ಪೆಟ್ರೋಲ್ ಬೆಲೆ ಏರಿಕೆ ಗ್ಯಾರಂಟಿ ಎಂದ ಪ್ರಣಬ್

ಇಂಧನ ದರ ಏರಿಕೆಗಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಸಲ್ಲಿಸಿರುವ ಮನವಿಗೆ ಸರ್ಕಾರ ಪುರಸ್ಕರಿಸುವ ಸಾಧ್ಯತೆ ನಿಚ್ಚಳವಾಗಿದೆ.
ರಾಜ್ಯ ಸಭೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯ ಸುಳಿವು ನೀಡಿದ ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ, "ಇಂಧನ ದರ ಏರಿಕೆ ನಿಯಂತ್ರಣ ಸಾಧ್ಯವಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಲೇಬೇಕು.
ಗ್ರಾಹಕರ ಮೇಲೆ ಮತ್ತೆ ಮತ್ತೆ ಹೊರೆ ಹಾಕಲು ಸರ್ಕಾರಕ್ಕೂ ಕಷ್ಟವಾಗುತ್ತದೆ. ಆದರೆ, ಹಣದುಬ್ಬರ ನಿಯಂತ್ರಣದ ಬಗ್ಗೆ ಕೂಡಾ ಯೋಚಿಸಬೇಕಿದೆ" ಎಂದಿದ್ದಾರೆ.
ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ಏರಿಕೆಯಾಗುವ ಸಾಧ್ಯತೆಯಿದೆ. ಸೀಮೆಎಣ್ಣೆ, ಅಡುಗೆ ಅನಿಲ ಬೆಲೆ ಏರಿಕೆ ಬಗ್ಗೆ ವಿಪಕ್ಷಗಳು, ಯುಪಿಎ ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ ಎರಡು ತಿಂಗಳಿನಿಂದ ತೈಲೋತ್ಪನ್ನಗಳ ಬೆಲೆ ಏರಿಸಿಲ್ಲ. ಇದು ಹೀಗೆ ಬಹುದಿನ ನಡೆಯುವುದು ಸಾಧ್ಯವಿಲ್ಲ. ಬೆಲೆ ಏರಿಸದಿದ್ದರೆ ಕಂಪನಿಗಳು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಐಓಸಿ ಚೇರ್ಮನ್ ಆರ್.ಎಸ್. ಬುಟೋಲಾ ಹೇಳಿದ್ದಾರೆ.












Click it and Unblock the Notifications