ಯಡಿಯೂರಪ್ಪ ಕುಟುಂಬ ಸಾಮೂಹಿಕ ಜಾಮೀನು ಅರ್ಜಿ
ಬೆಂಗಳೂರು,
ಮೇ.16: ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿಗೆ ತುತ್ತಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಂಧನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಅವರ ಕುಟುಂಬದವರು ಸಾಮೂಹಿಕವಾಗಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. id="toptextpromo">ಈ
ಬಗ್ಗೆ ಮಾಹಿತಿ ನೀಡಿದ ವಕೀಲ ಸಿದ್ಧಾರ್ಥ್ ಅವರು, ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ(ಮೇ.16) ರಂದು ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಯಡಿಯೂರಪ್ಪ ಅವರ್ ರೇಸ್ ಕೋರ್ಸ್ ನಿವಾಸದಲ್ಲಿ ಕಾನೂನು ತಜ್ಞರೊಡನೆ ಚರ್ಚೆ ನಡೆಸಲಾಗುತ್ತಿದೆ. ಜಾಮೀನು ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಅವರ ಮಗ ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ ಹಾಗೂ ಅಳಿಯ ಆರ್ ಎನ್ ಸೋಹನ್ ಕುಮಾರ್ ಅವರು ನಿರಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. Mines and Minerals (Development and. Regulation) Act, ಐಪಿಸಿ ಸೆಕ್ಷನ್ 210, 409, 419 ಮತ್ತು 120-B(ಕ್ರಿಮಿನಲ್ ಸಂಚು) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ FIR ದಾಖಲಿಸಲಾಗಿದೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ(XXI ಸಿಟಿ ಹಾಗೂ ಸೆಷನ್ಸ್)ದಲ್ಲಿ ನ್ಯಾ. ವೆಂಕಟ ಸುದರ್ಶನ್ ಅವರಿಗೆ FIR ಪ್ರತಿ ಸಲ್ಲಿಸಲಾಗಿದೆ.











Click it and Unblock the Notifications