ಕಣ್ಮರೆಯಾಗಿದ್ದ ವಿಮಾನ ನುಚ್ಚುನೂರು: 47 ಸಾವು

ಉದ್ಯಮಿಗಳು, ರಾಜತಾಂತ್ರಿಕರು ಮತ್ತು ಪತ್ರಕರ್ತರೂ ಸೇರಿದಂತೆ 47 ಜನರನ್ನು ಹೊತ್ತೂಯ್ಯುತ್ತಿದ್ದ ರಷ್ಯಾದ ನಾಗರಿಕ ವಿಮಾನ ಬುಧವಾರ ಇಂಡೋನೇಷ್ಯಾದಲ್ಲಿ ಇದ್ದಕಿದ್ದಂತೆ ನಾಪತ್ತೆಯಾಗಿತ್ತು. ಹಾರಾಟ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಪೈಲಟ್ ವಿಮಾನವನ್ನು 3000 ಮೀಟರ್ ನಿಂದ 1800 ಮೀಟರ್ ಎತ್ತರಕ್ಕೆ ಇಳಿಸಲು ಟ್ರಾಫಿಕ್ ಕಂಟ್ರೋಲ್‌ನಿಂದ ಅನುಮತಿ ಕೋರಿದ್ದ. ಹೀಗೆ ಅನುಮತಿ ಕೋರುತ್ತಿರುವ ಸಂದರ್ಭದಲ್ಲಿಯೇ ವಿಮಾನ ರಾಡಾರ್ ಕಣ್ಣಿನಿಂದ ತಪ್ಪಿಸಿಕೊಂಡಿತು. ಆಮೇಲೆ ಆದರ ಯಾವುದೇ ಮಾಹಿತಿ ದೊರೆತಿರಲಿಲ್ಲ.
ಎರಡು ದಶಕಗಳ ಹಿಂದೆ (1991) ಸೋವಿಯತ್ ಒಕ್ಕೂಟ ಛಿದ್ರವಾದ ಬಳಿಕ ರಷ್ಯಾ ನಿರ್ಮಿಸಿದ ಮೊದಲ ನಾಗರಿಕ ವಿಮಾನ ಇದಾಗಿತ್ತು. ಅಪಘಾತಕ್ಕೆ ತಾಂತ್ರಿಕ ದೋಷವಾ ಅಥವಾ ಹವಾಮಾನವಾ ಅಥವಾ ಪೈಲಟ್ ಪ್ರಮಾದವಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ನಾಪತ್ತೆಯಾದ ವಿಮಾನ ಪತ್ತೆ ಹಚ್ಚಲು ಸಲಾಕ್ ಪರ್ವತ ಪ್ರದೇಶಕ್ಕೆ ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಗಿತ್ತಾದರೂ, ಹವಾಮಾನ ವೈಪರೀತ್ಯದಿಂದಾಗಿ ಅವು ಕಾರ್ಯಾಚರಣೆ ಸ್ಥಗಿತಗೊಳಿಸಿ ಹಿಂದಿರುಗಿದ್ದವು. ಗುರುವಾರ ಬೆಳಗ್ಗೆ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಯಾವೊಬ್ಬ ಪ್ರಯಾಣಿಕರೂ ಬದುಕುಳಿದಿರುವ ಸಾಧ್ಯತೆಗಳು ಇಲ್ಲವಾಗಿವೆ ಎಮದು ಅಧಿಕೃತ ಮೂಲಗಳು ತಿಳಿಸಿವೆ.












Click it and Unblock the Notifications