ಜಂಕ್ ಫುಡ್ ಜಾಹೀರಾತಿಗೆ ವಾಲ್ ಡಿಸ್ನಿ ಕೊಕ್

junk food ad
ಲಾಸ್‌ ಏಂಜಲೀಸ್, ಜೂ.7: ಎಬಿಸಿ ಬ್ರಾಡ್‌ಕಾಸ್ಟ್‌ ನೆಟ್‌ವರ್ಕ್‌ನ ಸಂಸ್ಥೆಯಾಗಿರುವ ವಾಲ್ಟ್ ಡಿಸ್ನಿ ತನ್ನ ಟಿವಿ ಚಾನೆಲ್‌ಗ‌ಳಲ್ಲಿ, ಟಿವಿಯ ಕಾರ್ಯಕ್ರಮಗಳಲ್ಲಿ, ರೇಡಿಯೊ ಶೋಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ಜಂಕ್‌ ಫ‌ುಡ್‌ಗಳ ಜಾಹೀರಾತುಗಳನ್ನು ಪ್ರದರ್ಶಿಸದಿರಲು ನಿರ್ಧರಿಸಿದೆ. ಮುಖ್ಯವಾಗಿ ಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರದರ್ಶಿತವಾಗುವ ಜಂಕ್‌ ಫ‌ುಡ್‌ಗಳ ಜಾಹೀರಾತು ಸ್ವೀಕರಿಸುವುದನ್ನು ನಿಲ್ಲಿಸಲು ವಾಲ್ ಡಿಸ್ನಿ ನಿರ್ಧರಿಸಿದೆ.

ಡಿಸ್ನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಮೆರಿಕದ ಪ್ರಥಮ ಮಹಿಳೆ ಮಿಶೆಲ್‌ ಒಬಾಮಾ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಅಮೆರಿಕದಲ್ಲಿ ಸ್ಥೂಲ ಕಾಯ ಈಗ ಭಾರೀ ದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ದೇಶದ ಮೂರನೇ ಒಂದರಷ್ಟು ಮಕ್ಕಳು ಅತಿ ತೂಕ ಅಥವಾ ಬೊಜ್ಜು ದೇಹ ಹೊಂದಿದ್ದಾರೆ. ಮಕ್ಕಳ ಬೊಜ್ಜಿಗೆ ಪೌಷ್ಟಿಕಾಂಶ ಕಡಿಮೆಯಿರುವ ಆದರೆ ಬಾಯಿಗೆ ರುಚಿಕರವಾಗಿರುವ ಜಂಕ್‌ ಫ‌ುಡ್‌ಗಳು ಮುಖ್ಯ ಕಾರಣ ಎಂದು ಅಧ್ಯಯನವೊಂದರಿಂದ ಸಾಬೀತಾಗಿದೆ. ಈ ಹಿನ್ನಿಲೆಯಲ್ಲಿ ವಾಲ್ಟ್ ಡಿಸ್ನಿ ಮಕ್ಕಳನ್ನು ಪ್ರಲೋಭನೆಗೆ ಒಡ್ಡುವ ಜಂಕ್‌ ಫ‌ುಡ್‌ಗಳ ಜಾಹೀರಾತುಗಳನ್ನು ನಿಷೇಧಿಸಲು ತೀರ್ಮಾನಿಸಿವೆ.

ವಾಲ್ಟ್ ಡಿಸ್ನಿಯ ನಿರ್ಧಾರ ಬೆನ್ನಿಗೆ ನ್ಯೂಯಾರ್ಕ್‌ ಮೇಯರ್‌ ಮೈಕೆಲ್‌ ಬ್ಲೂಮ್‌ಬರ್ಗ್‌ ಹೊಟೇಲ್‌ಗ‌ಳಲ್ಲಿ , ಸಿನೇಮಾ ಮಂದಿರಗಳಲ್ಲಿ , ಆಹಾರ ಗಾಡಿಗಳಲ್ಲಿ 16 ಔನ್ಸ್‌ಗಿಂತ (ಸುಮಾರು ಅರ್ಧ ಲೀಟರ್‌) ಹೆಚ್ಚಿನ ಸಿಹಿ ಪಾನೀಯಗಳ ಮಾರಾಟವನ್ನು ನಿಷೇಧಿಸುವ ಕುರಿತು ಚಿಂತಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+