• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಹೋದ್ಯೋಗಿ ಮೇಲೆ ಬಾಸ್ ಅತ್ಯಾಚಾರ

By Srinath
|
ಜೈಪುರ, ಮೇ 12: ಒಂದು ವರ್ಷದ ಹಿಂದೆ ಉದ್ಯೋಗವನ್ನರಸಿ ರಾಷ್ಟ್ರದ ರಾಜಧಾನಿಯಿಂದ ಇಲ್ಲಿಗೆ ಬಂದಿದ್ದ ಯುವತಿಯ ಮೇಲೆ ಸ್ಥಳೀಯ ಕಂಪನಿಯೊಂದರ ಬಾಸ್ ನಾಲ್ಕು ತಿಂಗಳ ಕಾಲ ರೇಪ್ ಮಾಡಿ, ಆಕೆಯನ್ನು ಗರ್ಭಿಣಿಯಾಗಿಸಿದ್ದಾನೆ. ಆ ನಂತರ ತನ್ನ ಕುಕೃತ್ಯ ಬಯಲಾಗುತ್ತದೆ ಎಂದು ಆತಂಕಕ್ಕೊಳಗಾಗಿ ಆಕೆಗೆ ಗರ್ಭಪಾತವನ್ನೂ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಾಧಿತೆ ಮೂಲತಃ ದೆಹಲಿ ನಿವಾಸಿ. 22 ವರ್ಷದ ಸೀಮಾ ಶರ್ಮಾ ಹೇಳುವಂತೆ ಆಕೆಯ ಬಾಸ್ ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿದ್ದಾನೆ. ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದರ ಬಾಸ್ ಸಲ್ಮಾನ್ ಖಾನ್ ವಿರುದ್ಧ ಜೈಪುರದ ಲಾಲ್ ಕೋಠಿ ಪೊಲೀಸ್ ಠಾಣೆಗೆ ಸೀಮಾ ದೂರು ನೀಡಿದ್ದಾರೆ. ಸಲ್ಮಾನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಉದ್ಯೋಗಕ್ಕಾಗಿ ಜೈಪುರಕ್ಕೆ ಬಂದಾಗ ಸದರಿ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿ ನಾನು ಸಲ್ಮಾನ್ ಗೆಳೆಯರಾದೆವು. ಒಮ್ಮೆ ಪಾರ್ಟಿಯೊಂದಕ್ಕೆ ಹೋಗಿದ್ದಾಗ ಸಲ್ಮಾನ್ ನನಗೆ ಮತ್ತು ಬರಿಸುವ ಪಾನೀಯ ನೀಡಿ, ಪ್ರಜ್ಞೆ ತಪ್ಪಿಸಿದ. ಆ ವೇಳೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಸೀಮಾ ದೂರಿನಲ್ಲಿ ಹೀಗೆ ಹೇಳಿದ್ದಾರೆ: ಅತ್ಯಾಚಾರ ಘಟನೆಯ ಬಳಿಕ ಸಲ್ಮಾನ್ ನಾವು ಮದುವೆಯಾಗೋಣ ಎಂದು ಹೇಳಿದ. ನಾವಿಬ್ಬರೂ ಒಂದಾಗಿರೋಣವೆಂದು ಪುಸಲಾಯಿಸಿದ. ಮುಂದೆ ನಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕ ಮುಂದುವರಿಯಿತು. ಮುಂದೆ ಅವನು ನನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿ, ಅವನ ಜತೆ ಮುಂಬೈ, ಚಂಡೀಗಢ, ಜಮ್ಮು ಅಲ್ಲಿ ಇಲ್ಲಿ ಸುತ್ತಾಡಿದೆ.

ನಂತರ ನಾಲ್ಕು ತಿಂಗಳ ಬಳಿಕ 2011ರ ನವೆಂಬರಿನಲ್ಲಿ ನಾನು ದೆಹಲಿಯಲ್ಲಿರುವ ನನ್ನ ಮನೆಗೆ ವಾಪಸಾದೆ. ಆದರೆ ಫೋನ್ ಮೂಲಕ ಅವನ ಜತೆ ಸತತವಾಗಿ ಸಂಪರ್ಕದಲ್ಲಿದೆ. ನನ್ನನ್ನು ಮದುವೆಯಾಗು ಎಂದು ಅನೇಕ ಬಾರಿ ಅವನನ್ನು ಕೇಳಿಕೊಂಡೆ.

ಈ ಮಧ್ಯೆ, ನಾನು ಗರ್ಭಿಣಿಯಾಗಿರುವುದು ಅರಿವಿಗೆ ಬಂದಿತು. ಆಗ ಸಲ್ಮಾನ್, ನನ್ನ ಮನೆಯವರನ್ನು ಸಂಪರ್ಕಿಸಿ, ವಿಶ್ವಾಸದ ಮಾತುಗಳನ್ನಾಡುತ್ತಾ ನನ್ನ ಗರ್ಭವನ್ನು ತೆಗದುಹಾಕಿಸಿದ. ಆಗ ಅವನು ವಿವಾಹಿತನಾಗಿದ್ದು, ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟಿನಲ್ಲಿ ಅರ್ಜಿ ಹಾಕಿರುವುದು ತಿಳಿದುಬಂದಿತು.

ಕಾನೂನುಬಾಹಿರವಾಗಿ ಗರ್ಭ ತೆಗೆಸಿರುವುದು ಮತ್ತು ಅತ್ಯಾಚಾರ ಪ್ರಕರಣಗಳಡಿ ಪೊಲೀಸರು ಈಗ ಸಲ್ಮಾನನನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಅತ್ಯಾಚಾರ ಸುದ್ದಿಗಳುView All

English summary
A Delhi-resident, 22-year-old Seema Sharma, who had gone to Jaipur to work in an event management company last year alleged that her boss Salman Khan (22), raped her for four months. And when he got her pregnant, she says, he even got her abortion done. Following the complaint police have registered a case of rape and illegal termination of pregnancy against the accused.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more