ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೆಸ್ ಹೇಗಾದರೂ ಇರಲಿ ನೀವು 'ಅದನ್ನು' ಮಾಡಬೇಡಿ

By Srinath
|
Google Oneindia Kannada News

dont-tell-me-how-to-dress-tell-them-not-to-molest
ನವದೆಹಲಿ,ಮೇ 7: ಹೆಣ್ಣೆಂದರೆ ಬಾಯ್ಬಿಡುವ ಗಂಡುಗೋವಿಗಳಾ... ನಾವು ಹೇಗಾದರೂ ಡ್ರೆಸ್ ಮಾಡ್ಕೋತೀವಿ, ನಮ್ಮ ವಸ್ತ್ರಸಂಹಿತೆಯನ್ನು ಕೇಳೋಕ್ಕೆ ನೀವ್ಯಾರು. ಮೊದಲು ನಿಮ್ಮಲ್ಲಿ ಸಂಯವಿರಲಿ. ನೀವು ಅತ್ಯಾಚಾರ ಮಾಡಕ್ಕೆ ಬರಬೇಡಿ, ಅಷ್ಟೇ... ಎಂದು ರಾಜಧಾನಿಯ ಮಂಡಿ ಹೌಸ್ ಸ್ಟೇಷನ್ ಎದುರು ಜಮಾಯಿಸಿದ್ದ ಮಹಿಳಾಮಣಿಗಳು ಘೋಷಣೆ ಕೂಗಿದ್ದಾರೆ. ಅವರ ಕೈಯಲ್ಲಿದ್ದ ಘೋಷಣಾಪತ್ರಗಳೂ ಇದನ್ನೇ ಸಾರಿ ಹೇಳಿವೆ.

'Don't tell me how to dress, tell them not to rape': ಹೀಗೆ ಹೇಳಲು ಅವರಿಗಿದ್ದ ಸಕಾರಣವೆಂದರೆ ರಾಷ್ಟ್ರದ ರಾಜಧಾನಿ ಪ್ರದೇಶದಲ್ಲಿ (National Capital Region) ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ರಾತ್ರಿ ಹಾಗಿರಲಿ, ಬೆಳಗಿನ ವೇಳೆಯೇ ನಡೆದಾಡುವುದು ದುಸ್ತರವಾಗಿದೆ. ಯಾವ ಕ್ಷಣದಲ್ಲಿ ಯಾವ ಕಾಮಾಂಧನಿಗೆ ಆಹುತಿಯಾಗಬೇಕೋ ಎಂಬ ಭಯದಲ್ಲೇ ಮಹಿಳೆಯರು ಹೆಜ್ಜೆಹಾಕುತ್ತಿದ್ದಾರೆ.

ಅತ್ಯಾಚಾರಿಗಳ ಪಾಲಿನ ಸ್ವರ್ಗ: 2011ರಲ್ಲಿ ರಾಜಧಾನಿಯಲ್ಲಿ ಬರೋಬ್ಬರಿ 465 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೆಳಕಿಗೆ ಬಾರದ ಪ್ರಕರಣಗಳು ಇನ್ನೆಷ್ಟೋ? ಈ ಸಂಖ್ಯೆ ಕಳೆದ ಮೂರು ವರ್ಷಗಳಿಂದ ಸತತ ಏರಿಕೆಯಲ್ಲೇ ಇದೆ. ರಾಷ್ಟ್ರದ ರಾಜಧಾನಿ ಅತ್ಯಾಚಾರಿಗಳ ಪಾಲಿನ ಸ್ವರ್ಗ, ಅತ್ಯಾಚಾರಿಗಳ ರಾಜಧಾನಿ ಎಂಬ ಹಣೆಪಟ್ಟಿಗೂ ಅರ್ಹವಾಗುವ ಅಪಾಯಗಳಿವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

ವಿಭಿನ್ನ ಸಂಘಸಂಸ್ಥೆಗಳು, ಅಪಾರ ಸಂಖ್ಯೆಯ ಜನರು ಮಹಿಳಾಮಣಿಗಳ ಭಾರಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಪೊಲೀಸರು ಅತ್ಯಾಚಾರ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳು, ಅತ್ಯಾಚಾರ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಬಿಗಿ ನಿಲುವು ತಾಳಬೇಕೆಂದು ಪ್ರತಿಭಟನಾಕಾರರು ದೆಹಲಿ ಆಡಳಿತವನ್ನು ಆಗ್ರಹಿಸಿದ್ದಾರೆ. ಆ ಸಂದರ್ಭದಲ್ಲಿ Don't tell me how to dress, tell them not to rape ಎಂದು ಪೊಲೀಸರಿಗೆ ಒತ್ತಾಯಪೂರ್ವಕವಾಗಿ ಹೇಳಿದ್ದಾರೆ.

English summary
Dont tell me how to dress- tell them not to molest - read the placards held by citizens, activists and NGOs gathered together outside Mandi House Station in protest against the relenteless stream of rape cases that have rocked the National Capital Region Delhi in recent times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X