ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದಿನಾಯಿಗೆ ಹಾಲುಣಿಸಿದ ಯುವತಿಯ ಗ್ಯಾಂಗ್ ರೇಪ್

By Srinath
|
Google Oneindia Kannada News

mumbai-woman-gang-molested-for-feeding-dog
ಮುಂಬೈ, ಜೂನ್ 8: MBA ವಿದ್ಯಾರ್ಥಿನಿ ರೋಶ್ನಿ ಮಜುಂದಾರ್ (26) ಅವರ ಮೇಲೆ ಆರು ಮಂದಿ ಸ್ಥಳೀಯ ಪುಂಡರು ಮೊನ್ನೆ ಸೋಮವಾರ ರಾತ್ರಿ ಅತ್ಯಾಚಾರ ನಡೆಸಿ, ಹೊಡೆದೂ ಬಡಿದೂ ಮಾಡಿದ್ದಾರೆ. ಆಕೆಯ ಕಸಿನ್ 28 ವರ್ಷದ ಸಿಮಿತ್ ದೇಬ್ ರಕ್ಷಣೆಗೆ ಧಾವಿಸಿದಾಗ ಆತನ ಮೇಲೂ ಧರ್ಮದೇಟು ಬಿದ್ದಿದೆ. ಇಷ್ಟೆಲ್ಲ ಆಗುತ್ತಿದ್ದರೂ ದಾರಿಹೋಕರು ಸ್ಥಳದಲ್ಲೇ ನಿಂತು ಇಡೀ ಘಟನೆಯನ್ನು ಸವಿದರೇ ಹೊರತು ಯಾರೊಬ್ಬರೂ ಆ ದುರುಳರ ಪುಂಡಾಟಿಕೆಯನ್ನು ನಿಲ್ಲಿಸಲು ಮುಂದಾಗಲಿಲ್ಲ.

ಇಷ್ಟಕ್ಕೂ ರೋಶ್ನಿ ಮಜುಂದಾರ್ ಮಾಡಿದ ಮಹಾಪರಾಧವಾದರೂ ಏನಪಾ ಅಂದರೆ... ಪ್ರಾಣಿ ದಯಾ ಸಂಘದ ಕಾರ್ಯಕರ್ತೆ ರೋಶ್ನಿ ಅವರು ತುರ್ಭೆ ಪೊಲೀಸ್ ಠಾಣೆ ವ್ಯಾಪ್ತಿಯ ಸನಪದ ಸೆಕ್ಟರ್ 5ರಲ್ಲಿ ಕುಂಟುತ್ತಾ, ನರಳುತ್ತಿದ್ದ ಬೀದಿ ನಾಯಿಗೆ ಹಾಲುಣಿಸಿ, ಆರೈಕೆ ಮಾಡುತ್ತಿದ್ದರು. ಇದನ್ನು ಕಂಡ ದುರುಳರಿಗೆ ಏನನ್ನಿಸಿತೋ... ಮಾಡಬಾರದ್ದನ್ನೇ ಮಾಡಿಬಿಟ್ಟರು.

ಅಸಹಾಯಕ ಶ್ವಾನಕ್ಕೆ ನೆರವಾದ ರೋಶ್ನಿ ಮಾಡಿದ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸದೆ ಬೀದಿ ಬಸವನ ಹಾಗೆ ಆಕೆಯ ಮೇಲೆ ಮುಗಿಬಿದ್ದಿದ್ದಾರೆ. 'ಸೋಮವಾರ ರಾತ್ರಿ 9.45ರಲ್ಲಿ ಕಪ್ಪು-ಬಿಳಿ ನಾಯಿಗೆ ಹಾಲುಣಿಸುತ್ತಿದ್ದೆ. ಆಗ ಆರು ಮಂದಿ ಯುವಕರು ಅಲ್ಲಿಗೆ ಬಂದು ಕೆಟ್ಟಕೆಟ್ಟದಾಗಿ ಮಾತನಾಡತೊಡಗಿದರು.

ಏನೇನೋ ಸಂಜ್ಞೆಗಳನ್ನೂ ಮಾಡತೊಡಗಿದರು. ನನ್ನ ಕುಟಂಬದವರನ್ನೂ ಹೀಯಾಳಿಸತೊಡಗಿದರು' ಎಂದು ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಇಂಟರ್ನ್ ಆಗಿ ವ್ಯಾಸಂಗ ಮಾಡುತ್ತಿರುವ ರೋಶ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ಆ ಅಪವೇಳೆಯಲ್ಲಿ ದುರುಳರು ನನ್ನ ಬಗ್ಗೆ ಸಲ್ಲದ ಕಾಮೆಂಟ್ಸ್ ಮಾಡುತ್ತಿದ್ದಾಗ ನನ್ನ ಕಸಿನ್ ನನ್ನ ರಕ್ಷಣೆಗೆ ಕೂಗಿದೆ. ಕಸಿನ್ ಸಿಮಿತ್ ಸ್ಥಳಕ್ಕೆ ಬಂದವನೇ ಆ ಗ್ಯಾಂಗಿನವರ ಬಳಿ ತೆರಳಿ, ವಿಷಯ ಏನೆಂದು ವಿಚಾರಿಸತೊಡಗಿದ. ಆಗ ಪುಂಡರ ಗ್ಯಾಂಗ್ ನಮ್ಮಿಬ್ಬರ ಮೇಲೂ ಅಟ್ಯಾಕ್ ಮಾಡಿತು.

'ಸ್ಥಳೀಯರೇ ಹೆಚ್ಚಾಗಿದ್ದ ಸುಮಾರು ನೂರು ಮಂದಿ ಸ್ಥಳದಲ್ಲಿ ಜಮಾಯಿಸತೊಡಗಿದರು. ಆದರೆ ಆ ಪಾಪಿಗಳು ರೋಶ್ನಿ ಮೇಲೆ ಅತ್ಯಾಚಾರ ನಡೆಸಿ, ನನ್ನನ್ನು ಹಿಂಸಿಸುತ್ತಿದ್ದರೂ ಸುಮ್ಮನೆ ನೋಡುತ್ತಾ ನಿಂತುಬಿಟ್ಟರು. ಸುಮಾರು ಹೊತ್ತು ಆದ ಮೇಲೆ ಆ ಬೀದಿ ಗೂಂಡಾಗಳು ಸ್ಥಳದಿಂದ ಪರಾರಿಯಾದರು' ಎಂದು ಕಸಿನ್ ಸಿಮಿತ್ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಮೂವರು ಅನಾಮಿಕರ ವಿರುದ್ಧ ಅತ್ಯಾಚಾರ ಆರೋಪ ಮತ್ತು ಇತರೆ ಮೂವರು ಅವರಿಗೆ ಸಹಕರಿಸಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
A MBA student was gang molested for feeding stray dog on Monday night in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X