ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗಾಲಿ'ಗೊಡ್ಡಿದ ದೀಪದಂತೆ ರೆಡ್ಡಿ ಕೇಸೂ

By Srinath
|
Google Oneindia Kannada News

cbi-judge-pattabhi-bribe-case-danger-for-reddy
ಬಳ್ಳಾರಿ, ಜೂನ್ 2: ಹೌದು, ಅಕ್ರಮ ಗಣಿವೀರ ಗಾಲಿ ಜನಾರ್ದನ ರೆಡ್ಡಿಯ ಪ್ರಕರಣ ಈಗ 'ಗಾಳಿಗೊಡ್ಡಿದಾ ದೀಪದಂತೆ... ಆಗಲೋ ಈಗಲೋ...' ಸ್ವತಃ ಗಾಲಿಯನ್ನೇ ಬಲಿ ತೆಗೆದುಕೊಳ್ಳಲಿದೆ. ಖುದ್ದು ನ್ಯಾಯಾಧೀಶನಿಗೇ ತಿನ್ನಬಾರದ್ದನ್ನು ತಿನ್ನಿಸಿರುವ ಪ್ರಕರಣ ಬಯಲಿಗೆ ಬೀಳುತ್ತಿದ್ದಂತೆ ರೆಡ್ಡಿ ಗತಿ ಇನ್ನು ಅಷ್ಟೇಯಾ ಎನ್ನುವಂತಾಗಿದೆ.

'ಲಂಚ ನೀಡುವುದು ಮತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ' ಎಂಬ ಸವಕಲು ಮಾತನ್ನು ಪಕ್ಕಕ್ಕಿಟ್ಟು ನೋಡುವುದಾದರೆ... ರೆಡ್ಡಿ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣ ನ್ಯಾಯ ತಕ್ಕಡಿಯಲ್ಲಿ ಒಂದು ಕಡೆಯಾದರೆ ಅದಕ್ಕಿಂತ ಭಾರವಾದ ಮತ್ತೊಂದು ತೂಕ ಈ ಜಡ್ಜ್ ಲಂಚ ಪ್ರಕರಣಕ್ಕೆ ಇದೆ. ಈ ಪ್ರಕರಣವನ್ನು ಮುಂದಿಟ್ಟು ಕೊಂಡೇ ಸಿಬಿಐ ಆಟ ಆಡಬಹುದು.

ಅಸಲಿಗೆ 'high profile ಸಿಬಿಐ ಲಕ್ಷ್ಮಿನಾರಾಯಣ' ಅವರು ರೆಡ್ಡಿ ಕೇಸನ್ನು ಕೈಗೆತ್ತಿಕೊಂಡಾಗಿನಿಂದಲೂ (ಸೆ. 5) ಸಿಬಿಐ ಕೋರ್ಟಿಗೆ ಹೇಳುತ್ತಾ ಬಂದಿರುವುದು ಇದನ್ನೇ. ರೆಡ್ಡಿಗೆ ಜಾಮೀನು ನೀಡಬಹುದು. ಆದರೆ ಆಪಾದಿತ ಸಾಮಾನ್ಯನಲ್ಲ. ಜಾಮೀನಿನ ಮೇಲೆ ಹೊರಕ್ಕೆ ಬಂದರೆ ಮುಗಿದೇ ಹೋಯಿತು. ಸಾಕ್ಷ್ಯಗಳನ್ನು ನಾಶಪಡಿಸುವಷ್ಟು ಬಲಾಢ್ಯ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಅಪ್ಪಿತಪ್ಪಿ ಜಾಮೀನು ನೀಡಬೇಡಿ' ಎಂದು ಕೋರ್ಟಿಗೆ ಮೊರೆಯಿಡುತ್ತಲೇ ಇದ್ದರು.

ಆರಂಭದಲ್ಲಿ, ನ್ಯಾಯಪೀಠದಲ್ಲಿ ವಿರಾಜಮಾನರಾಗಿದ್ದ ನಿಷ್ಕಳಂಕ ನ್ಯಾಯಪುತ್ರರು 'ರೆಡ್ಡಿಗೆ ಜಾಮೀನು ಕೊಡಬಾರದು' ಎಂಬ ಪ್ರತಿವಾದಕ್ಕೆ ತಲೆದೂಗಿದ್ದರು. ಆದರೆ an idle mind is the devil's workshop ಅನ್ನುವ ಹಾಗೆ ಕೆಲಸವಿಲ್ಲದ ಬಡಗಿ ಜೈಲಿನಲ್ಲಿ ಕೂತು ಅದೇನು ಆಲೋಚನೆ ಮಾಡಿದನೋ ಅಂತೂ ನೇರವಾಗಿ ಜಡ್ಜ್ ಸಾಹೇಬನನ್ನೇ ಖರೀದಿಸಲು ನಿರ್ಧರಿಸಿಬಿಟ್ಟ.

