ಬಿಎಸ್ ಆರ್ ಪಕ್ಷದಿಂದ ಸ್ಪರ್ಧಿಸುವೆ: ಕೆಎಂಎಫ್ ರೆಡ್ಡಿ

ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ನೀಡಿದ್ದ ನೋಟಿಎಸ್ ಗೆ ಕ್ಯಾರೇ ಎನ್ನದೆ ಶ್ರೀರಾಮುಲು ಪರ ನಿಂತಿರುವ ಸೋಮಶೇಖರ ರೆಡ್ಡಿ ಈಗ ಒಂದು ಹೆಜ್ಜೆ ಮುಂದಿಟ್ಟು ಮುಂದಿನ ಚುನಾವಣೆಯಲ್ಲಿ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.
ಅನುಭವ ಮಂಟಪ-ಆಡಳಿತ ಸೌಧದವರೆಗೂ 54 ದಿನಗಳ ಕಾಲ ಒಟ್ಟು 921ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿುವ ಬಳ್ಳಾರಿ ಶಾಸಕ ಶ್ರೀರಾಮುಲು ಅವರಿಗೆ ಸಂಪೂರ್ಣ ಬೆಂಬಲ ನೀಡಿರುವ ಸೋಮಶೇಖರ ರೆಡ್ಡಿ ತಮ್ಮ ನಿಷ್ಠೆ ಯಾರ ಪರ ಇದೆ ಎಂಬದನ್ನು ಸ್ಪಷ್ಟಪಡಿಸಿದ್ದಾರೆ.
ನಾನು ಬಾಹ್ಯವಾಗಿ ಬಿಜೆಪಿ ಪಕ್ಷದಲ್ಲಿದ್ದೇನೆ ಅಷ್ಟೇ. ಆದರೆ ಮಾನಸಿಕವಾಗಿ ಶ್ರೀರಾಮಲು ಅವರ ಬಿಎಸ್‌ಆರ್ ಪಕ್ಷದಲ್ಲಿದ್ದೇನೆ. ಬಿಜೆಪಿಯ ಕೆಲ ಹಿರಿಯ ನಾಯಕರು ನಮ್ಮನ್ನು ನಡೆಸಿಕೊಂಡ ರೀತಿ ಕೊಟ್ಟ ಮಾನಸಿಕ ಹಿಂಸೆ ಮರೆಯಲು ಸಾಧ್ಯವಿಲ್ಲ. ಕರುಣಾಕರ ರೆಡ್ಡಿ ಅವರೊಡನೆ ಭಿನ್ನಾಭಿಪ್ರಾಯವಿಲ್ಲ ಎಂದು ಸೋಮಶೇಖರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications