ಸೌದಿ ರಾಜಕುಮಾರಿ ಹೋಟೆಲಿನಲ್ಲಿ ಮಾಡಿದ್ದೇನು?

ಆನಿಲ್ಲಾ, ರಾಜಕುಮಾರಿ ಚೆನ್ನಾಗಿ ಹೊಟ್ಟೆಬಿರುವಂತೆ ತಿಂದುಂಡು ಬಿಲ್ ಕೊಡದೆ ತನ್ನ ಪಟಾಲಂ ಜತೆ ಹೋಟೆಲಲ್ಲಿ ಕಳ್ಳ ಹೆಜ್ಜೆಹಾಕುತ್ತಾ ಪರಾರಿಯಾಗಲು ಯತ್ನಿಸಿದ್ದಳು. ಅದೇ ನಮ್ಮಲ್ಲಿ ಸಿನಿಮಾಗಳಲ್ಲಿ ತೋರಿಸುತ್ತಾರಲ್ಲಾ, ಹಾಗೆ! ಆದರೆ ಹೋಟೆಲಿನರು ರಾಜಕುಮಾರಿ ಪರಿವಾರವನ್ನು ರುಬ್ಬೋಕೆ ಹಾಕಿಕೊಂಡಿರಾ? ಎಂಬುದನ್ನು ತಿಳಿದುಕೊಳ್ಳಬೇಕು ಅಂದರೆ ಮುಂದಿನದನ್ನು ಓದಿ.
ಇತ್ತೀಚೆಗೆ ಇದು ನಡೆದಿರುವುದು ಪ್ಯಾರಿಸ್ಸಿನ ಪಂಚತಾರಾ ಹೋಟೆಲಿನಲ್ಲಿ. ಬಿಲ್ ಮೊತ್ತ ಎಷ್ಟಪ್ಪಾ ಅಂದರೆ ಕೇವಲ five million pound. ಹಿಡಿದ್ದು ಹೇಗಪಾ ಅಂದರೆ ರಾಜಕುಮಾರಿ ಮಹಾ ಅಲ್ ಸುದೈರಿ ತನ್ನ ಪಟಾಲಂ ಜತೆ Shangri-La hotelನಿಂದ ರಾತ್ರಿ ವೇಳೆ ತಪ್ಪಿಸಿಕೊಳ್ಳುವಾಗ ಈ ಘಟನೆ ನಡೆದಿದೆ. ಇನ್ನೇನು ಕಳ್ಳಬೆಕ್ಕು ಹೊರಕ್ಕೆ ಬೀಳಬೇಕು ಅಂತಿದ್ದಾಗ ಹೋಟೆಲು ಸಿಬ್ಬಂದಿ ಪಟಕ್ಕನೆ ಹಿಡಿದುಬಿಟ್ಟಿದ್ದಾರೆ.
ಯಾರಪ್ಪಾ ಈ ರಾಜಕುಮಾರಿ ಮಹಾ ಅಲ್ ಸುದೈರಿ ಅಂದರೆ ಆಕೆಯ ವೃತ್ತಾಂತ ಹೀಗೆ ಬಿಚ್ಚಿಕೊಳ್ಳುತ್ತದೆ: ಸೌದಿ ಸಾಮ್ರಾಜ್ಯ ಪಟ್ಟಕ್ಕೇರಲು ಸಿದ್ಧವಾಗಿರುವ ಮತ್ತು ಪ್ರಸ್ತುತ ಉಪ ಪ್ರಧಾನಿಯಾಗಿರುವ ಪ್ರಿನ್ಸ್ ನಯೇಫ್ ಬಿನ್ ಅಬ್ದುಲ್ ಅಜೀಜರ ಪರಿತ್ಯಕ್ತ ಪತ್ನಿಯೇ ಈ ಮಹಾ ಅಲ್ ಸುದೈರಿ.
ಇಂತಿಪ್ಪ ರಾಜಕುಮಾರಿ ಮಹಾ ಅಲ್ ಸುದೈರಿ ಎಂಬ ಸುಂದರಿಯನ್ನು ಬರೋಬ್ಬರಿ 60 ಸೇವಕರು ಹಿಂಬಾಲಿಸುತ್ತಿದ್ದರು. ಸೂಟ್ ಕೇಸುಗಳ ರಾಶಿಯ ಮಧ್ಯೆ ಈ ಪಟಾಲಂ ಕಳೆದ ಶುಕ್ರವಾರ ಮಧ್ಯರಾತ್ರಿ 3 ಗಂಟೆಯಲ್ಲಿ ಹೊರಹೋಗಲು ಸಂಚು ಹೂಡಿದ್ದಾಗ ಸಿಬ್ಬಂದಿ ಬಲೆಗೆ ಬಿದ್ದಿದೆ. ತಕ್ಷಣ ಅವಳನ್ನು ಬಂಧಿಸಲು ಪೊಲೀಸರನ್ನು ಕರೆಸಲಾಯಿತು ಎಂದು Daily Mail ವರದಿ ಮಾಡಿದೆ.
ಆದರೆ ಮಧ್ಯರಾತ್ರಿ ಹೋಟೆಲಿಗೆ ಬಂದ ಪೊಲೀಸರು ಪೆಚ್ಚುಮೋರೆ ಹಾಕಿಕೊಂಡು ವಾಪಸಾಗಿದ್ದಾರೆ. ಆಕೆಯ ಸಹವಾಸವೇ ಬೇಡ. ಅದು ರಾಜತಾಂತ್ರಿಕ ಮಟ್ಟದ್ದು, ಆಕೆಯನ್ನು ಬಂಧಿಸುವುದು ಹಾಗಿರಲಿ, ಕಣ್ಣೆತ್ತಿಯೂ ನೋಡಿಲ್ಲ. ಕಳೆದ ಡಿಸೆಂಬರ್ 23ರಂದು ತನ್ನ ಪಟಾಲಂನೊಂದಿಗೆ ಹೋಟೆಲಿನಲ್ಲಿ ಠಿಕಾಣಿ ಹೂಡಿದ ಈ ಪುಣ್ಯಾತಗಿತ್ತಿ (ಸ್ವಂತ) ಪರ್ಸಿನಲ್ಲಿ ಒಂದು ಪೈಸೆ ಇಲ್ಲದಿದ್ದರೂ 41 ರೂಮುಗಳ ಇಡೀ ಒಂದು ಮಹಡಿಯನ್ನು ತನಗಾಗಿ ಬುಕ್ ಮಾಡಿದ್ದಳು. ಅಂದಹಾಗೆ, ಕೊಳ್ಳುಬಾಕ ಸಂಸ್ಕೃತಿಯ ರಾಜಕುಮಾರಿ ಮಹಾ ಅಲ್ ಸುದೈರಿ ಬಿಲ್ ಪಾವತಿಸದೆ ಪರಾರಿಯಾಗಿದ್ದು ಇದೇ ಮೊದಲಲ್ಲ.












Click it and Unblock the Notifications