ರೆಡ್ಡಿಗಾರು ವರದಿಗಾರ್ತಿಗೆ Scorpio ನೀಡಿದ ಪ್ರಸಂಗ: ಅಷ್ಟಕ್ಕೂ ರೆಡ್ಡಿಗಾರಿಕಿ ಇದೇನೂ ಹೊಸದಲ್ಲವಲ್ಲ. ಇದುವರೆಗೂ ಅದೆಷ್ಟು IAS/IPS ಗಳನ್ನು ಖರೀದಿಸಿಲ್ಲ ಹೇಳಿ. ಇನ್ನು ಛೋಟಾ, ಮೋಟಾ ಅಧಿಕಾರಿಗಳಂತೂ ಬಳ್ಳಾರಿಯಲ್ಲಿ ಕಾಲಾಳುಗಳಿಗೆ ಸಮ. ಪತ್ರಕರ್ತರೂ ಇದಕ್ಕೆ ಹೊರತಲ್ಲ. ಇಲ್ಲೊಂದು interesting story ಹೇಳಬೇಕು ನಿಮಗೆ. ಏನೆಂದರೆ ತೆಹಲ್ಕಾಡಾಟ್ ಕಾಂನ ವರದಿಗಾರ್ತಿ 2 ವರ್ಷದ ಹಿಂದೆ ಬಳ್ಳಾರಿ ಧಣಿಯನ್ನು ಮಾತನಾಡಿಸಿ ಬರೋಣ ಅಂತ ಅಲ್ಲಿಗೆ ಹೋಗಿದ್ದರು.

ಸರಿ ಅದೂ ಇದೂ ಮಾತುಕತೆ ಆದ್ಮೇಲೆ ರೆಡ್ಡಿಗೆ ಏನೂ ಅನುಮಾನ ಬಂದಿದೆ. ಇಯಮ್ಮ ನನ್ನ ಬುಡಕ್ಕೆ ನೀರು ಬಿಡ್ತಾಳೆ. ಮೊದಲೇ ತೆಹಲ್ಕಾದಿಂದ ಬಂದವಳು ಎಂದು ಎಚ್ಚರಗೊಂಡ ರೆಡ್ಡಿಗಾರು ವರದಿಗಾರ್ತಿ ಬೆಂಗಳೂರಿಗೆ ಹೊರಟು ನಿಂತಾಗ ತಗೊಂಡೋಗಮ್ಮಾ. ಈ ವಾಹನದಲ್ಲೇ ಹೋಗು ಪರವಾಗಿಲ್ಲ ಎಂದು ಹೊಚ್ಚ ಹೊಸ Scorpio ವಾಹನವನ್ನು ತೋರಿಸಿದ್ದಾನೆ. ಮೊದಲೇ ತೆಹಲ್ಕಾ ವರದಿಗಾರ್ತಿ ನಯವಾಗಿಯೇ Lift offer ಅನ್ನು ನಿರಾಕರಿಸಿದ್ದಾಳೆ.

ಆಗ ರೆಡ್ಡಿ ನಿಜಕ್ಕೂ ದಿಗುಲಿಗೆ ಬಿದ್ದು ತನ್ನ ಚೇಲಾಳಗಳಿಗೆ ಸಂಜ್ಞೆ ಭಾಷೆ ಹೇಳಿಕೊಟ್ಟಿದ್ದಾನೆ. ಧಡಧಡನೆ ಓಡೋಡಿ ಬಂದವರೇ 'ಅಮ್ಮಾ ಅಣ್ಣಾ ಹೇಳುತ್ತಿರುವುದು ಈ ಹೊಸ Scorpio ವಾಹನವನ್ನು ನೀನೇ ಸ್ವಂತಕ್ಕೆ ಇಟ್ಟುಕೋ ಅಂತ. ನೀನೇ ತಗೊಂಡೋಗಮ್ಮಾ' ಅಂತ ಪೇಡಿದ್ದಾರೆ. ಮುಂದೆ ಆ ವರದಿಗಾರ್ತಿ ರೆಡ್ಡಿ ಬಂಟರಿಗೆ ಛೀಮಾರಿ ಹಾಕಿಬಂದರು ಎಂಬುದು ಬೇರೆ ಮಾತು. ಆದರೆ ಇಂತಹ ಪ್ರಕರಣಗಳು ಅವೆಷ್ಟೋ, ಈ ಪ್ರಲೋಭೆಗೆ ಮಂಡಿಯೂರಿದವರೆಷ್ಟೋ...

