ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುತ್ತೂರು: ಶಾಲಾ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ

By Srinath
|
Google Oneindia Kannada News

puttur-immoral-activities-in-school-rooms
ಪುತ್ತೂರು, ಜೂನ್ 9: ತಾಲೂಕಿನ ಮುರಾ ಗ್ರಾಮದ ಹೊರವಲಯದಲ್ಲಿರುವ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಇತ್ತೀಚೆಗೆ ಅನೈತಿಕ ಚಟುವಟಿಕೆಗಳು ಅವ್ಯಾಹತವಾಗಿ ಸಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿಯ ವೇಳೆ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅನೈತಿಕ ಚಟುವಟಿಕೆಗಳು ಯಾವುದೇ ಎಗ್ಗಿಲ್ಲದೆ ನಡೆಯುತ್ತಿವೆ ಎಂದು ದೂರಲಾಗಿದೆ. ಶಾಲೆಯಲ್ಲಿ 7ನೆಯ ತರಗತಿಯವರೆಗೂ ವ್ಯಾಸಂಗವಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಿಲ್ಲ. ಶಾಲೆಯಲ್ಲಿ ಸೌಲಭ್ಯಗಳಿಗೂ ಕೊರತೆಯಿಲ್ಲ. ಆದರೆ ಶಾಲಾ ಸಿಬ್ಬಂದಿಗೆ ತರಗತಿಗಳು ಮುಗಿದ ನಂತರ ಕೊಠಡಿಗಳಿಗೆ ಬೀಗ ಹಾಕಿ ಭದ್ರಪಡಿಸುವುದಕ್ಕೆ ಜಾಣ ಮರೆವು. ಆದ್ದರಿಂದ ಜ್ಞಾನ ದೇಗುಲವು ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಶಾಲಾ ಸಿಬ್ಬಂದಿಯ ಜಾಣ ಮರೆವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು ಸಿಬ್ಬಂದಿಯ ಉದ್ದೇಶದ ಬಗ್ಗೆ ಅನುಮಾನವನ್ನೂ ಹೊಂದಿದ್ದಾರೆ. ಕುತೂಹಲದ ಸಂಗತಿಯೆಂದರೆ ಕೆಲವು ರೂಮುಗಳಿಗೆ ಬೀಗ ಹಾಕಲಾಗಿರುತ್ತೆ. ಆದರೆ ಕೆಲವು ಕೊಠಡಿಗಳಿಗೆ ಚಿಲಕವೇ ಇಲ್ಲ.

ಈ ಬಗ್ಗೆ ಸಂಬಂಧಪಟ್ಟ Block Education Officer ಅವರ ಗಮನ ಸೆಳೆದಾಗ ಹಣಕಾಸು ಮುಗ್ಗಟ್ಟಿನಿಂದಾಗಿ ಈ ಸಮಸ್ಯೆ ತಲೆದೋರಿದೆ' ಎಂದು ಅವರಯು ಹಾರಿಕೆಯ ಉತ್ತರ ನೀಡಿದ್ದಾರೆ. ಆದರೆ ಶಾಲೆಯ headmaster ನೀಡುವ ಉತ್ತರ ಕುತೂಹಲಕಾರಿಯಾಗಿದೆ: 'ಇತ್ತಲ್ಲಾ, ಎಲ್ಲ ರೂಮುಗಳಿಗೂ ಬೀಗ ಜಡಿಯಲಾಗಿತ್ತು. ಏನೋ ಈವತ್ತು ಇಲ್ಲವಾಗಿದೆ. ಅಥವಾ ನೀವೇ ಬೀಗ ಕಿತ್ತುಹಾಕಿದ್ದೀರಿ ಎನಿಸುತ್ತದೆ' ಎಂದು ಪ್ರಶ್ನಿಸಿದವರನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ!

English summary
Villagers of Mura in Puttur taluk are alleging that the local Government Higher Primary School located in the outskirts of the town, has of late turned into a centre of unlawful and immoral activities, during night time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X