ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸಿಇಟಿ 2012 ಫಲಿತಾಂಶ ಪ್ರಕಟ

By Mahesh
|
Google Oneindia Kannada News

Karnataka CET 2012 Results
ಬೆಂಗಳೂರು, ಜೂ.6: ಪ್ರಸಕ್ತ ಶೈಕ್ಷಣಿಕ ಸಾಲಿನ ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರ ವೃತ್ತಿ ಶಿಕ್ಷಣ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(CET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಮಂಡಳಿ(KEA) ಬುಧವಾರ ಮಧ್ಯಾಹ್ನ ಪ್ರಕಟಿಸಿದೆ.

ಪ್ರತಿ ಬಾರಿಯಂತೆ ಈ ಸಲ ಕೂಡಾ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ವಿಭಾಗದಲ್ಲಿಅರ್ಚನಾ ಸಾಸಿ, ಹೋಮಿಯೋಪತಿಯಲ್ಲಿ ಪ್ರೀತೀಶ್ ಎನ್, ಇಂಜಿನಿಯರಿಂಗ್ ವಿಭಾಗದಲ್ಲಿ ದೀಪಾ ಎಂ ಮತ್ತು ಆರ್ಕಿಟೆಕ್ಚರ್ ನಲ್ಲಿ ನಕ್ಷಾ ಎಸ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಬೆಂಗಳೂರಿನ ಎಚ್ ಎ ಎಲ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಅರ್ಚನಾ ಸಾಸಿ, ಮೈಸೂರಿನ ಸದ್ವಿದ್ಯಾ ಪಿಯು ಕಾಲೇಜಿನ ಪ್ರೀತೀಶ್ ಕುಮಾರ್ ಎನ್ ಹಾಗೂ ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ಎಲ್ ಎಂ ಎಂ ವೀರೇಶ್ ವೈದ್ಯಕೀಯ ವಿಭಾಗದಲ್ಲಿ ಪ್ರಥಮ ಮೂರು ಸ್ಥಾನ ಗಳಿಸಿದ್ದಾರೆ.

ಹೋಮಿಯೋಪತಿಯಲ್ಲಿ :
* ಪ್ರಥಮ: ಮೈಸೂರಿನ ಸದ್ವಿದ್ಯಾ ಪಿಯು ಕಾಲೇಜಿನ ಪ್ರೀತೀಶ್ ಕುಮಾರ್
* ದ್ವಿತೀಯ: ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ಚಂದನಾ ಆಚಾರ್ಯ
* ತೃತೀಯ: ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಅರ್ಚನಾ ಸಾಸಿ

ಇಂಜಿನಿಯರಿಂಗ್ ವಿಭಾಗ:
* ಪ್ರಥಮ: ಬೆಂಗಳೂರಿನ ಎಂಇಎಸ್ ಕಿಶೋರ ಕೇಂದ್ರ ಪಿಯು ಕಾಲೇಜಿನ ದೀಪಾ ಎಂ
* ದ್ವಿತೀಯ: ಬಳ್ಳಾರಿ ಸ್ವತಂತ್ರ ಪಿಯು ಕಾಲೇಜಿನ ರಾಜ್ ವಿ ಜೈನ್
* ತೃತೀಯ: ರಾಜಾಜಿನಗರ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಸಾಗರ್ ಹೊನುಂಗರ್

ಆರ್ಕಿಟೆಕ್ಚರ್ ವಿಭಾಗ:
* ಪ್ರಥಮ: ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ನಕ್ಷಾ
* ದ್ವಿತೀಯ: ಬೆಂಗಳೂರಿನ ಶ್ರೀಕುಮಾರನ್ಸ್ ಚಿಲ್ಡ್ರನ್ಸ್ ಹಮ್ಸ್ ನ ಪವನ್ ಕುಮಾರ್
* ತೃತೀಯ: ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ನ ಪೃಥ್ವಿ ಡಿ. ಹೆಗಡೆ

ಸಿಇಟಿ ಪರೀಕ್ಷೆಗೆ 1,20,945 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು, 1,18,780 ಮಂದಿ ಪರೀಕ್ಷೆ ಬರೆದಿದ್ದರು. ವೈದ್ಯಕೀಯ ವಿಭಾಗದಲ್ಲಿ 15,776 ವಿದ್ಯಾರ್ಥಿಗಳು, ಹೋಮಿಯೋಪತಿಯಲ್ಲಿ 59,011 ವಿದ್ಯಾರ್ಥಿಗಳು, ಇಂಜಿನಿಯರಿಂಗ್ ನಲ್ಲಿ 78,694 ಹಾಗೂ ಆರ್ಕಿಟೆಕ್ಚರ್ ನಲ್ಲಿ 836 ಮಂದಿ ಪ್ರವೇಶ ಪಡೆಯಲು ಅರ್ಹತೆ ಹೊಂದಿದ್ದಾರೆ ಎಂದು ಕೆಇಎ ಪ್ರಕಟಿಸಿದೆ.

ಕೆಇಎನ ಅಧಿಕೃತ ವೆಬ್ ತಾಣ www.kea.kar.nic.in ಅಥವಾ http://karresults.nic.in/cet2012.htm ನಲ್ಲಿ ಫಲಿತಾಂಶವನ್ನು ನೋಡಬಹುದು.

ಕರ್ನಾಟಕ ಸಿಇಟಿ ಪರೀಕ್ಷೆಗಳು ಮೇ 20,21 ಹಾಗೂ 23 ರಂದು ನಡೆಸಲಾಗಿತ್ತು. ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಫಲಿತಾಂಶ ಪಡೆದ ನಂತರ ಶ್ರೇಯಾಂಕ(rank) ಪಟ್ಟಿ ಪಡೆಯಬಹುದು.

ರಾಜ್ಯಾದ್ಯಾಂತ 12 ಕಡೆಗಳಲ್ಲಿ ಸ್ಥಾಪಿಸಲಾಗಿರುವ ಸಹಾಯ ಕೇಂದ್ರಗಳಲ್ಲಿ ಜೂನ್ 16 ರಿಂದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಕಾರ್ಯ ನಡೆಯಲಿದೆ.

ಜುಲೈ 10 ರಿಂದ ಅಭ್ಯರ್ಥಿಗಳ ಅರ್ಹತೆ ಆಧಾರಿಸಿ ಅವರು ಇಚ್ಛಿಸಿದ ಕೋರ್ಸ್ ಹಾಗೂ ಕಾಲೇಜನ್ನು ಆನ್ ಲೈನ್ ಮೂಲಕ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದಕ್ಕೆ ಜುಲೈ 20ರವರೆಗೆ ಕಾಲಾವಕಾಶ ಇರುತ್ತದೆ. ಜುಲೈ 22 ರಿಂದ 25ರವರೆಗೆ ಸೀಟು ಹಂಚಿಕೆ ನಡೆಯಲಿದೆ.

ಬೆಂಗಳೂರು, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಮಂಗಳೂರು, ಧಾರವಾಡ, ಗುಲ್ಬರ್ಗಾ, ಮೈಸೂರು, ಶಿವಮೊಗ್ಗ, ಕಾರವಾರ, ರಾಯಚೂರು ಮತ್ತು ಬಿಜಾಪುರ ಕೇಂದ್ರಗಳಲ್ಲಿ ಜೂ.16ರಿಂದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಯಲಿದೆ.

English summary
The Karnataka Examinations Authority (KEA) has announced the results of the Karnataka Common Entrance Test (CET) 2012 on June.6 noon. The Karnataka CET was conducted on May 20, 21 and 23 across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X