ಯಡಿಯೂರಪ್ಪ ಜಾಮೀನು ಅರ್ಜಿ ಮೇ.25ಕ್ಕೆ

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ರಜಾ ಪೀಠ ಇರುವುದರಿಂದ ಯಡಿಯೂರಪ್ಪ ಅವರು ಸಲ್ಲಿಸಿರುವ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಸಿಬಿಐ ಪರ ವಕೀಲರ ವಾದವನ್ನು ನ್ಯಾಯಾಲಯ ಎತ್ತಿ ಹಿಡಿಯಿತು.
ಸೋಮವಾರ(ಮೇ.21) ದಿಂದ ಸಿಬಿಐ ನ್ಯಾಯಾಲಯ ಎಂದಿನಂತೆ ಕಾರ್ಯನಿರ್ವಹಿಸಲಿದ್ದು ಆ ಪೀಠದ ಮುಂದೆ ಅರ್ಜಿ ಸಲ್ಲಿಸಲಿ ಎಂದು ರಜಾ ಕಾಲದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಬಿ. ಶಿವಲಿಂಗೇ ಗೌಡ ಅವರು ಸೂಚಿಸಿದರು. ಗುರುವಾರ (ಮೇ.17) ಸಿಬಿಐ ಪರ ವಕೀಲರು ಲಿಖಿತ ಆಕ್ಷೇಪಣಾ ಅರ್ಜಿ ಸಲ್ಲಿಸಿದರು. ಮುಂದಿನ ವಿಚಾರಣೆಯನ್ನು ಮೇ.25ಕ್ಕೆ ಮುಂದೂಡಲಾಗಿದೆ.
Mines and Minerals (Development and. Regulation) Act, ಐಪಿಸಿ ಸೆಕ್ಷನ್ 210, 409, 419 ಮತ್ತು 120-B(ಕ್ರಿಮಿನಲ್ ಸಂಚು) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ FIR ದಾಖಲಿಸಲಾಗಿದೆ.












Click it and Unblock the Notifications