ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ ಕಪಿಮುಷ್ಟಿಯಲ್ಲಿ ರಾಜ್ಯ ಬಿಜೆಪಿ: ಬಿಎಸ್‌ವೈ

By Srinath
|
Google Oneindia Kannada News

bjp-under-influence-of-ananthkumar-yeddyurappa
ಬೆಂಗಳೂರು, ಮೇ 19: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ಅನಂತಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅನಂತಕುಮಾರ್ ಪಕ್ಷವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ತಮ್ಮ ಸುತ್ತಮುತ್ತ ಇರುವ ಒಂದಿಬ್ಬರು ಸಂಸದರನ್ನು ಬಿಟ್ಟರೆ ರಾಜ್ಯದಿಂದ ಆಯ್ಕೆಗೊಂಡಿರುವ ಉಳಿದೆಲ್ಲ ಸಂಸದರನ್ನು ಮೂಲೆಗುಂಪು ಮಾಡಿದ್ದಾರೆ. ಸಂಸತ್ತಿನಲ್ಲಿ ಮಾತನಾಡುವುದಕ್ಕೆ ಅನಂತಕುಮಾರ್ ನಿಷ್ಠರಿಗೆ ಮಾತ್ರ ಸಾಧ್ಯವಾಗಿದೆ.

ಅನಂತ್ ತಮ್ಮದೇ ಕೋಟೆ ಕಟ್ಟಿಕೊಂಡಿದ್ದಾರೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಇದರಿಂದ ರಾಜ್ಯದಲ್ಲಿ ತಮ್ಮನ್ನು ಬಿಟ್ಟರೆ ಬೇರೊಬ್ಬ ನಾಯಕರು ಬೆಳೆಯಬಾರದು ಎಂಬುದು ಅನಂತಕುಮಾರ್ ಒಂದಂಶ ಕಾರ್ಯಕ್ರಮ

ಮಲ್ಲೇಶ್ವರಂನಲ್ಲಿರುವ ತಮ್ಮ ನೂತನ 'ಜನಸಂಪರ್ಕ' ಕಚೇರಿಯಲ್ಲಿ ಯಡಿಯೂರಪ್ಪ ಅವರು ಶನಿವಾರ 11.30ಕ್ಕೆ ನಡೆಸಿದ ಪತ್ರಿಕಾಗೋಷ್ಠಿಯ ಮತ್ತಷ್ಟು ವಿವರ:

ಪಕ್ಷದ ಹಿರಿಯ ನಾಯಕರ ಗಮನಕ್ಕೆ ಇದನ್ನು ತಂದಿದ್ದೇನೆ. ಆದರೆ ಬಿಜೆಪಿ ವರಿಷ್ಠರು ಇದಕ್ಕೆ ಜಾಣಗುರುಡುತನ ತೋರಿದೆ. ಈ ಸಂದಿಗ್ಧ ಕಾಲದಲ್ಲಿ ಅಟಲ್ ಬಿಹಾರಿ ಅವರ ನಾಯಕತ್ವ ಸ್ಥಾನವನ್ನು ತುಂಬಲು ಬೇರೊಬ್ಬ ನಾಯಕರನ್ನು ಹುಡುಕ ಬೇಕಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯಸಭೆ ಚುನಾವಣೆಯಲ್ಲೂ ಅನಂತ ಕೈಯಾಡಿಸಿದ್ದಾರೆ. ನಿರ್ಮಲಾ ಅಂತಹ ಪಕ್ಷ ನಿಷ್ಠರನ್ನು ಮೇಲ್ಮನೆಗೆ ಆರಿಸಿ ಕಳಿಸುವ ಬದಲು ರಾಮಕೃಷ್ಣಯ್ಯ ಅಂತಹ ಅಧಿಕಾರಿಗಳಿಗೆ ಮಣೆ ಹಾಕುತ್ತಿದ್ದಾರೆ. ಅನಂತ ಕುಮಾರ್ ಆಟಗಳಿಂದಾಗಿ ಅಡ್ವಾಣಿಯವರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಾಜಪೇಯಿ ಸ್ಥಾನವನ್ನು ಬೇರೊಬ್ಬರು ತುಂಬಬೇಕಾದ ಅನಿವಾರ್ಯ ಪರಿಸ್ಥಿತಿ ಪಕ್ಷಕ್ಕೆ ಎದುರಾಗಿದೆ.

ಗುಜರಾತಿನಲ್ಲಿ ಮೋದಿ ಆಡಳಿತವು ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕುತ್ತಿದೆ.

ನಾನು ಕಾಂಗ್ರೆಸ್ ಸೇರುವುದಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿ ಸೇರಿದಂತೆ ಪಕ್ಷದ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಜೂನ್ 1 ರಿಂದ ರಾಜ್ಯ ಪ್ರವಾಸಕ್ಕೆ ಹೊರಡುತ್ತಿದ್ದೇನೆ. ಪ್ರವಾಸ ಮುಗಿಸಿ ಬಂದ ಮೇಲೆ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವೆ.

English summary
B S Yeddyurappa who recently opened his office in Malleswaram on Thursday conducting Press Meet on May 19 at 11.30 in the same office. In the meet he strongly condemned BJP leader Ananth Kumar's behaviour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X