• search
For Quick Alerts
ALLOW NOTIFICATIONS  
For Daily Alerts

  ರೆಡ್ಡಿ ದುಡ್ಡು Fix ಆಯಿತು, ಜಗನ್ ಗೆ ಜೈಲೇ ಗತಿ

  By Srinath
  |
  jagan-reddy-bail-rejected-may-be-cbi-custody
  ಹೈದರಾಬಾದ್, ಜೂನ್ 2: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಭಾನುವಾರ ಸಾಯಂಕಾಲ ಬಂಧನಕ್ಕೊಳಗಾಗಿದ್ದ ಜಗನ್‌ಮೋಹನ್ ರೆಡ್ಡಿಗೆ ನಾಂಪಲ್ಲಿಯಲ್ಲಿರುವ ಸಿಬಿಐ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

  'ನನ್ನ ಕಕ್ಷಿದಾರರು ಕಡಪ ಕ್ಷೇತ್ರದ ಸಂಸದರು. ದಯವಿಟ್ಟು ಅವರಿಗೆ ಜಾಮೀನು ನೀಡಿ' ಎಂದು ವೈಎಸ್ ಜಗನ್ ಮೋಹನ್ ರೆಡ್ಡಿ (38) ಪರ ವಕೀಲರು ನೆಪ ಹೇಳಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಶೇಷ ಸಿಬಿಐ ನ್ಯಾಯಾಲಯವು 'ನೀನು ಸಂಸದನಾಗಿದ್ದೀಯಾ ಅಂತ ನಿನಗೆ ಜಾಮೀನು ನೀಡೋಕ್ಕಾಗೊಲ್ಲ' ಎಂದು ಛೀಮಾರಿ ಹಾಕಿತು. ಅದಕ್ಕೂ ಮುನ್ನ ಖುದ್ದು ಪ್ರಧಾನಿಯ ವಿರುದ್ಧ ಆರೋಪ (Coalgate ಪ್ರಕರಣ) ಕೇಳಿಬಂದಿದೆ. ಆದ್ದರಿಂದ ರಾಜಕಾರಣಿಗಳಿಗೆಲ್ಲ ರಾಜೀನಾಮೆ ನೀಡುತ್ತಾ ಹೋದರೆ ಅದಕ್ಕೆ ಕೊನೆಮೊದಲು ಇರೊಲ್ಲ ಎಂದು ಸಿಬಿಐ ಪ್ರತಿವಾದ ಮಂಡಿಸಿತ್ತು.

  ಆಂಧ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಪ್ರಚಾರ ನಡೆಸಲು ಕನಿಷ್ಠ ಜೂನ್ 10 ರವರೆಗೆ ಜಗನ್‌ಗೆ ಮಧ್ಯಂತರ ಜಾಮೀನು ನೀಡಬೇಕೆಂದು ಜಗನ್ ಪರ ವಕೀಲರು ಮನವಿ ಮಾಡಿದ್ದರು. ಆದರೆ ಜಡ್ಜ್ ಅದಕ್ಕೂ ಬಿಲ್ಕುಲ್ ಒಪ್ಪಲಿಲ್ಲ. ಇದರಿಂದ ಜಗನ್‌ ಚಂಚಲಗೂಡ ಜೈಲು ವಾಸ ಕನಿಷ್ಠ ಜೂ.12ರ ಉಪ ಚುನಾವಣೆವರೆಗೂ ಮುಂದುವರೆಯುವುದು ಅನಿವಾರ್ಯವಾಗಿದೆ.

  ಇಂದು ಸಿಬಿಐ ವಶಕ್ಕೆ?:
  ಇನ್ನು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ಸುಪರ್ದಿಗೆ ಹಸ್ತಾಂತರಿಸಬೇಕು ಎಂದು ಸಿಬಿಐ ಕೋರಿದ್ದು, ಆ ಸಂಬಂಧ ಜಗನನ್ನು ಸಿಬಿಐ ಕೈಗೆ ನೀಡುವ ಬಗ್ಗೆ ಕೋರ್ಟ್ ಇಂದು ಮಧ್ಯಾಹ್ನ 12 ಗಂಟೆಗೆ ಆದೇಶ ಹೊರಡಿಸಲಿದೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣಲ್ಲಿ ಬಂಧಿತರಾಗಿರುವ ಜಗನ್‌ ಅವರನ್ನು ನ್ಯಾಯಾಲಯ ಜೂ.11ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

  ಇದೇ ವೇಳೆ, ಎಮ್ಮಾರ್ ಟೌನ್ ಶಿಪ್ ಭೂಹಗರಣದಲ್ಲಿ ಜೈಲಿನಲ್ಲಿ ಗೃಹ ಕಾರ್ಯದರ್ಶಿ ಬಿಪಿ ಆಚಾರ್ಯ ಮತ್ತು ಟಿಟಿಡಿ ಸಿಇಒ ಎಲ್ ವಿ ಸುಬ್ರಮಣ್ಯ ಅವರನ್ನು ಸಿಬಿಐ ವಿಚಾರಣೆ ನಡೆಸಬಹುದೆಂದು ಕೋರ್ಟ್ ಆದೇಶಿಸಿದೆ.

  ರೆಡ್ಡಿ ದುಡ್ಡು fix ಆಯಿತು: ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ಮನೆಗೆ ದಾಳಿ ಮಾಡಿದ್ದ ವೇಳೆ ವಶಪಡಿಸಿಕೊಳ್ಳಲಾಗಿದ್ದ 4.24 ಕೋಟಿ ರೂ. ನಗದನ್ನು ತಮ್ಮ ವಶಕ್ಕೆ ನೀಡಬೇಕೆಂದು ಕೋರಿ ಬೆಂಗಳೂರು ತೆರಿಗೆ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

  ವಶಪಡಿಸಿಕೊಂಡ ಹಣವನ್ನು ಸಿಬಿಐ ಪುಸ್ತಕದಲ್ಲಿ ನಮೂದಿಸಿರಲಿಲ್ಲ. ಆದ್ದರಿಂದ ತಮ್ಮ ವಶಕ್ಕೆ ನೀಡವಂತೆ ತೆರಿಗೆ ಅಧಿಕಾರಿಗಳು ಕೇಳಿದ್ದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಿಬಿಐ ವಕೀಲರು, ಯಾಕಾಗಿ ಅವರಿಗೆ ಈ ಹಣದ ಮೇಲೆ ಹಕ್ಕಿದೆ? ಮತ್ತು ರೆಡ್ಡಿಯವರ ತೆರಿಗೆ ಬಾಕಿಯ ಬಗ್ಗೆಯೂ ಹೇಳಿಲ್ಲ ಎಂದು ವಾದಿಸಿದ್ದರು.

  ಈಗ ರೆಡ್ಡಿಯ 4.24 ಕೋಟಿ ರೂ. ನಗದನ್ನು ನ್ಯಾಯಾಲಯದ ಆವರಣದಲ್ಲಿರುವ State Bank of Hyderabad ಶಾಖೆಯಲ್ಲಿ CBI court ಹೆಸರಿನಲ್ಲಿ 3 ವರ್ಷಗಳ ಅವಧಿಗೆ fixed deposit ಮಾಡುವಂತೆ ಸಿಬಿಐ ಕೋರ್ಟ್ ನಿನ್ನೆ ಶುಕ್ರವಾರ ಆದೇಶ ಹೊರಡಿಸಿತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  YSR Congress Party leader YS Jaganmohan Reddy was arrested yesterday May 28 by CBI. The CBI Court in Hyderabad has denied him interium bail yesterday.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more