• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಸ್‌ವೈ ಪ್ರಕರಣ: ಜಡ್ಜುಗಳು ಏನಂದ್ರು ಗೊತ್ತಾ?

By Srinath
|

ನವದೆಹಲಿ, ಮೇ11: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತನಿಖೆಗೆ ಅಸ್ತು ಎಂದು ಸುಪ್ರೀಂಕೋರ್ಟ್ ಒಂದು ಹಂತ ದಾಟಿದೆ. ಈ ಹಂತದಲ್ಲಿ ಸರ್ವೋಚ್ಚ ನ್ಯಾಯಾಲಯದ ಜಡ್ಜುಗಳು ಪ್ರಕರಣ ಆಲಿಸುತ್ತಾ ಏನಂದರು ಗೊತ್ತಾ?

ಕೊನೆಯವರೆಗೂ ಚಾಚೂ ತಪ್ಪದೆ ಓದಿಕೊಳ್ಳಿ: ಕಳೆದ ಶುಕ್ರವಾರ ಸುಪ್ರೀಂಕೋರ್ಟಿಲ್ಲಿ ನ್ಯಾಯವಾದಿ ವಿ. ಗಿರಿ ಅವರು ತಮ್ಮ ಕಕ್ಷಿದಾರರ ಯಡಿಯೂರಪ್ಪ ಪರ ಪ್ರತಿವಾದ ಮಂಡಿಸುತ್ತಿದ್ದರು.


ಗಿರಿ: ಮೈ ಲಾರ್ಡ್... CECಯೇನೋ CBI ತನಿಖೆಯಾಗಬೇಕು ಎಂದು ಹೇಳುತ್ತಿದೆ. ಆದರೆ ಒಬ್ಬ special judge ನಿರ್ದೇಶನದ ಮೇರೆಗೆ ಈಗಾಗಲೇ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಅಂತಹುದರಲ್ಲಿ CEC ಶಿಫಾರಸ್ಸು ಮಾಡಿದಂತೆ ಮತ್ತೆ CBI ತನಿಖೆ ಏಕೆ? ಎಂದು ಕೋರ್ಟಿನ ಗಮನ ಸೆಳೆದರು.

ಕೋರ್ಟ್: ಹಾಗಂದಿದ್ದೇ ತಡ ಕೆಂಡಾಮಂಡಲವಾದ ಸುಪ್ರೀಂ ಪೀಠವು 'ಕಣ್ಣೆದುರಿಗೇ ಕಾಣುವಂತೆ ತನಿಖೆಗೆ ಅರ್ಹವೆನಿಸುವ ಹಾಗೆ ದಾಖಲೆಗಳ ರಾಶಿ ಬಿದ್ದಿದೆ. ಹಾಗಿರುವಾಗ ಕೋರ್ಟ್ ಕಣ್ಮುಚ್ಚಿಕೊಂಡಿರಬೇಕಾ? ಕೋರ್ಟ್ ಎದುರಿಗಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಕರ್ನಾಟಕ ಭೂಸ್ವಾಧೀನ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಕಣ್ಣಿಗೆ ರಾಚುತ್ತಿದೆ. ಹೇಳಿ ನಾವು ಸುಮ್ಮನಿರಬೇಕಾ?

ಗಿರಿ: ಹಾಗಲ್ಲಾ... ಈ ಹಿಂದೆ ಕರ್ನಾಟಕದ ಮಾಜಿ ಲೋಕಾಯುಕ್ತರೂ ಹೀಗೇ ಸಿಬಿಐ ತನಿಖೆಯಾಗಲಿ ಎಂದಿದ್ದರು. CEC ವಾದವೂ ಹಾಗೇ ಇದೆ. ಆದರೆ ಕರ್ನಾಟಕ ಹೈಕೋರ್ಟ್ ಮಾಜಿ ಲೋಕಾಯುಕ್ತರ ಸಲಹೆಯನ್ನು ತಿರಸ್ಕರಿಸಿತ್ತು. ಈಗ ಅದೇ ಪ್ರಕರಣವನ್ನು ಸಿಬಿಐನಂತಹ ಸಂಸ್ಥೆಯು ತನಿಖೆ ಕೈಗೆತ್ತಿಕೊಳ್ಳುವುದರ ಔಚಿತ್ಯವಾದರೂ ಏನು?

