ಬಿಎಸ್‌ವೈ ಸಿಬಿಐ ತನಿಖೆಗೆ ಲಾಯಕ್ಕು: ಏನು ಲಾಜಿಕ್ಕು?
ನವದೆಹಲಿ, ಮೇ11: ಇದು ನಾಡಿನ ಬಹಳಷ್ಟು Law ಪಂಡಿತರ ಲಾಜಿಕ್ಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ಆಗಬೇಕು. ಮತ್ತು ಅವರು ಈ ನಾಡಿನ ಮೇಲೆ ಎಸಗಿರುವ ಅಪರಾಧಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದಾರೆ?
ಸದ್ಯಕ್ಕಂತೂ ಸರ್ವೋಚ್ಚ ನ್ಯಾಯಾಲಯದ ಜಡ್ಜುಗಳು ಪ್ರಕರಣ ಆಲಿಸುತ್ತಾ ಹೇಳಿರುವ ಮಾತುಗಳು, ಅವರ observationಗಳನ್ನು ನೋಡಿದರೆ ಆ ಸಿದ್ದೇಶ್ವರನೇ ಬಂದರೂ ಕಾಪಾಡಲಾರ ಅನಿಸುತ್ತಿದೆ.

ಅಲ್ರಿ, ಖುದ್ದು ಸರ್ವೋಚ್ಚ ಜಡ್ಜುಗಳು ಅಂತಹ observationಗಳನ್ನು ಮಾಡಿರುವಾಗ ತನಿಖೆಯನ್ನು ಕೈಗೆತ್ತಿಕೊಳ್ಳುವ CBI ಕಣ್ಮುಚ್ಚಿಕೊಂಡು ತನಿಖೆ ಮಾಡುತ್ತದಾ? ತನಿಖೆಗೂ ಮುನ್ನವೇ ಜಡ್ಜುಗಳು ಅಂತಹ ಟಿಪ್ಪಣಿಗಳು ಮಾಡಿರುವಾಗ ನಾಳೆ ನಾವು ತನಿಖೆ ಮುಗಿಸಿ, 'ಇಲ್ಲ. ಆರೋಪಿಗಳದು ಏನೂ ತಪ್ಪಿಲ್ಲ' ಅಂತ ಹೇಳಿದರೆ ಕೋರ್ಟ್ CBIಅನ್ನು ಸುಮ್ನೆ ಬಿಟ್ಟುಬಿಡುತ್ತದಾ? ನ್ಯಾಯದೇವತೆಯೇನು ಕಣ್ಣಿಗೆ ಕಪ್ಪು ಬಟ್ಟೆ ಸುತ್ತಿಕೊಂಡು ಹಾಗೇ ಇರುತ್ತಾಳಾ?' ಎಂದು ನಾಡಿನ ಪ್ರಕಾಂಡ ಪಂಡಿತರು ತಲೆಗೊಂದರಂತೆ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು, ಜನಸಾಮಾನ್ಯರೋ... ಅದೆಲ್ಲಿತ್ತೋ ಅನ್ಯಾಯ ವಿರುದ್ಧದ ಅವರ ಆಕ್ರೋಶ. ಯಡಿಯೂರಪ್ಪ ವಿರುದ್ಧ ಒಂದೇ ಸಮನೆ ಕಿಡಿಕಾರುತ್ತಿದ್ದಾರೆ. ನೆನಪಿರಲಿ. ಇವರು ಯಾರೂ ಕಾನೂನುಬಲ್ಲ ಅಥವಾ ರಾಜಕೀಯ ಪ್ರೇರಿತ ಮಂದಿ ಅಲ್ಲ. ಅನ್ಯಾಯದ ವಿರುದ್ಧ ಆಕ್ರೋಶ ಹೊಂದಿರುವವರು.












Click it and Unblock the Notifications