ಮಾಯಾ ಆಪ್ತ ಚೆಡ್ಡಾ ಸದ್ಯಕ್ಕೆ 175 ಕೋಟಿ ತೂಗ್ತಾನೆ

ಸುಮಾರು 80ಕ್ಕೂ ಅಧಿಕ ಐಟಿ ಅಧಿಕಾರಿಗಳು ನೋಯ್ಡಾ, ದೆಹಲಿ, ಮುಂಬೈ ಹಾಗೂ ಪಂಜಾಬ್ ರಾಜ್ಯಗಳ ಸುಮಾರು 18ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ದಾಖಲೆಯನ್ನು ವಶಪಡಿಸಿಕೊಳ್ಳಕೊಂದಿದ್ದರು.
ಆದರೆ, ನೋಯ್ಡಾ ಮಾಲ್ ನ ನೆಲಮಾಳಿಗೆಯಲ್ಲಿ 200 ಕೋಟಿ ಬಚ್ಚಿಡಲಾಗಿದೆ ಎಂಬ ಮಾಹಿತಿಯೊಂದಿಗೆ ಮುಗಿಬಿದ್ದಿದ್ದ ಸಿಬಿಐ ಕೈಗೆ ಸಿಕ್ಕಿದ್ದು ಮಾತ್ರ 11 ಕೋಟಿ ರು ನಗದು.
ನಂತರ ಚೆಡ್ಡಾನ ಬ್ಯಾಂಕ್ ಶಾಶ್ವತ ಠೇವಣಿ, 13ಕ್ಕೂ ಅಧಿಕ ಬ್ಯಾಂಕ್ ಲಾಕರ್ ಗಳು, ಷೇರುಗಳತ್ತ ಗಮನ ಹರಿಸಿದ ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿದ ಮೊತ್ತದ ಮೊದಲ ಕಂತನ್ನು ಬಹಿರಂಗಪಡಿಸಿದೆ.ಉಳಿದ ಮೊತ್ತದ ಎಣಿಕೆ ಇನ್ನೂ ನಡೆದಿದೆ. ಚೆಡ್ಡಾ ಮೇಲಿನ ತನಿಖೆ ಪೂರ್ಣಗೊಳ್ಳುವ ಹೊತ್ತಿಗೆ ಚೆಡ್ಡಾನಿಂದ ಲಾಭಪಡೆದ ಮಯಾವತಿ ಮುಂತಾದ ರಾಜಕಾರಣಿಗಳಿಗೂ ಬಿಸಿ ಮುಟ್ಟುವ ಸಾಧ್ಯತೆಗಳಿದೆ.












Click it and Unblock the Notifications