ಅಷ್ಟೇ ಅಲ್ಲ. ನಮ್ಮ ದೇಶ ಒಕ್ಕೂಟ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಆಯಾ ರಾಜ್ಯಗಳ ಅಧೀನಕ್ಕೆ ಒಳಪಡುತ್ತದೆ. ಒಂದು ವೇಳೆ ಸಂಬಂಧಪಟ್ಟ ರಾಜ್ಯ ತನ್ನ ಜವಾಬ್ದಾರಿಯಿಂದ ಹಿಂದೆಸರಿದಾಗ ಸರ್ವೋಚ್ಛ ನ್ಯಾಯಾಲಯ ಮಧ್ಯಪ್ರವೇಶಿಸಬಹುದು. ಹಾಗಿರುವಾಗ... ಎಂದು ಕೋರ್ಟಿಗೆ ಓನಾಮಗಳನ್ನು ಹೇಳಿಕೊಡುತ್ತಾ?

Justice Alam: ಕೆಂಡಾಮಂಡಲರಾಗುತ್ತಾ... Chief Justice Kapadia ಅವರು ಈ ಹಿಂದೆ ಮಾಡಿದ್ದ ಟಿಪ್ಪಣಿಯನ್ನು ವ್ಯಾಖ್ಯಾನಿಸುತ್ತಾ ... 'ನಾವೂ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸುವಂತಹ ಕೆಟ್ಟ ವಾತಾವರಣ ಸೃಷ್ಟಿಸಬೇಡಿ. ಯಾವುದೇ ತನಿಖಾ ಸಂಸ್ಥೆಯೂ ಈ ಪ್ರಕರಣದ ವಿರುದ್ಧ ತನಿಖೆ ನಡೆಸಬಾರದು ಅಂತೇನಾದರೂ ಹೇಳಿದೆಯಾ ಮಿಸ್ಟರ್ ಗಿರಿ?' ಎಂದು ತರಾಟೆಗೆ ತೆಗೆದುಕೊಂಡರು.

ಪೀಠದ ಮತ್ತೊಬ್ಬ ನ್ಯಾಯಮೂರ್ತಿ ನ್ಯಾ. ಸ್ವತಂತ್ರಕುಮಾರ್ ಅವರು ಹೇಳಿರುವಂತೆ CEC report ಎತ್ತಿರುವ ವಿಷಯಗಳೆಲ್ಲ ಒಂದಕ್ಕೊಂದು ಸಂಬಂಧ ಹೊಂದಿದೆ. ಆದ್ದರಿಂದ ತನಿಖೆ ನಡೆಸುವುದು ಅತ್ಯವಶ್ಯ.

Chief Justice Kapadia: ನಾವು ಹೀಗೇ ಪ್ರಶ್ನೆಗಳನ್ನು ಕೇಳುತ್ತಾ ನಿಮ್ಮನ್ನು ಆಲಿಸುತ್ತಿರಬೇಕಾ? ಈ ಹಂತದಲ್ಲಿ ಆರೋಪಿಯ ಮಾತುಗಳನ್ನು (ನಿಮ್ಮ ಮುಖಾಂತರ) ನಾವು ಕೇಳಬೇಕಾ? ಅದಕ್ಕೆ ಅವಕಾಶ ನೀಡಿದರೆ ಅದು ನಿಜಕ್ಕೂ ಅಪಾಯಕಾರಿ ಪ್ರವೃತ್ತಿಯಾಗುತ್ತದೆ.

ಅದೆಲ್ಲ ಒತ್ತಟ್ಟಿಗಿರಲಿ. CEC report ಪಕ್ಕಕ್ಕಿಡಿ. ಇಲ್ಲಿ ಕಣ್ಣೆದುರಿಗಿರುವ ದಾಖಲೆಗಳನ್ನು ನೋಡಿ ಮಾತನಾಡ್ರಿ? ಈ ದಾಖಲೆಗಳನ್ನು ನೋಡಿಯೇ ನಾವು ತನಿಖೆಗೆ ಆದೇಶಿಸಬಹುದಲ್ವಾ? ಎಂದು ಕೊನೆಗೊಮ್ಮೆ ಗಿರಿಯತ್ತ ಕೆಂಗಣ್ಣು ಬೀರಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Supreme Court orders CBI enquiry against BS Yeddyurappa in Kick Back Scam. Courts observations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more