೀಯ ಸಿಬ್ಬಂದಿಗೆ ನಾವೂ ನೀವೂ ಇಷ್ಟಪಟ್ಟುಕೊಂಡು ತಿನ್ನುವ ಈ ಸ್ವಾದಿಷ್ಟ ಇಡ್ಲಿ- ದೋಸೆ ಸಿಗಲಿದೆ.

ಈ ಸ್ವಯಂಚಾಲಿತ ಯಂತ್ರಗಳ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು 1998ರಲ್ಲಿ ಮೈಸೂರಿನ Central Food Technological Research Institute (CFTRI). ಈ ಯಂತ್ರಗಳನ್ನು ಉತ್ಪಾದಿಸಲು ಅಧಿಕೃತ ಲೈಸೆನ್ಸ್ ಪಡೆದಿರುವ ಏಕೈಕ ಸಂಸ್ಥೆಯೆಂದರೆ ಬೆಂಗಳೂರಿನ Eskay Enterprises.

ಭಾರತೀಯ ನೌಕಾಪಡೆಯಲ್ಲಿ ಇದುವರೆಗೆ 12 ನೌಕೆಗಳಲ್ಲಿ ಇಂತಹ ಯಂತ್ರಗಳನ್ನು ಅಳವಡಿಸಲಾಗಿದೆ ಎನ್ನುತ್ತಾರೆ Eskay Enterprises ಮುಖ್ಯಸ್ಥ ಎಸ್ ಕೃಷ್ಣಮೂರ್ತಿ. ಈ ಯಂತ್ರಗಳು ಗಂಟೆಗೆ ತಲಾ 400 ದೋಸೆ ಮತ್ತು 1000 ಇಡ್ಲಿಗಳನ್ನು ತಯಾರಿಸುತ್ತವೆ. ಸುಮಾರು 2000 ಸಿಬ್ಬಂದಿಯ ಹೊಟ್ಟೆಗೆ ಇದು ಸಾಕಾಗುತ್ತದೆ.

English summary
Mysore CFTRI and Eskay Enterprises Bangalore produced dosa-idli machines for INS Vikramaditya. Six dosa-making and 3 idli-making machines have been installed on the aircraft carrier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X