ಲಕ್ಷ್ಮಿ ಕೊಟ್ಟ ಬಿಜೆಪಿ ಕೃಷ್ಣನ ಲೆಕ್ಕ ಸಿಬಿಐಗೆ ನೀಡಿ

MD Lakshminaryana on Operation Kamala
ಬೆಂಗಳೂರು, ಮೇ 21: ಆಪರೇಷನ್ ಕಮಲದ ಮೂಲಕ ಬಿಜೆಪಿ ನಡೆಸಿದ ಕುದುರೆ ವ್ಯಾಪಾರದ ಕುರಿತು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಯಡಿಯೂರಪ್ಪ ಅವರ ಬಲಗೈ ಬಂಟ ಎಂಡಿ ಲಕ್ಷ್ಮೀನಾರಾಯಣ್ ಅವರು ಕಳೆದ ವಾರ ಕೆಲವು ಮಾಹಿತಿಗಳನ್ನು ಮಾಧ್ಯಮಗಳಿಗೆ ಹೇಳಿದ್ದರು.

ಇದರ ಬಗ್ಗೆ ರಾಜ್ಯದಲ್ಲಿ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. 22 ಶಾಸಕರಿಗೆ ತಲಾ ಐದು ಕೋಟಿ ರು, ಬಿಬಿಎಂಪಿ ಚುನಾವಣೆಗೆ 60 ಕೋಟಿ ರೂಗಳನ್ನು ಬಿಜೆಪಿ ತನ್ನ ಬೊಕ್ಕಸದಿಂದ ಬಿಡುಗಡೆ ಮಾಡಿತ್ತು ಎಂದು ಲಕ್ಷ್ಮಿ ಹೇಳಿದ್ದರು.

ಆದರೆ, ಈ ಬಗ್ಗೆ ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂಪಿ ನಾಡಗೌಡ ಅವರು ಮಾತ್ರ ಕೂಗಾಡಿ, ರಾಜ್ಯ ಬಿಜೆಪಿಯಲ್ಲಿ ನೂರಾರು ಕೋಟಿ ರು. ಕಪ್ಪು ಹಣ ಹರಿದಾಡಿರುವುದು, ಗಣಿ ಹಗರಣ ಮತ್ತು ಡಿನೋಟಿಫಿಕೇಷನ್‌ ದಿಂದ ಬಂದ ಹಣವನ್ನು ಚುನಾವಣೆ, ಆಪರೇಷನ್ ಕಮಲಕ್ಕೆ ಸದ್ವಿನಿಯೋಗಿಸಿರುವುದು ಸ್ಪಷ್ಟವಾಗುತ್ತದೆ, ಈ ಲೆಕ್ಕಾಚಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದರು.

ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರನ್ನೂ ಸಿಬಿಐ ತನಿಖೆಗೊಳಪಡಿಸಬೇಕು ನಾಡಗೌಡ ಆಗ್ರಹಪಡಿಸಿದ್ದರು. ಅಷ್ಟು ಬಿಟ್ಟರೆ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿಕೆಗೆ ರಾಜಕೀಯ ಮಾರುಕಟ್ಟೆಯಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿರಲಿಲ್ಲ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಗೆ 25 ಕೋಟಿ ರು. ಹಾಗೂ ರಾಜ್ಯ ಬಿಜೆಪಿ ಕಚೇರಿ ನಿರ್ಮಾಣಕ್ಕೆ 10 ಕೋಟಿ ರು ಬಳಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರಾಗಿರುವ ಲಕ್ಷ್ಮೀನಾರಾಯಣ್ ಅವರು ಖಾಸಗಿ ವಾಹಿನಿಗೆ ನೀಡಿದ್ದ ಹೇಳಿಕೆ ಕೆಲಕಾಲ ಸಂಚಲನ ಉಂಟುಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+