• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ಲಕ್ಷ್ಮಿನಾರಾಯಣಗೆ ಕೇಂದ್ರದಿಂದ ವಿಶೇಷ ಭದ್ರತೆ

By Srinath
|
ಹೈದರಾಬಾದ್, ಜೂನ್ 3: ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರಿಗೆ ನಿರೀಕ್ಷೆಯಂತೆ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಒಂದೊಂದಾಗಿ high profile ಕೇಸುಗಳನ್ನು ದಾಖಲಿಸುತ್ತಾ ಮುನ್ನುಗ್ಗುತ್ತಿರುವ ಸಿಬಿಐ ಲಕ್ಷ್ಮಿನಾರಾಯಣ ಕಳೆದ ವಾರ ಒಟ್ಟಿಗೆ ಎರಡೆರಡು ಹುತ್ತಗಳಿಗೆ ಕೈಹಾಕಿದರು.

ಮೊದಲನೆಯದಾಗಿ, ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಿದರು. ನಂತರ ತಮ್ಮದೇ ಜಡ್ಜ್ ಪಟ್ಟಾಭಿಯ ವಿರುದ್ಧ ಕೇಸು ದಾಖಲಿಸಿದರು. ಈ ಮಧ್ಯೆ, ಅಕ್ರಮ ಗಣಿವೀರ ಗಾಲಿ ಜನಾರ್ದನ ರೆಡ್ಡಿ ಕೇಸ್ ಮೇಲೆ ಸಿಬಿಐ ಮತ್ತಷ್ಟು ಬಿಗಿ ಹಿಡಿತ ಸಾಧಿಸಿದ್ದೂ ಸಿಬಿಐ ಲಕ್ಷ್ಮಿನಾರಾಯಣ ಪ್ರಾಣ ಬೆದರಿಕೆಯನ್ನು ಹೆಚ್ಚಿಸಿದೆ.

ಇವೆರಡೂ ಪ್ರಕರಣಗಳು ಸಿಬಿಐ ಲಕ್ಷ್ಮಿನಾರಾಯಣಗೆ ಜೀವ ಬೆದರಿಕೆಯೊಡ್ಡಿದೆ ಎಂದು ಕೆಂದ್ರ ಗುಪ್ತಚರ ಮೂಲಗಳು ರಾಜ್ಯ ಸರಕಾರವನ್ನು ಎಚ್ಚರಿಸುತ್ತಿದ್ದಂತೆ ಗಾಬರಿಗೆ ಬಿದ್ದ ರಾಜ್ಯ ಸರಕಾರ ತಕ್ಷಣ ಸಿಬಿಐ ಲಕ್ಷ್ಮಿನಾರಾಯಣಗೆ ವಿಶೇಷ ಭದ್ರತೆಯನ್ನು ಕಡ್ಡಾಯಗೊಳಿಸಿದೆ.

ಏಕೆಂದರೆ ಈ ಹಿಂದೆಯೇ ಸಿಬಿಐ ಲಕ್ಷ್ಮಿನಾರಾಯಣಗೆ 'ವೈ' ಶ್ರೇಣಿಯ ಭದ್ರತೆ ಕಲ್ಪಿಸಲಾಯಿತು. ಗನ್ ಮ್ಯಾನ್ ನೀಡಲಾಗಿತ್ತು. ಬುಲೆಟ್ ಪ್ರೂಫ್ ಕಾರನ್ನು ನೀಡಲಾಯಿತು.

ಆದರೆ low profile maintain ಮಾಡುವ ಲಕ್ಷ್ಮಿನಾರಾಯಣ ಅವರು ಅದೆಲ್ಲ ನನಗೆ ಬೇಡವೇ ಬೇಡ. ನನ್ನೊಂದಿಗೆ ನನ್ನ ಅಧಿಕಾರಿಗಳು ಇದ್ದರೆ ಸಾಕು. ಎಲ್ಲಾ ಆ 'ಏಡುಕೊಂಡಲವಾಡು' ನೋಡಿಕೊಳ್ಳುತ್ತಾನೆ ಎಂದು ರಾಜ್ಯ ಸರಕಾರ ತೋರಿದ ಕಾಳಜಿಯನ್ನು ನಯವಾಗಿ ನಿರಾಕರಿಸಿದ್ದರು. ಅಂದಹಾಗೆ, ತಿರುಪತಿ ತಿಮ್ಮಪ್ಪನ ಪರಮ ಭಕ್ತ ಈ ಲಕ್ಷ್ಮಿನಾರಾಯಣ.

ಆದರೆ ಬದಲಾದ ವಿಷ ಗಾಲಿಯಿಂದ ಈಗ ಶಸ್ತ್ರಸಜ್ಜಿತ ಆರು ಮಂದಿ ಎಸ್ಕಾರ್ಟ್ ಪೊಲೀಸರು ಸಿಬಿಐ ಲಕ್ಷ್ಮಿನಾರಾಯಣಗೆ ನೆರಳಾಗಿ ಭದ್ರತೆ ಒದಗಿಸಲಿದ್ದಾರೆ. ಇನ್ನು, ಅವರ ಮನೆಯ ಬಳಿ ಮತ್ತು ನಾಂಪಲ್ಲಿಯಲ್ಲಿರುವ ಸಿಬಿಐ ಕಚೇರಿಯ ಸುತ್ತಲೂ ಪೊಲೀಸ್ ಚೌಕಿ ಹಾಕಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ವಿವಿ ಲಕ್ಷ್ಮಿನಾರಾಯಣ ಸುದ್ದಿಗಳುView All

English summary
Central Government has allotted special escort to CBI Joint Director Laxmi Narayana. Laxmi Narayana investigating Jagan assets case, EMAAR case and Gali Janardhan Reddy's OMC case and Judge Pattabhi's bribe for bail case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more