ಆ ಪೊಗರಿನಿಂದಲೇ ರೆಡ್ಡಿಗಾರು ಒಬ್ಬ ಅಪ್ರಾಮಾಣಿಕ ಜಡ್ಜ್ ನನ್ನು Fix ಮಾಡಿಕೊಂಡಿದ್ದು. ಮೊದಲೇ ಆರೇಳು ಬಾರಿ ಜಾಮೀನಿಗೆ ಅರ್ಜಿ ಗುಜರಾಯಿಸಿ ಗುಜರಾಯಿಸಿ, ಮೈಕಯ್ಯಿ ನೋಯಿಸಿಕೊಂಡಿದ್ದ ಜೀವ. ಜತೆಗೆ ಎದುರಿಗೆ ಹಿಮಾಲಯದಂತೆ ಅಲುಗಾಡದೆ ನಿಂತಿದ್ದ ಖಡಕ್ ಸಿಬಿಐ.

ಜಡ್ಜ್ ಲಂಚ ಪ್ರಕರಣವೇ ಈಗ ಬ್ರಹ್ಮಾಸ್ತ್ರ: ಏನಾದರೂ ಮಾಡಲೇಬೇಕು. ಹೀಗೆ ಜೈಲಿನಲ್ಲಿ ಕುಳಿತರೆ ಭವಿಷ್ಯವಿರುವುದಿಲ್ಲ ಎಂದೆಣಿಸಿದ ರೆಡ್ಡಿಗಾರು ಸುಮ್ನೆ ಹಾಗೇ ಒಂದು ಬಿಸ್ಕತ್ ಎಸೆದಿದ್ದಾನೆ. ಸ್ವಾಮಿನಿಷ್ಠೆ ತೋರಿದ ಜಡ್ಜ್ ಸಾಹೇಬ ಅದಕ್ಕೆ ಬಾಯ್ದೆರೆದಿದೆ. ಇತ್ತ 'ಸಿಬಿಐ ಲಕ್ಷ್ಮಿನಾರಾಯಣ' ಸಹ ಇಂತಹುದೇ ಸುವರ್ಣಾವಕಾಶಕ್ಕೆ ಕಾದಿದ್ದರು ಎನಿಸುತ್ತದೆ. ಗಬಕ್ಕನೆ ಮಿಕಾನ್ನ ಹಿಡಿದಿದ್ದಾರೆ. ತಮಗೊಪ್ಪಿಸಿದ್ದ ಓಬಲಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕಿಂತ, ಜಡ್ಜ್ ಲಂಚ ಪ್ರಕರಣವೇ ಈಗ ಅವರಿಗೆ ಬ್ರಹ್ಮಾಸ್ತ್ರವಾಗಿ ಸಿಕ್ಕಿದೆ.

ನಾಳೆ ಕೋರ್ಟಿನಲ್ಲಿ ಪ್ರಕರಣವನ್ನು prove ಮಾಡುತ್ತಾ, ನೋಡಿ ಸ್ವಾಮಿ ನಾನು ಆವತ್ತಿಂದ ಹೇಳುತ್ತಾ ಬಂದಿದ್ದೆ. ಈ ಮಹಾನುಭಾವ ಏನು ಬೇಕಾದರೂ ಮಾಡುವಷ್ಟು ಬಲಶಾಲಿ. ಅದಕ್ಕೆ ಜಾಮೀನು ಬೇಡ ಅನ್ನುತ್ತಿದ್ದೆ. ಈಗ ನೋಡಿದರೆ ಸಾಕ್ಷಾತ್ ನ್ಯಾಯಮೂರ್ತಿಯನ್ನೇ ತನ್ನ ಅಡ್ಡದಾರಿಗೆ ಎಳೆದುಕೊಂಡಿದ್ದಾನೆ.

ಇದೊಂದೇ ಸಾಕ್ಷ್ಯ ಸಾಕು. ಇನ್ನು ಇವಯ್ಯನನ್ನು ಹೊರಕ್ಕೆ ಬಿಡಬೇಡಿ. ಇಲ್ಲಿ ಒಟ್ಟೊಟ್ಟಿಗೆ 2 ಕೇಸುಗಳು ಥಳುಕು ಹಾಕಿಕೊಂಡಿವೆ. ಈ 'ಆರ್ಥಿಕ ಭಯೋತ್ಪಾದಕನ' ಬಗ್ಗೆ ನೀವೇ ನಿರ್ಧರಿಸಿ' ಎಂದು ಲಕ್ಷ್ಮಿನಾರಾಯಣಗಾರು ತಮ್ಮ ವಕೀಲರ ಮೂಲಕ ಹೇಳಿಸಿ ಬಿಟ್ಟರೆ ಮುಗೀತು ರೆಡ್ಡಿ ಕೇಸು. ಆ ಮಹಾನುಭಾವ ಆಚೆ ಬರುವುದು ಬಹು ದೂರದ, ದೀರ್ಘ ಕಾಲದ ಮಾತಾದೀತು.
Advance hats-off to VVL !

English summary
The Andhra Pradesh Chief Justice has suspended Special CBI Judge Pattabhi Rama Rao for alleged irregularities. He had granted bail to prime accused Gali Janardhana Reddy on May 11 by taking bribe. As such CBI Special Judge Pattabhi bribe case definitely prove dangerous for Gali Janardhana Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X