• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

KAS ಮಹಾಂತೇಶ್ ಗೆ ಪ್ರೇಮಪಾಶ ಮುಳುವಾಯಿತೇ?

By Srinath
|
ಬೆಂಗಳೂರು, ಮೇ 23 : ದಕ್ಷ ಕೆಎಎಸ್ ಅಧಿಕಾರಿ ಮಹಾಂತೇಶ್ ದುರಂತ ಸಾವಿಗೆ ಇಡೀ ನಾಡೇ ಮಮ್ಮಲಮರಗುತ್ತಿರುವಾಗ ಅಹಿತಕರ ವಿಷಯವೊಂದು ಪ್ರಕರಣದಲ್ಲಿ ಕೇಳಿಬಂದಿದೆ.

ತನಿಖಾಧಿಕಾರಿ DCP ರವಿಕಾಂತೇ ಗೌಡರು ನಿನ್ನೆ ಕುಶಾಲನಗರದ ಯುವತಿಯೊಬ್ಬರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು. ಅದೀಗ ಫಲ ನೀಡಿದೆ ಎನ್ನಿಸುತ್ತಿದೆ. ನಿನ್ನೆ ರಾತ್ರಿ ಕುಶಾಲನಗರದ ಯುವತಿಯ ಜತೆಗೆ ಮತ್ತೊಬ್ಬರನ್ನು ಅವರು ಬಂಧಿಸಿದ್ದಾರೆ ಎಂಬ ನಿಖರ ಮಾಹಿತಿ ಪೊಲೀಸರಿಂದ ತಿಳಿದುಬಂದಿದೆ.

ಈ ಮಧ್ಯೆ, ಮಹಾಂತೇಶ್ ಅತ್ಯಂತ ದಕ್ಷ ಅಧಿಕಾರಿಯಾಗಿದ್ದುದುದೇ ಅವರ ದುರಂತ ಸಾವಿಗೆ ಕಾರಣ ಎನ್ನಲಾಗಿತ್ತು. ಆದರೆ ಪೊಲೀಸರನ್ನು ನಂಬುವುದಾದರೆ KAS ಮಹಾಂತೇಶ್ ಹತ್ಯೆಗೆ ಬೇರೆಯದೇ ಕಾರಣವಿದೆ.

ಪೊಲೀಸರು ನಾಲ್ಕು ತಿಂಗಳ ಹಿಂದಕ್ಕೆ ಹೋಗಿ ತನಿಖೆ ನಡೆಸಿದಾಗ... ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. 4 ತಿಂಗಳ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿ ಏನಾಗಿತ್ತೆಂದರೆ... ಇದೇ ದಕ್ಷ ಅಧಿಕಾರಿ ಮಹಾಂತೇಶ್ ತಮ್ಮ ಖಾಸಗಿ ಕಾರಿನಲ್ಲಿ ಹೋಗುತ್ತಿದ್ದರು. ಅ ವೇಳೆ ದ್ವಿಚಕ್ರ ವಾಹನವೊಂದು ಅವರ ಕಾರಿಗೆ ಮುತ್ತಿಕ್ಕಿತ್ತು. ಬೈಕ್ ಚಾಲಕನು ಮಹಾಂತೇಶ್ ಮೇಲೆ ರೇಗಾಡಿದ್ದ. ಅದು ಮಹಾಂತೇಶ್ ಗೆ ಪ್ರಾಣ ಬೆದರಿಕೆಯೊಡ್ಡುವ ತಂತ್ರವಾಗಿತ್ತು ಎಂದು ಎಣಿಸಲಾಗಿತ್ತು.

ಆದರೆ...with great respect to Mahanteash, ಆಘಾತಕಾರಿ ಸಂಗತಿಯೆಂದರೆ ಹಾಗೆ ದ್ವಿಚಕ್ರವಾಹನದಿಂದ ಮುತ್ತಿಕ್ಕಿಸಿಕೊಂಡ ಮಹಾಂತೇಶ್ ಅವರ ಖಾಸಗಿ ಕಾರಿನಲ್ಲಿ ಇಬ್ಬರು ಮಹಿಳೆಯರು ಇದ್ದರು. ಇಬ್ಬರ ಪೈಕಿ ಒಬ್ಬ ಯುವತಿ ಮಹಾಂತೇಶ್ ಅವರ girlfriend ಆಗಿದ್ದರು ಎನ್ನುತ್ತಿದೆ ಪೊಲೀಸ್ ಮೂಲಗಳು. ಸದರಿ ಯುವತಿಯ ಮೊಬೈಲ್ ಫೋನ್ ಪ್ರಸ್ತುತ ಪೊಲೀಸ್ ವಶದಲ್ಲಿದೆ. ಅದರಲ್ಲಿ ಆ ಯುವತಿ ಮತ್ತು ಮಹಾಂತೇಶ್ ಅವರ ಸಲ್ಲಾಪದ ದೃಶ್ಯಗಳಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಆ ಯುವತಿಯು ಮಹಾಂತೇಶ್ ಅವರ ನೆರವಿನಿಂದ ಬೆಂಗಳೂರಿನಲ್ಲಿ ನಾನಾ ಹೌಸಿಂಗ್ ಸೊಸೈಟಿಗಳ ಮುಖಾಂತರ ಮನೆಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಮಹಾಂತೇಶ್ Cooperative Societies Audit Departmentನಲ್ಲಿ ಉಪ ನಿರ್ದೇಶಕರಾಗಿದ್ದರು.

ಮೇ 15ರಂದು ಹತ್ಯೆಗೂ ಮುನ್ನ ಮಹಾಂತೇಶ್ ಮತ್ತು ಹಂತಕರ ಮಧ್ಯೆ ಸುಮಾರು 15 ನಿಮಿಷಗಳ ವಾಗ್ಯುದ್ಧ, ಬಡಿದಾಟ ನಡೆದಿದೆ. ಆದರೆ ಮಹಾಂತೇಶ್ ಹತ್ಯೆಗೆ ಯುವತಿಯ ಪ್ರೇಮ ಪ್ರಸಂಗ ಕಾರಣವಾಗಿರಬಹುದೇ ಎಂಬುದು ಇನ್ನೂ ದೃಢಪಟ್ಟಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore police are investigating the KAS officer Mahantesh murder case. Police have aarested 2 persons on Tuesday night. Police suspect love affair angle in the case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more