ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯೇ ಹೀಗೆ ನಡೆದುಕೊಂಡರೆ ಹೇಗೆ?

By Srinath
|
Google Oneindia Kannada News

pak-pm-yousaf-gilani-on-verge-of-disqualification
ಇಸ್ಲಾಮಾಬಾದ್‌, ಮೇ 9: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪಾಕಿಸ್ತಾನದ ಪ್ರಧಾನಿ ಗಿಲಾನಿ ತಪ್ಪಿತಸ್ಥರು ಎಂದು ಪಾಕ್ ಕೋರ್ಟ್ ಕಳೆದ ವಾರ ತೀರ್ಪು ನೀಡಿದ್ದೇ ಬಂತು ಗಿಲಾನಿ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆಗಳ ಸುರಿಮಳೆಯಾಗುತ್ತಿದೆ. ಸುಪ್ರೀಂಕೋರ್ಟ್‌ ಮತ್ತೊಮ್ಮೆ ಪ್ರಧಾನಿ ಗಿಲಾನಿ ವಿರುದ್ಧ ಕಿಡಿಕಾರಿದ್ದು, ಗಿಲಾನಿ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿಕೊಂಡಿದ್ದಾರೆ.

ಪ್ರಧಾನಿ ಗಿಲಾನಿ ವಿರುದ್ಧದ ಪ್ರಕರಣ ಆಲಿಸಿದ ಸುಪ್ರೀಂಕೋರ್ಟ್‌, ಗಿಲಾನಿ ಪ್ರಜ್ಞಾಪೂರ್ವಕವಾಗಿ ಪದೇಪದೆ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ನ್ಯಾಯಾಂಗವನ್ನು ಲೇವಡಿ ಮಾಡಿದ್ದಾರೆಂದು ಹೇಳಿದೆ. ಇದರಿಂದ, ಖುದ್ದು ಪ್ರಧಾನಿಯೇ ಹೀಗೆ ನಡೆದುಕೊಂಡರೆ ಹೇಗೆ? ಎಂದು ಜನ ಕೇಳುತ್ತಿದ್ದಾರೆ.

ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ವಿರುದ್ಧ ಸ್ವಿಟ್ಸರ್ಲೆಂಡಿನ‌ಲ್ಲಿ ದಾಖಲಾಗಿರುವ money laundering ಪ್ರಕರಣಗಳ ತನಿಖೆ ನಡೆಸಲು ನೀಡಿದ ಆದೇಶಗಳನ್ನು ಉಲ್ಲಂಘಿಸಿ ನ್ಯಾಯಾಲಯ ನಿಂದನೆ ಎಸಗಿದ ಕೇಸಿನ ತೀರ್ಪನ್ನು ನ್ಯಾ. ನಾಸಿರ್‌-ಉಲ್‌-ಮುಲ್ಕ್ ನೇತೃತ್ವದ ಏಳು ಸದಸ್ಯರ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ. 77 ಪುಟಗಳ ವಿವರವಾದ ಈ ತೀರ್ಪಿನಲ್ಲಿ ಗಿಲಾನಿಯನ್ನು ಅನರ್ಹಗೊಳ್ಳುವ ಸಾಧ್ಯತೆ ಗೋಚರಿಸಿದೆ.

ಕೋರ್ಟ್ ತೀರ್ಪಿನ ಪ್ರಕಾರ ಗಿಲಾನಿ ಸಂಸತ್ ಸದಸ್ಯತ್ವಕ್ಕೆ ಕನಿಷ್ಠ ಐದು ವರ್ಷ ಬ್ರೇಕ್ ಬೀಳಲಿದೆ. ಇದರಿಂದ ಗಿಲಾನಿಯನ್ನು ಪ್ರಧಾನಿ ಸ್ಥಾನದಿಂದ ಅನರ್ಹಗೊಳಿಸಲು ಅವಕಾಶವಿದೆ.

ನ್ಯಾಯಪೀಠ ಗಿಲಾನಿಯನ್ನು ದೋಷಿ ಎಂದು ತೀರ್ಮಾನಿಸಿರುವ ಕಾರಣಗಳನ್ನು ಪಟ್ಟಿ ಮಾಡಿದ್ದು, ವಿಚಾರಣೆ ಸಂದರ್ಭದಲ್ಲಿ ಹಾಜರುಪಡಿಸಿದ ಪುರಾವೆಗಳನ್ನು ವಿಶ್ಲೇಷಿಸಿದೆ. ಅಧಿಕಾರದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಹೀಗೆ ಕಾನೂನು ಉಲ್ಲಂಘನೆಯಾಗಿರುವುದರಿಂದ ದೇಶದ ನ್ಯಾಯಾಂಗ ವ್ಯವಸ್ಥೆ ಹಾಸ್ಯಾಸ್ಪದವಾಗಿದೆ ಎನ್ನಲಾಗಿದೆ.

ಗಿಲಾನಿ ಕೇಸು ಇನ್ನೂ ನ್ಯಾಶನಲ್‌ ಅಸೆಂಬ್ಲಿ ಅಥವಾ ಸಂಸತ್ತಿನ ಕೆಳಮನೆಯ ಸ್ಪೀಕರ್‌ ಬಳಿಗೆ ಹೋಗಲಿದೆ ಎಂದು ಇದೇ ವೇಳೆ ಮಾಜಿ ಕಾನೂನು ಸಚಿವ ವಾಸಿಂ ಜಾಫ‌ರ್‌ ಹೇಳಿದ್ದಾರೆ. ಸ್ಪೀಕರ್‌ ಕೇಸನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ಕಳುಹಿಸಲು ತೀರ್ಮಾನಿಸಿದರೆ ಅಂತಿಮವಾಗಿ ಗಿಲಾನಿ ಭವಿಷ್ಯ ಆಯುಕ್ತರ ಕೈಯಲ್ಲಿರುತ್ತದೆ.

English summary
Pakistan prime minister Yousuf Raza Gilani faces the prospect of being disqualified as an MP for five years after Pakistan's Supreme Court ruled on Tuesday (May 8) that he "wilfully, deliberately and persistently" defied the highest court and brought the judiciary into "ridicule".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X